ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ನೆಯ ಪ್ರಕರಣ- ಸುಂದರ ಭವನ MM MMMwwwmmmmmmmmmmmmmmmmmmmmmmmmm. ಕಲಿತಿದ್ದನು; ಆದರೂ ಇಂಗ್ರೇಜಿ ಭಾಷೆಯಲ್ಲಿ ಒಳ್ಳೆ ರೀತಿಯಿಂದ ಮಾತಾಡಲಿಕ್ಕೆ ಅವನು ಕಲಿತಿದ್ದನು. ಅವನ ತಂದೆ-ತಾಯಿಗಳು ೨೦-೨೧ ವರ್ಷದವನಿರುವಾಗಲೇ ತೀರಿಕೊಂಡದ್ದರಿಂದ ಅವನು ಆಗಿನಿಂದಲೇ ಸ್ವತಂತ್ರನಾಗಿದ್ದನು. ಮನಬಂದಂತೆ ನಡೆಯುವದು ಯುಕ್ತವಿಂದು ಹೇಳುವವರು ಒಬ್ಬರಾದರೂ ಅವನಿಗಿದ್ದಿಲ್ಲ, ಬರಬ ರುತ್ತ ಅವನ ದುರ್ನಡತೆಯು ಮಿತಿಮೀರಲು ಹಿಂದೂಸಮಾಜದವರು ಅವನನ್ನು ತಿರ ಸ್ಕರಿಸಹತ್ತಿದರು, ರೋಗಿಯ ಬೇಡುವಿಕೆಯೂ, ವೈದ್ಯರ ಹೇಳುವಿಕೆಯೂ ಒಂದೇ ಆದಂತಾಗಲು ಕೂಡಲೆ ಅವನು ಹಿಂದೂಸಮಾಜವನ್ನು ನಿಂದಿಸುತ್ತ ನಮ್ಮ ವಾಚಕ ರಿಗೆ ಗೊತ್ತಿರುವ ವಿಶ್ವಧರ್ಮಸಮಾಜಕ್ಕೆ ಕುಲಗೆಟ್ಟನು. ಅಂದಿನಿಂದ ಅವನ ಮರ್ಯಾ ದೆಯು ಹೆಚ್ಚಾಯಿತು. ಅವನು ತನ್ನ ಇಂಗ್ರೇಜೀ ಮಾತಿನಿಂದ ಆ ಸಮಾಜದಲ್ಲಿ ಒಳ್ಳೆ ಅಧಿಕಾರವಂತನಾದನು. ಮೊದಲೇ ಅವನು ಮಳೆಗಾಲದ ಅಮಾವಾಸ್ಯೆಯ ಕವಳ ದಂತೆ ಕರೆ ಬಣ್ಣದವನು; ಅದರಲ್ಲಿ ಅಂಗಾಲಿನಿಂದ ನಡುನೆತ್ತಿಯವರೆಗೂ ಅಚ್ಚ ಯುರೋಪಿಯನ್ ಪೋಷಾಕು; ಮತ್ತದರಲ್ಲಿ ಕುಳಿತದ್ದ ಕ್ಯೂ-ನಿಂತದ್ದಕ್ಕೂ, ಹಿಡಿದ ದ್ದಕ್ಕೂ- ಮುಟ್ಟಿದ್ದಕ್ಕೂ ಇಂಗ್ರೇಜಿಯ ಮಾತು. ಅಂದ ಮೇಲೆ ಕೇಳುವದೇನು? ಎಲ್ಲರೂ ಅವನಿಗೆ ( ಕಾಳಾಸಾಹೇಬ ” ಎಂದು ಕರೆಯಹತ್ತಿದರು. ಅವನಿಗೆ ತಾನು ಹಿಂದೂ ಹೆಸರಿನಿಂದ ಕರಿಸಿಕೊಳ್ಳುವದಕ್ಕಿಂತ ಕಾಳಾಸಾಹೇಬ ಎಂದು ಕರಿಸಿಕೊಳ್ಳು ವದು ಅಭಿಮಾನಾಸ್ಪದವಾಗಿ ತೋರಿತು. ಅವನು ಇಂಗ್ರೇಜೀ ಪದ್ಧತಿಯಂತೆ ಸ್ವಲ್ಪ ವ್ಯಾಪಾರೀ ಶಿಕ್ಷಣವನ್ನು ಸಂಪಾದನ ಮಾಡಿದ್ದನು. ಅವನಿಗೆ ಒಂದು ಬ್ಯಾಂಕಿನಲ್ಲಿ ನಾಲ್ವತ್ತು ರೂಪಾಯಿಯ ನವಕರಿಯಿದ್ದಿತು. ರಾಜಾಸಾಹೇಜ ಚಿಂತಾಮಣಿರಾಯ ನಿಗೆ ಬ್ಯಾಂಕಿಗೆ ಕೊಡತಕ್ಕೊಳ್ಳುವದರ ಸಲುವಾಗಿ ವಸಂತರಾಯನಂಥ ಒಬ್ಬ ಮನು ಷ್ಯನ ಆವಶ್ಯಕತೆಯಿದ್ದು ದರಿಂದ ಅವನು ಒಂದು ಸಾರೆ ಆ ಸಂಗತಿಯನ್ನು ವರ್ತಮಾ ನಪತ್ರದಲ್ಲಿ ಜಾಹೀರುಮಾಡಿದನು. ಕೂಡಲೆ ವಸಂತರಾಯನು ಎಷ್ಟೇ ದೊಡ್ಡ ದೊಡ್ಡ ಜನರ ಸರ್ಟಿಫಿಕೇಟುಗಳನ್ನು ತಕ್ಕೊಂಡು ರಾಜಾಸಾಹೇಬನ ಸನ್ನಿಧಿಗೆ ಬಂದನು, ಚಿಂತಾಮಣಿರಾಯನು ಬಂದ ಉಮೇದವಾರರಲ್ಲಿ ವಸಂತರಾಯನ ಅರ್ಜಿ ಯನ್ನು ಮನ್ನಿಸಿ, ಅವನಿಗೆ ಐವತ್ತು ರೂಪಾಯಿ ಪಗಾರದ ನವಕರಿ ಕೊಟ್ಟನು. ವಸಂತನು ನವಕರಿಗೆ ನಿಂತ ಕೂಡಲೆ ಯಾವತ್ತೂ ಜನರ ಪರಿಚಯ ಮಾಡಿಕೊಂಡನು. ಅವನು ತನ್ನ ಕೆಲಸವನ್ನು ಒಳ್ಳೇ ದಕ್ಷತೆಯಿಂದ ಮಾಡುತ್ತಿದ್ದದ್ದರಿಂದ ಚಿಂತಾಮಣಿ ರಾಯ-ರಾಮರಾಯರು ಅವನನ್ನು ಬಹಳವಾಗಿ ಪ್ರೀತಿಸಹತ್ತಿದರು. ಅವನಿಗೆ ಕೆಲವು ದಿನದ ಮೇಲೆ ಚಿಂತಾಮಣಿರಾಯನು ಎಪ್ಪತ್ತೈದು ರೂಪಾಯಿ ಪಗಾರವನ್ನು ಕೂಡ ಹತ್ತಿದನು. ವಸಂತರಾಯನಲ್ಲಿ ಅನೇಕ ದುರ್ಗುಣಗಳಿದ್ದವು; ಆದರೂ ಅವನು ಜಮಾ ಖರ್ಚಿನಲ್ಲಿ ಒಳ್ಳೆ ಚತುರನೂ, ವ್ಯಾಪಾರದಲ್ಲಿ ಧೂರ್ತನೂ ಆಗಿದ್ದುದರಿಂದ ಅವನ