ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ನೆಯ ಪ್ರಕರಣ- ಸುಂದರ ಭವನ. ለለለለለሌለለለ \\ /\Ars h*. ೧೧nAn೧AANMAM ಯನು ವಿಲಾಯತಿಯಲ್ಲಿ ಶಿಕ್ಷಣವನ್ನು ಹೊಂದಿದ್ದರೂ, ಅನನಿಗೆ ಭಾರತೀಯ ಸಂಸ್ಕೃ ತಿಯ ಸಲುವಾಗಿ ಒಳ್ಳೆ ಅಭಿಮಾನವಿದ್ದಿತು. ತುಲನಾತ್ಮಕ ದೃಷ್ಟಿಯಿಂದಲೂ, ಚಿಕಿ ತೃಕಬುದ್ದಿಯಿಂದಲೂ ಅವನಿಗೆ ತನ್ನ ವೇದಾಂತಧರ್ಮವೇ ಸರ್ವಶ್ರೇಷ್ಠವಾಗಿ ತೋರಿತು. ಅವನಿಗೆ ಇಂಗ್ರೇಜೀ ಪೋಷಾಕು ಕೂಡ ಅಷ್ಟು ಪ್ರಿಯಕರವಾಗಿದ್ದಿಲ್ಲ. ಯಾವನಾದರೂ ಒಬ್ಬ ಯುರೋಪಿಯನ್ ಗೃಹಸ್ಥನು ತನ್ನ ಭೆಟ್ಟಿಯ ಸಲುವಾಗಿ ಮನೆಗೆ ಬಂದರೆ, ಅವನು ತನ್ನ ಹಿಂದೂ ಪೋಷಾಕಿನಿಂದಲೇ ಅವನಿಗೆ ಬೆಟ್ಟಗೊಡು ತಿದ್ದನು. ಚಿಂತಾಮಣಿರಾಯನಿಗೆ ಇದು ಸೇರುತ್ತಿದ್ದಿಲ್ಲ. ಪಾಶ್ಚಾತ್ಯ ಪದ್ಧತಿಯ ಮೇಲೆ ಅವನು ಬಹು ಪ್ರೇಮಿ ತನ್ನ ಮಕ್ಕಳನ್ನು ಒಳ್ಳೇ ಪೋಷಾಕಿನಿಂದ ಅಲಂಕರಿಸಿ, ಅವ ರನ್ನು ತನ್ನ ಸಂಗಡ ಕರಕೊಂಡು ದೊಡ್ಡ ದೊಡ್ಡ ಜನರಿಗೆ ಭೆಟ್ಟಿಯಾಗುವದರಲ್ಲಿ ಅವನು ಉತ್ಕಟಾಪೇಕ್ಷಿ, ಅವನು ಮಗಳ ಹೆಸರನ್ನು ಒಳ್ಳೆ ಆನಂದದಿಂದ ( ದಿವ್ಯ ಸುಂದರಿ ' ಎಂಬದಾಗಿ ಇಟ್ಟಿದ್ದನು. ದಿವ್ಯಸುಂದರಿಯು ತನ್ನ ಹೆಸರಿನಂತೆ ಸ್ವರ್ಗದ ಅಪ್ಪರೆಯೇ ಆಗಿದ್ದಳು. ಅವಳು ಚಿಕ್ಕಂದಿನಲ್ಲಿ ಮನಮುಟ್ಟಿ ಅಭ್ಯಾಸ ಮಾಡಿದ್ದಳು. ಅವಳ ಸ್ಮರಣಶಕ್ತಿಯು ವಿಲಕ್ಷಣವಾದದ್ದು; ಅವಳ ಬುದ್ದಿಯು ಬಹು ಜಾಗೃತವಾ ದದ್ದು; ಅವಳ ವರ್ತನವು ಅನುಕರಣೀಯವಾದದ್ದು ; ಬೂಟು, ಚಾಳೀಸು ಮೊದಲಾ ದವುಗಳಿಂದ ಅಲಂಕೃತಳಾಗಿ, ಹೆಗಲ ಮೇಲಿನ ಜರೀಕಾಠಿಯ ಪತ್ತಲದ ಸೆರಗನ್ನು ಗೆಲುವಿನ ನಿಶಾನೆಯಂತೆ ಅಲ್ಲಾಡಿಸುತ್ತ ಅತ್ತಿತ್ತ ತಿರುಗಾಡಿ ಸುಶಿಕ್ಷಿತ ಸ್ತ್ರೀಯೆಂದು ಎಲ್ಲ ರಿಗೆ ಹೇಗೆ ಗುರ್ತುಮಾಡಿಕೊಡಬೇಕೆಂಬುವದು ಅವಳಿಗೆ ಪರಿಚಯವಿದ್ದಿಲ್ಲ, ಅರ್ಥಾತ್ ದಿವ್ಯಸುಂದರಿಯು ಶ್ರೀಮಂತಳಿದ್ದಳು, ಸುಶೀಲಳಿದ್ದಳು, ಇಂಗ್ರೇಜೀ ಮತ್ತು ಸಂಸ್ಕೃತ ಭಾಷೆಗಳನ್ನು ಚನ್ನಾಗಿ ಅರಿತವಳಿದ್ದಳು. ಒಟ್ಟಿನ ಮೇಲೆ ದಿವ್ಯಸುಂದರಿಯು ನಮ್ಮ ಹಿಂದೂಸಮಾಜಕ್ಕೆ ಒಳ್ಳೆ ಭೂಷಣಳಾಗಿದ್ದಳು. ಅವಳ ಹೃದಯವು ಅತ್ಯಂತ ಉದಾರವಾಗಿದ್ದಿತು. ಅವಳ ಅಂತಃಕರಣದಲ್ಲಿ ಕುದ್ರವಿಚಾರಗಳು ಎಂದೂ ಹುಟ್ಟು ತಿದ್ದಿಲ್ಲ. ಹಿಂದೂಧರ್ಮದ ಮೇಲೆ ಅವಳ ವಿಲಕ್ಷಣ ಶ್ರದ್ದೆ ಯಿದ್ದಿತು. ಸಾಕಾರ-ನಿರಾ ಕಾರಗಳ ಬಗ್ಗೆ ವಾದಮಾಡುವದಕ್ಕಿಂತ ಪರಮೇಶ್ವರನ ಮೇಲೆ ಭಕ್ತಿಮಾಡುವದು ಅವಳಿಗೆ ಹೆಚ್ಚಿನದಾಗಿ ತೋರುತ್ತಿದ್ದಿತು. ಅವಳಲ್ಲಿ ಒಂದು ಸಣ್ಣ ಈಶ್ವರಮೂರ್ತಿಯಿ ದ್ವಿತು. ದರದಿವಸ ಪ್ರಾತಃಕಾಲದಲ್ಲಿ ಸ್ನಾನಮಾಡಿದ ಕೂಡಲೆ ಅವಳು ಆ ಮೂರ್ತಿ ಯನ್ನು ಪೂಜಿಸುತ್ತಿದ್ದಳು. ಚಿಂತಾಮಣಿರಾಯನು ನಾಸ್ತಿಕನಿದ್ದಿಲ್ಲ! ಅವನೂ ತನ್ನ ಬಂಗಲೆಯ ಸಮೀಪದಲ್ಲಿರುವ ಒಂದು ದೇವಾಲಯಕ್ಕೆ ಪ್ರತಿದಿವಸ ಹೋಗಿ ನಮ ಸ್ವಾರಮಾಡಿ ಬರುತ್ತಿದ್ದನು. ಆದರೂ ಅವನಿಗೆ ದಿವ್ಯಸುಂದರಿಯ ಅಪಾರ ಭಕ್ತಿಯನ್ನು ನೋಡಿ ಕೌತುಕವಾಗುತ್ತಿದ್ದಿತು. ಒಮ್ಮೊಮ್ಮೆ ಅವನು ದಿವ್ಯಸುಂದರಿಗೆ ಮೂರ್ತಿಪೂ ಜೆಯ ಸಂಬಂಧವಾಗಿ ಪಾದ್ರಿಯರಂತೆ ಪ್ರಶ್ನೆ ಮಾಡಿ ಚೇಷ್ಟೆ ಮಾಡುತ್ತಿದ್ದನು. ಆಗ ಅವಳು ತಂದೆಗೆ ಭಕ್ತಿಭಾವದ ಮಹಾತ್ಮಿಯನ್ನು ಸವಿಸ್ತಾರವಾಗಿ ಹೇಳಿ ತಂದೆಯನ್ನು