ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓನೆಯ ಪ್ರಕರಣ- ಸುಂದರ ಭವನ. •••••••••••••••••MMIMMmmmmmmm ++orwwwಸಿ ವಾಗಿ ಹೇಳಹತ್ತಿದನು, ಈಗಿನ ಸುಧಾರಣೆಯಿಂದ ಭಾರತೀಯಸಂಸ್ಕೃತಿಗೆ ಎಷ್ಟು ಹಾನಿಯಾಗುತ್ತದೆಂಬುವದನ್ನು ಅವನು ಒಳ್ಳೆ ಮಾರ್ಮಿಕರೀತಿಯಿಂದ ವಿವರವಾಗಿ ಹೇಳುತ್ತಿದ್ದನು. ಸತ್ಯಾಗ್ರಹವಾದ ಅವನ ಮಾತಿನಿಂದ ಆ ಮೂವರಿಗೆ ಸಿಟ್ಟು ಬಾರದೆ, ಅವನ ಸಲುವಾಗಿ ಮತ್ತಿಷ್ಟು ಆದರವೇ ಹೆಚ್ಚಾಯಿತು. ಆಗ ದಿವ್ಯಸುಂದರಿಯು:- ( ತಾವು ಅಮೇರಿಕೆಯಲ್ಲಿ ಮೂರು ನಾಲ್ಕು ವರ್ಷ ಇದ್ದಿರಿ. ಅಲ್ಲಿ ಈ ಸುಧಾರಣೆಯು ಬಹಳಾಗಿರುತ್ತದೆಂದು ಹೇಳುತ್ತಾರೆ. ” ಎಂದನ್ನಲು ವಿನಾಯಕನು (( ಇರುವದು ನಿಜ; ಅದು ಈಗ ನಾಮಶೇಷವಾಗಿ ತೋರಹತ್ತಿದೆ. ಅಲ್ಲಿ ಎಷ್ಟೋ ದೊಡ್ಡ ದೊಡ್ಡ ಜನರು ಈಗಿನ ಸುಧಾರಣೆಗೆ ಬೇಸರವುಳ್ಳವರಾಗಿ ಈಗಿನ ಯಾಂತ್ರಿಕ ಜೀವನವು ಯಾವಾಗ ಮುಗಿದೀತೆಂದು ಹಾದಿಯನ್ನು ನೋಡುತ್ತಿರುತ್ತಾರೆ, ಅಮೇರಿಕಾದ ಒಬ್ಬ ಶ್ರೀಮಂತನು ನಮ್ಮ ಪೂರ್ವದ ಋಷಿಗಳಂತೆ ಅರಣ್ಯದಲ್ಲಿ ಪರ್ಣಶಾಲೆಯನ್ನು ಕಟ್ಟಿಕೊಂಡು, ಅಲ್ಲಿ ತೀರ ಸೌಮ್ಯವೃತ್ತಿಯಿಂದ ಇರಹತ್ತಿದ್ದಾನೆ. ನಮ್ಮ ಪುರಾಣದೊಳಗಿನ ವಾಕ್ಯಗಳನ್ನು ಕೇಳಿ ಅವನು ಮೊದಲು ಅವುಗಳ ಬಗ್ಗೆ ಹಾಸ್ಯಮಾಡುತ್ತಿದ್ದನು. ಯಾವಾಗ ಅವನು ಈಗಿನ ಸುಧಾರಣೆಗೆ ಬೇಸರಗೊಂಡು ಸ್ವತಃ ಆಶ್ರಮದಲ್ಲಿ ಇರಹತ್ತಿದನೋ ಆಗಲೇ ಅವನು ಹಿಂದೂಧರ್ಮದ ಆಶ್ರಮಚತುಷ್ಟಯದ ಬಗ್ಗೆ ವಿಶೇಷ ಸ್ತುತಿಮಾಡಿದನು. ಈ ಆಶ್ರಮಗಳನ್ನು ಸರ್ವ ಧರ್ಮದವರೂ ಪ್ರತಿಪಾಲಿಸುವದು ಪವಿತ್ರ ಕರ್ತವ್ಯಕರ್ಮ ವೆಂದು ಬೋಧಿಸಿ, ಸಾವಿರಾರು ಜನರು ಆಶ್ರಮದಲ್ಲಿ ಇರುವಂತೆ ಮಾಡಿದನು. " - ವಿನಾಯಕನ ಈ ಮಾತಿನ ಪರಿಣಾಮವು ದಿವ್ಯಸುಂದರಿಯ ಮೇಲೆ ವಿಶೇಷ ವಾಗುತ್ತ ಹೋಯಿತು. ರಾಮರಾಯ-ಮಧುರೆಯರ ಮೇಲೆ ವಿನಾಯಕನ ಮಾತಿನ ಪರಿಣಾಮವು ಆಗಲಿಲ್ಲವೆಂಬಂತಿಲ್ಲ. ರಾಮರಾಯನ ಮನಸ್ಸು ನಿರಭಿಮಾನವುಳ್ಳದ್ದಾಗಿ ದ್ವಿತು. ಇಂದಿನವರೆಗೆ ಅವನು ಯಾವ ತಪ್ಪುಗಳು ತಪ್ಪುಗಳಲ್ಲವೆಂದು ಭಾವಿಸಿದ್ದನೋ ಅವೆಲ್ಲ ವಿನಾಯಕನ ಮಾತಿನಿಂದ ತಪ್ಪುಗಳೇ ಇರುತ್ತವೆಂದು ಒಪ್ಪಿದನು, ಈ ಪ್ರಕಾರ ಎಷ್ಟೋ ಹೊತ್ತು ಮಾತಾಡುವದಾದ ಮೇಲೆ ರಾಮರಾಯನು ವಿನಾಯಕನಿಗೆ ತಮ್ಮ ಬಂಗಲೆಯನ್ನೆಲ್ಲ ತೋರಿಸಬೇಕೆಂದಾಲೋಚಿಸಿ, ಆ ಪ್ರಕಾರ ಅವನನ್ನು ಕರಕೊಂಡು ಒಂದೊಂದು ದಿವಾಣಖಾನೆಯನ್ನು ತೋರಿಸುತ್ತ 'ಬಲಿಯರ್ಡ ಆಟದ ದಿವಾಣಖಾ ನೆಗೆ ಹೋಗಿ : ನಿಮಗೆ ಈ ಆಟ ಬರುತ್ತದೆಯೇ ' ಎಂದು ವಿನಾಯಕನನ್ನು ಕೇಳಿ ದನು. ಅವನು ತನಗೆ ಬರುವದಿಲ್ಲವಾಗಿ ಹೇಳಲು ದಿವ್ಯಸುಂದರಿಯು ಮಧುರೆಗೆ ರಾಮ ರಾಯನ ಕೂಡ ಆ ಆಟವನ್ನು ಆಡಬೇಕೆಂದು ಹೇಳಿದಳು. ಕೂಡಲೆ ಅವಳು ಕೈಯಲ್ಲಿ ಕಟ್ಟಿಗೆಯನ್ನು ತಕ್ಕೊಂಡು ರಾಮರಾಯನ ಸಂಗಡ ಅಡಹತ್ತಿದಳು. ಬಲಿಯರ್ಡ ಆಟದ ಟೇಬಲು ಮಧ್ಯಭಾಗದಲ್ಲಿದ್ದು, ಅದರ ಸುತ್ತಲು ಎರಡು ಬಾಕುಗಳಿದ್ದವು. ದಿವ್ಯಸುಂದರಿಯ ಸೂಚನೆಯಂತೆ ವಿನಾಯಕನು ಒಂದು ಬಾಕಿನ ಮೇಲೆ ಕುಳಿತು, ಆ ಆಟವನ್ನು ನೋಡುತ್ತಿದ್ದನು. ಮೊದಲು ದಿವ್ಯಸುಂದರಿಯು ಎದ್ದು ನಿಂತೇ ಆ ಆಟ