ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ನೆಯ ಪ್ರಕರಣ- ಸುಂದರ ಭವನ.

  • /*/*

•, ಪ್ರಸಂಗದಲ್ಲಿ ಕೇವಲ ನಾನು ನಾಟಕದಿಂದಲೇ ಉಳಿದೆನೆಂದ ಮೇಲೆ ಈಗ ಮಾತ್ರ ನಾಟಕ ನೋಡುವದು ಅಹಿತವೆಂದು ತೋರಲೊಲ್ಲದು, ೨೨ ದಿವ್ಯಸುಂದರಿ:- ( ಅದು ಕೇವಲ ಕರ್ಮಧರ್ಮಸಂಯೋಗವಾಗಿದೆ. ಅದರ ಶ್ರೇಯಸ್ಸನ್ನು ನಾಟಕಕ್ಕೆ ಕೊಡುವ ಕಾರಣವಿಲ್ಲ. ನನಗಂತೂ ಈ ನಾಟಕವು ಮೊದಲು ಸೇರುವದಿಲ್ಲ, ನಮ್ಮ ಮನೆಯಲ್ಲಿ ನಾಟಕ ನೋಡುವ ಅಪೇಕ್ಷೆಯು ಯಾರಿಗೂ ಇಲ್ಲ. ಒಂದು ಉತ್ತಮ ಸಂಸ್ಕೋದ್ಧಾರಕ್ಕಾಗಿ ನಿನ್ನೆ ಆ ನಾಟಕವ್ರ ಇದ್ದದ್ದರಿಂದ ಒಬ್ಬ ಗೃಹಸ್ಥನ ಆಗ್ರಹದಿಂದ ನಾವು ಹೋಗಬೇಕಾಯಿತು. ಆಗ ನಾನು ತಂದೆಗೆ ನಾಟಕ ವನ್ನು ನೋಡಲಿಕ್ಕೆ ಹೋಗುವ ಕಾರಣವಿಲ್ಲ, ಬೇಡಿದಷ್ಟು ವರ್ಗಣೀ ಹಣವನ್ನು ಕೊಟ್ಟು, ಮನೆಯಲ್ಲಿ ಕೂಡ್ರುವದು ಉತ್ತಮವಾದದ್ದೆಂದು ಹೇಳಿದೆನು; ಆದರೂ ನಮ್ಮ ತಂದೆಯು ಆ ಸಭ್ಯಗೃಹಸ್ಥನ ಆಶೆಯನ್ನು ನಿರಾಶೆಮಾಡಲಿಲ್ಲ..? ದಿವ್ಯಸುಂದರಿಯ ಮಾತು ಮುಗಿಯುತ್ತಿರುವಷ್ಟರಲ್ಲಿ ಅಲ್ಲಿಗೆ ಡಾಕ್ಟರ ಸಾಹೇ ಬರು ಬಂದರು, ಅವರನ್ನು ನೋಡಿದ ಕೂಡಲೆ ದಿವ್ಯಸುಂದರಿ-ಮಧುರೆಯರು ಒತ್ತ ಟ್ವಿಗೆ ಸರಿದರು. ರಾಮರಾಯನು ಅವರನ್ನು ಆದರಪೂರ್ವಕ ವಿನಾಯಕನ ಹತ್ತರಿ ರುವ ಖುರ್ಚಿಯ ಮೇಲೆ ಕುಳ್ಳಿರಿಸಿದನು. ಡಾಕ್ಟರರು ತಲೆಯ ಮೇಲಿನ ಟೊಪ್ಪಿಗೆ ಯನ್ನು ಕೆಳಗಿಟ್ಟು ವಿನಾಯಕನಿಗೆ ಪ್ರಕೃತಿಯ ಬಗ್ಗೆ ವಿಚಾರಿಸಿದರು, ಆಗ ವಿನಾಯ ಕನು ಈಗ ಆರಾಮ ಇದ್ದೇನೆಂದು ಹೇಳಲು ಡಾಕ್ಟರರು ಅವನ ಎದೆಯನ್ನು ಹಿಡಿದು:- « ಹೌದು, ಈಗ ನಿಮ್ಮ ಪ್ರಕೃತಿಯು ಸುಧಾರಿಸುತ್ತ ನಡೆದಿರುವದು, ಇನ್ನೂ ನೀವು ವಿಶೇಷವಾಗಿ ಶ್ರಮಮಾಡದೆ ಕುಳಿತಲ್ಲಿಯೇ ಇರಬೇಕು. ಇನ್ನು ನಿಮಗೆ ಔಷಧವು ಕಾರಣವಿಲ್ಲ. ?” ಎಂಬದಾಗಿ ಹೇಳಿ ಹೊರಟುಹೋದರು. ಡಾಕ್ಟರರು ಇಂದು ವಿನಾ ಯಕನಿಗೆ ಹೋಗಬಾರದೆಂದು ಹೇಳಿದ್ದಕ್ಕಾಗಿ ದಿವ್ಯಸುಂದರಿ-ಮಧುರೆಯರು ಅವರು ಹೋದ ಮೇಲೆ ಅವರ ಆಭಾರಮನ್ನಿ ಸಿದರು. ಅನಂತರ ಆ ನಾಲ್ವರೂ ಎಷ್ಟೋ ವೇಳೆಯವರೆಗೆ ಅನೇಕ ವಿಷಯಗಳ ಬಗ್ಗೆ ಮಾತಾಡುತ್ತ ಕುಳಿತಿದ್ದರು. ಅಷ್ಟರಲ್ಲಿ ಚಿಂತಾಮಣಿರಾಯನು ಸಂಗಡ ಕೃಷ್ಣರಾಯನನ್ನು ಕರಕೊಂಡು ಅಲ್ಲಿಗೆ ಬಂದನು. ಕೃಷ್ಣರಾಯನಿಗೆ ರಾಮರಾಯನ ಚೀಟಿಯನ್ನು ನೋಡಿದ ಕೂಡಲೆ ಅತ್ಯಾನಂದ ವಾಯಿತು. ಅವನು ತ್ವರೆಯಿಂದ ವಿನಾಯಕನ ಭೆಟ್ಟಿಯ ಸಲುವಾಗಿ ಬಂದನು. ಕೃಷ್ಣ ರಾಯನನ್ನು ನೋಡಿದ ಕೂಡಲೆ ವಿನಾಯಕನ ಕಣ್ಣುಗಳು ಕಣ್ಣೀರಿನಿಂದ ತುಂಬಿದವು. ಆಗ ಚಿಂತಾಮಣಿರಾಯನು ರಾಮರಾಯನನ್ನು ಕುರಿತು:-( ರಾಮರಾಯ, ಈ ಕೃಷ್ಣರಾಯರು ವಿನಾಯಕರಾಯರನ್ನು ಕರಕೊಂಡು ಹೋಗಲಿಕ್ಕೆ ಬಂದಿದ್ದಾರೆ. " ಎನ್ನಲು ಆಗ ರಾಮರಾಯನು ಉತ್ತರ ಕೊಡುವಷ್ಟರಲ್ಲಿಯೇ ದಿವ್ಯಸುಂದರಿಯು:- ( ಇಲ್ಲ, ಇಲ್ಲ; ಇಂದು ಅವರನ್ನು ನಾವು ಕಳಿಸುವದಿಲ್ಲ. ಡಾಕ್ಟರರೂ ಇಂದು ಅವ ಠಿಗೆ ವಿಶ್ರಾಂತಿಯನ್ನು ತೆಗೆದುಕೊಳ್ಳಲಿಕ್ಕೆ ಹೇಳಿದ್ದಾರೆ. ನಮಗೂ ಇಂದು ಅವರನ್ನು