೪೬ ದಿವ್ಯಸುಂದರಿ ಅಥವಾ ದೀರ್ಘ ಪ್ರಯತ್ನ, AAAAAA ಯಕನು ಒಲ್ಲೆಂದರೂ ಕೇಳದೆ ತಾನು ಮೊದಲೇ ಸಿದ್ಧ ಮಾಡಿಟ್ಟ ಫಲಾಹಾರವನ್ನು ಅವನ ಮುಂದಿಟ್ಟಳು. ವಿನಾಯಕನು ಸ್ವಲ್ಪ ಫಲಾಹಾರ ಮಾಡಿದನು, ಅದರಿಂದ ಯಮುನೆಗೆ ತುಂಬಾ ಸಮಾಧಾನವಾಯಿತು, ಈ ಪ್ರಕಾರ ಕೆಲಹೊತ್ತು ವಿನಾಯಕ ಯಮುನೆಯರ ಮಾತುಕಥೆಯಾದ ಮೇಲೆ ಕೃಷ್ಣರಾಯನು ವಿನಾಯಕನನ್ನು ಸಂಗಡ ಕರಕೊಂಡು ನೀಲಕಂಠರಾಯನ ಮನೆಗೆ ಹೋದನು, ಮಿರಜೆಯಲಿ ಶಾಮರಾಯನ ಕೈಯಿಂದ ಸಾಯುವ ಮೊದಲೇ ನೀಲಕಂಠರಾಯನು ತನ್ನ ತಂಗಿಯ ಮಗನಾದ ಜಗನ್ನಾಥನನ್ನು ಹತ್ತರ ಕರಿಸಿಕೊಂಡು ತನ್ನ ಆಸ್ತಿಯಲ್ಲಿ ಅವನ ಹೆಸರ್ಲೆ ಆಗ ಬೇಕೆಂದು ಮೃತ್ಯುಪತ್ರ ಮಾಡಿಟ್ಟಿದ್ದನು. ಈ ಪತ್ರವು ಸರಕಾರದಲ್ಲಿಯೂ ನಮದಾಗಿ ದ್ವಿತು. ಈ ಮೃತ್ಯುಪತ್ರದಲ್ಲಿ ಶಾಮರಾಯನು ಸಿದ್ಧ ಮಾಡಿದ ಮೊಟ್ಟ ಮೃತ್ಯುಪತ್ರದ ಉಲ್ಲೇಖವೂ ಆಗಿದ್ದಿತು. ಕೃಷ್ಣರಾಯ-ವಿನಾಯಕರು ಜಗನ್ನಾಥನಿಗೆ ಈ ಎಲ್ಲ ಸಂಗ ತಿಯನ್ನು ತಿಳಿಸಿ, ಅವನನ್ನು ಸಂಗಡ ಕರಕೊಂಡು ಹೋಗಿ ಫಿರ್ಯಾದಿಯನ್ನು ಕೊಟ್ಟರು. ಪಿರ್ಯಾದಿಯನ್ನು ಹಿಡಿದು ಪೋಲೀಸರು ತ್ವರೆಯಿಂದ ಚವಕಸಿ ನಡಿಸಿ ದರು. ಶಾಮರಾಯನಿದ್ದ ಮನೆಯಲ್ಲಿ ಯಾರೂ ಇದ್ದಿಲ್ಲ. ಮನೆಯ ಯಜಮಾನನಿಂದ ಶಾಮರಾಯನು ಖೆಡ್ಡಿ ಹೆಸರಿನಿಂದ ಭಾಡಿಗಿ ತೆಗೆದುಕೊಂಡಿದ್ದನೆಂಬದಾಗಿ ಪೋಲೀ ಸರಿಗೆ ಕಂಡುಬಂದಿತು. ಪೋಲೀಸರು ಆ ಸಂಬಂಧವಾಗಿ ಎಷ್ಟು ಶೋಧಮಾಡಿ ದರೂ ಕಾರ್ಯದಲ್ಲಿ ಜಯವು ಸಿಗಲಿಲ್ಲ. ಮೂರು ನಾಲ್ಕು ದಿವಸವಾದ ಮೇಲೆ ಚಿಂತಾಮಣಿರಾಯನ ದಿವಾಣ ಮಾಧವ ರಾಯನು ವಿನಾಯಕನ ಬಳಿಗೆ ಬಂದು, ಚಿಂತಾಮಣಿರಾಯರು ಕರೆಯುತ್ತಾರೆಂದು ಹೇಳಿ ಸಂಗಡ ಅವನನ್ನು ಕರಕೊಂಡು ಹೋದನು, ಆ ವೇಳೆಯಲ್ಲಿ ಚಿಂತಾಮಣಿ ರಾಯನು ಒಂದು ಆರಾಮಖುರ್ಚೆಯ ಮೇಲೆ ಕುಳಿತು ಇಂಗ್ರೇಜೀ ದೈನಿಕ ವರ್ತಮಾ ನಪತ್ರವನ್ನು ಓದುತ್ತಿದ್ದನು, ವಿನಾಯಕನು ದಿವಾಣಖಾನೆಯಲ್ಲಿ ಬಂದಕೂಡಲೆ ಚಿಂತಾಮಣಿರಾಯನು ಒಂದು ಖುರ್ಚೆಯಕಡೆಗೆ ಬೊಟ್ಟು ಮಾಡಿ ವಿನಾಯಕನಿಗೆ ಕೂಡಲಿಕ್ಕೆ ಹೇಳಿದನು. ಮಾಧವರಾಯನೂ ವಿನಾಯಕನ ಹತ್ತರ ಇದ್ದ ಖುರ್ಚೆಯ ಮೇಲೆ ಕುಳಿತನು. ಆ ಮೇಲೆ ಚಿಂತಾಮಣಿರಾಯ-ವಿನಾಯಕರ ಸಂಭಾಷಣವು ಪ್ರಾರಂಭವಾಯಿತು. ಚಿಂತಾ:-« ವಿನಾಯಕರಾಯ, ನೀವೇನೋ ನಮ್ಮ ರಾಮಪುರದ ಭೂಮಿ ಯನ್ನು ಲಾವಣಿಗೆ ಬೇಡುವಿರಿ ಖರೆ; ಆದರೆ ಅದರಿಂದ ನಿಮಗೇನು ಲಾಭವಾಗುವದೋ ನನಗೆ ತಿಳಿಯದಾಗಿದೆ. ಆ ಭೂಮಿಯಲ್ಲಿ ಕಬ್ಬಿಣ ಮೊದಲಾದ ಧಾತುಗಳು ಹೊರಡು ಶವೆನ್ನುವದು ಆಶ್ಚರ್ಯವಾಗಿದೆ. " ವಿನಾ:- ಆಶ್ಚರ್ಯವೇನೂ ಇಲ್ಲ, ನಾನು ಅಲ್ಲಿಯ ಕಲ್ಲುಮಣ್ಣು ಪರೀಕ್ಷಿ ಸಿಯೇ ಈ ಯೋಜನೆ ಮಾಡಿರುತ್ತೇನೆ, ”
ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೬೯
ಗೋಚರ