ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ನೆಯ ಪ್ರಕರಣ- ಸುಂದರ ಭವನ. ೪; ಚಿಂತಾ:-( ಆಗಲಿ, ಭೂಮಿಯನ್ನೇನೋ ಕೊಡುವೆನು. ಇಂಥ ದೊಡ್ಡ ಕೆಲಸಕ್ಕೆ ದುಡ್ಡಿನ ವ್ಯವಸ್ಥೆ ಏನು ಮಾಡಿರುವಿರಿ? " ವಿನಾ:- ನನ್ನ ಹತ್ತರ ಕೆಲವು ದ್ರವ್ಯವದೆ. ಇದರ ಹೊರ್ತು ನನ್ನ ನಾಲ್ಕಾರು ಮಂದಿ ಮಿತ್ರರು ಅಲ್ಪಸ್ವಲ್ಪ ದುಡ್ಡಿನ ಸಹಾಯ ಮಾಡುತ್ತೇವೆಂದು ವಚನ ಕೊಟ್ಟಿದ್ದಾರೆ, ಅಮೇರಿಕಾದಲ್ಲಿ ನಾನಿದ್ದ ಕಬ್ಬಿಣ ಕಾರಖಾನೆಯ ಯಜಮಾನನು ನನಗೆ ಬೇಕಾಗುವ ಎಷ್ಟೋ ಯಂತ್ರಗಳನ್ನು ಹಣೇಬಂದೀ ಪ್ರಕಾರ ಹಣ ತಕ್ಕೊಂಡು ಕೊಡಲಿಕ್ಕೆ ಒಪ್ಪಿದ್ದಾನೆ. ಮೊದಲು ಸಣ್ಣ ಪ್ರಮಾಣದಿಂದ ಕಾರಖಾನೆಯನ್ನು ಪ್ರಾರಂಭಿಸಿ, ಲಾಭಲಕ್ಷಣವು ಕಂಡರೆ ಹೆಚ್ಚು ಹಣ ಕೂಡಿಸುವ ಯತ್ನ ಮಾಡುವೆನು. " ಚಿಂತಾ:-( ಆಗಲಿ, ಮೊದಲು ನಮ್ಮಲ್ಲಿ ಉದ್ಯೋಗಮಾಡುವ ಜನರೇ ಕಡಿಮೆ. ಇಂಥದರಲ್ಲಿ ನೀವು ಇಂಥ ದೊಡ್ಡ ಉದ್ಯೋಗಕ್ಕೆ ಯತ್ನ ಮಾಡುತ್ತಿರುವಾಗ ನಾವು ಆಶ್ರಯಗೊಡುವದು ವಿಹಿತವೇ ಆಗಿದೆ. ಇದಕ್ಕಾಗಿ ನಿಮಗೆ ನಾನು ಆ ಭೂಮಿ ಯನ್ನು ೯ ವರ್ಷದ ಕರಾರಿನಿಂದ ಲಾವಣೀ ಕೊಟ್ಟಿದ್ದೇನೆ, ಮೊದಲಿನ ಹತ್ತು ವರ್ಷ ನೀವು ನಮಗೆ ಏನೂ ಕೊಡಬೇಡಿರಿ, ಮುಂದೆ ಇಪ್ಪತ್ತೈದು ವರ್ಷದ ತನಕ ಬರೇ ಕಂದಾಯವನ್ನು ನೋಡಿಕೊಳ್ಳಿರಿ, ಅನಂತರ ಪ್ರತಿವರ್ಷ ಕಂದಾಯವನ್ನು ನೋಡಿಕೊಂಡು ಅದರ ನಾಲ್ಕಷ್ಟು ರಕಂ ನನಗೆ ಕೊಡುತ್ತ ಹೋಗಿರಿ, ಈ ಕರಾರಿ ನಿಂದ ನಿಮಗೆ ಸುಲಭವಾಗಿ ಮುಂದೆ ಲಾಭಾಂಶವು ತೋರಿದರೆ ನಮಗೂ ಅಷ್ಟು ಲಾಭವಾಗುವದು. ಬರೇ ಹಾನಿಯಾಗುವ ಲಕ್ಷಣವು ತೋರಿದರೆ ಮೊದಲಿನ ಹತ್ತು ವರ್ಷ ನೀವು ಬೇಕಾದಾಗ ಬಿಡಲಿಕ್ಕೆ ಅಡ್ಡಿಯಿಲ್ಲ. " ಚಿಂತಾಮಣಿರಾಯನ ಈ ಕರಾರನ್ನು ಕಂಡು ವಿನಾಯಕನಿಗೆ ಬಹಳ ಆನಂದ ವಾಯಿತು. ಅವನು ಆ ಸವಲತಿಯ ಸಲುವಾಗಿ ಚಿಂತಾಮಣಿರಾಯನ ಆಭಾರವನ್ನು ಬಹಳವಾಗಿ ಮನ್ನಿಸಿದನು. ಇನ್ನು ಚಿಂತಾಮಣಿರಾಯನ ಅಪ್ಪಣೆಯನ್ನು ತಕ್ಕೊಂಡು ವಿನಾಯಕನು ದಿವಾಣಖಾನೆಯಿಂದ ಹೊರಬೀಳಬೇಕೆನ್ನುವಷ್ಟರಲ್ಲಿ ವಂಸತರಾಯರಾಮರಾಯರು ಮಾತಾಡುತ್ತ ನಿಂತದ್ದು ಅವನಿಗೆ ಸ್ಪಷ್ಟವಾಗಿ ಕಾಣಿಸಿತು. ಆಗ ಅವನು ಚಿಂತಾಮಣಿರಾಯನಿಗೆ ನಮಸ್ಕಾರಮಾಡಿ ಕೆಳಗೆ ಇಳಿದು ಹೋಗುವ ಅಟ್ಟದ ಕಡೆಗೆ ಹೋಗಹತ್ತಿದನು, ಆದರೆ ಅಷ್ಟರಲ್ಲಿ ರಾಮರಾಯನು ಅವನನ್ನು ಕರೆದು ಪರಭಾರೆ ಹೋಗುವ ಬಗ್ಗೆ ಅವನ ಮೇಲೆ ದೋಷವನ್ನು ಹೊರಿಸಿದನು, ಆಗ ವಿನಾ ಯಕನು ನಗುತ್ತ “ ನೀವು ಏನೋ ಮಾತಾಡುತ್ತ ನಿಂತದ್ದರಿಂದ ನಿಮ್ಮ ಭೆಟ್ಟಿಯಾ ಗದೆ ಹಾಗೆಯೇ ಹೋಗುತ್ತಿದ್ದೆನು. ” ಎಂದನು. ರಾಮರಾಯನು ವಸಂತನ ಸಂಗಡ ಮಾತಾಡುವ ವಿಷಯವನ್ನು ಬಿಟ್ಟು ಕೊ ಟ್ಟನು. ಅವನು ನಾಲ್ಫ್ದು ಹೆಜ್ಜೆ ಮುಂದಕ್ಕೆ ಸರಿದು ವಿನಾಯಕನ ಕೈ ಹಿಡಕೊಂಡು