ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ, ದುರ್ಗುಣಗಳನ್ನು ಗಣನೆಗೆ ತರಲಿಕ್ಕೆ ಬರುವಂತಿದ್ದಿಲ್ಲ. ಅವನು ಪ್ರತಿಯೊಂದು ಬ್ಯಾಂಕಿನ ಸ್ಥಿತಿಗತಿಗಳನ್ನು ಕೂಡಲೆ ಕಂಡುಹಿಡಿಯುತ್ತಿದ್ದನು. ಇರಲಿ. ದಿವ್ಯಸುಂದರಿಯು ವಸಂತನಿಗೆ ಹೇಗೆ ಅಪಮಾನ ಮಾಡಿದಳೆಂಬುವದು ನನ್ನ ವಾಚಕರ ಸ್ಮರಣೆಯಲ್ಲಿರಬಹುದು, ಅವನು ಆಗ ಅಲ್ಲಿ ಸ್ವಲ್ಪ ಹೊತ್ತು ಕುಳಿತಂತೆ ಮಾಡಿ ಮಾನಭಂಗದ ವಿಚಾರಮಾಡುತ್ತ ದಿವಾಣಖಾನೆಯಿಂದ ಹೊರಟುಹೋದನು. ಸ್ವಲ್ಪ ವೇಳೆಯಾದ ಮೇಲೆ ಬಲಿಯರ್ಡದ ಆಟವು ಮುಗಿಯಲು, ಎಲ್ಲರೂ ಅಲ್ಲಿಂದೆದ್ದು ತಂತಮ್ಮ ದಿವಾಣಖಾನೆಗೆ ಹೋದರು. ಮಾರನೇ ದಿವಸ ಎದ್ದ ಕೂಡಲೆ ಪ್ರಾತಃಕಾ ಲದಲ್ಲಿ ಚಹಾದ ವ್ಯವಸ್ಥೆ ಮಾಡುತ್ತಿರುವಾಗ ಕೃಷ್ಣರಾಯನು ವಿನಾಯಕನನ್ನು ಕರ ಕೊಂಡು ಹೋಗುವದಕ್ಕಾಗಿ ಬಂದನು. ಆಗ ಕೃಷ್ಣರಾಯನನ್ನು ನೋಡಿ ರಾಮ ರಾಯನು:-( ನಾವು ಇನ್ನು ಸ್ವಲ್ಪ ವೇಳೆಯಲ್ಲಿ ವಿನಾಯಕರಾಯರನ್ನು ಕರಕೊಂಡು ನಿಮ್ಮ ಸನ್ನಿಧಿಗೆ ಬರುವವರಿದ್ದೆವು, ನಿಷ್ಕಾರಣ ನೀವು ಶ್ರಮತಕ್ಕೊಂಡಂತಾಯಿತು. ” ಎಂದನ್ನಲು ಆಗ ರಾಮರಾಯನಿಗೆ ಏನುತ್ತರವನ್ನು ಕೊಡಬೇಕೆಂಬುವದು ಕೃಷ್ಣರಾ ಯನಿಗೆ ತಿಳಿಯದೆ ಹೋಯಿತು, ತನ್ನ ಬಂಧುವಿನ ಸಲುವಾಗಿ ಇಂಥ ಗರ್ಭ ಶ್ರೀ ಮಂತರು ಇಷ್ಟು ಆದರಸತ್ಕಾರ ಮಾಡುವದನ್ನು ನೋಡಿ ಕೃಷ್ಣರಾಯನಿಗೆ ಸಾನಂದಾ ಶ್ಚರ್ಯವಾಯಿತು, ಆಗ ಅವನು:- ನನ್ನ ಬಂಧುವಿಗೆ ತಾವು ಪ್ರಾಣದಾನ ಕೊಟ್ಟ ರುವಿರಿ, ಆದ್ದರಿಂದ ನಾನು ಜನ್ಮ ಜನ್ಮದಲ್ಲಿಯೂ ತಮ್ಮ ಉಪಕಾರವನ್ನು ಮರೆಯು ವಂತಿಲ್ಲ. ” ಎಂದನ್ನಲು ರಾಮರಾಯನು ಸಹಾನುಭೂತಿಯಿಂದ:-( ಕೃಷ್ಣರಾಯ, ಇದರಲ್ಲಿ ನಾವೇನು ಅಂಥ ಹೆಚ್ಚಿನ ಉಪಕಾರ ಮಾಡಿರುವೆವು? ನಾವು ನಮ್ಮ ಕರ್ತ ವ್ಯವನ್ನು ಮಾತ್ರ ಮಾಡಿರುವೆವು, ನಮ್ಮೆಲ್ಲರಿಗೆ ಇವರಂಥ ವಿದ್ವಾನರೂ, ಸದುದ್ಯಮ ಶೀಲರೂ ಆದ ತರುಣಗೃಹಸ್ಥರ ಸಹವಾಸವು ಒಂದು ದಿವಸ ಸಂಘಟಿಸಿದ ಬಗ್ಗೆ ತಿರುಗಿ ನಾವು ಇವರ ಉಪಕಾರವನ್ನು ಎಷ್ಟು ಮನ್ನಿಸಿದರೂ ಕಡಿಮೆಯೇ ಸರಿ. ? ಎಂದನು. ಆಗ ಮಧುರೆಯು ಕೃಷ್ಣರಾಯನನ್ನು ಕುರಿತು:- ( ಬಹಳ ಮಾಡಿ ಇವರ ಅತ್ತಿಗೆಯವರು ನಿಮ್ಮನ್ನು ಕಳಿಸಿರಬಹುದು. ೨೨ , ಕೃಷ್ಣ:- ಹೌದು ಅವಳು ಇವನನ್ನು ತನ್ನ ತಮ್ಮನೆಂದು ಭಾವಿಸಿರುತ್ತಾಳೆ. ಅವಳು ಒಂದೇಸವನೆ ಅಳುತ್ತ ಕುಳಿತಿದ್ದಾಳೆ. ಈತನು ನಿಮ್ಮಲ್ಲಿ ಇರುತ್ತಾನೆಂದು ಕೇಳಿದ ಮೇಲೆ ಅವಳಿಗೆ ಸ್ವಲ್ಪ ಸಮಾಧಾನವಾಗಿದೆ. ) ಇಂಥ ಮೃದುಸ್ವಭಾವದ ಯಮುನೆಯನ್ನು ಒಮ್ಮೆಯಾದರೂ ನೋಡಬೇಕೆಂದು ದಿವ್ಯಸುಂದರಿಗೆ ತೋರಿತು, ಅವಳು ಮಧುರಸ್ವರದಿಂದ ವಿನಾಯಕನನ್ನು ಕುರಿತು:- << ಒಂದು ಸಾರೆ ಯಮುನಕ್ಕನವರನ್ನು ಇಲ್ಲಿಗೆ ಕರಕೊಂಡು ಬಂದರೆ ಬಹಳ ಉಪಕಾ ಥವಾದಂತಾಗುತ್ತದೆ. ?”