ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ. ೧೧೧೧೧೧೧೧೧ AAAAAA••••••••MM

  • ನೀವು ಇಂದು ಬರುವವರಿದ್ದೀರೆಂಬುವದನ್ನು ನಾನು ತಂದೆಯವರಿಂದ ಈ ಮೊದಲೇ ಕೇಳಿದ್ದೆನು, ನೀವು ಬರುವಾಗ ಯಮುನಕ್ಕನವರನ್ನು ಕರಕೊಂಡು ಬಂದೀರೆಂಬ ಆಶೆ ಯಿಂದ ಮನೆಯಲ್ಲಿ ಎಷ್ಟೋ ಸಿದ್ದತೆಮಾಡಿದ್ದರು. ಒಳ್ಳೇದು ನಡೆಯಿರಿ, ಒಳಗೆ. ಚಹಾ ತಕ್ಕೊಂಡು ಹೋಗುವಂತಿರಿ.” ಎಂದನ್ನುತ್ತ ವಿನಾಯಕನನ್ನು ಕರಕೊಂಡು ಒಳಗೆ ಹೋದನು. ವಸಂತರಾಯನು ಹಾಗೆಯೇ ಹೊರಗೆ ನಿಂತಿದ್ದನು. ವಿನಾಯ ಕನನ್ನು ಕಂಡ ಕೂಡಲೆ ತನ್ನ ಸಂಗಡ ಮಾತಾಡುವದನ್ನು ಬಿಟ್ಟು, ಅವನ ಕೈ ಹಿಡಿದು ಅವನ ಸತ್ಕಾರಮಾಡಿದ್ದನ್ನೂ, ತಾನು ಹತ್ತರ ಇರಲಿಕ್ಕೆ ಅವನಿಗೊಬ್ಬನಿಗೇ ಚಹಾದ ಆಮಂತ್ರಣಮಾಡಿದ್ದನ್ನೂ ನೋಡಿ ವಸಂತನ ಅಂತಃಕರಣದಲ್ಲಿ ಕಾಲಕೂಟ ವಿಷದ ಕಾರಂಜಿಯು ಪುಟಿಯಹತ್ತಿತು. ವಿನಾಯಕನ ಸಂಬಂಧವಾಗಿ ಅವನ ಮನಸ್ಸಿನಲ್ಲಿ ಭಯಂಕರ ಮತ್ಸರವು ಉತ್ಪನ್ನವಾಯಿತು. ವಿನಾಯಕನು ಯಮುನೆಯನ್ನು ಕರ ಕೊಂಡು ಬಾರದ್ದಕ್ಕಾಗಿ ದಿವ್ಯಸುಂದರಿ-ಮಧುರೆಯರು ದುಃಖಪ್ರದರ್ಶನ ಮಾಡಿದರು. ವಿನಾಯಕನು ನಾಲ್ಕೆಂಟು ದಿವಸಗಳಲ್ಲಿ ನಿಜವಾಗಿ ಅತ್ತಿಗೆಯನ್ನು ಕರಕೊಂಡು ಬರು ತೇನೆಂಬದಾಗಿ ಆಶ್ವಾಸನಗೊಟ್ಟು ಚಹಾ ತಕ್ಕೊಂಡು ಮನೆಗೆ ಬಂದನು, ಮನೆಗೆ ಬಂದ ಕೂಡಲೆ ದಿವ್ಯ ಸಂದರಿ-ಮಧುರೆಯರು ನಿಮ್ಮನ್ನು ತಮ್ಮ ಮನೆಗೆ ಕರಕೊಂಡು ಬರಬೇ

ಕೆಂದು ಹೇಳಿರುತ್ತಾರೆಂದು ಯಮುನೆಗೆ ತಿಳಿಸಿದನು, ಆಗ ಅವಳು ಅಂಥ ಶ್ರೀಮಂತರ ಮನೆಗೆ ಸಾಮಾನ್ಯಳಾದ ನಾನು ಬರುವದು ತಕ್ಕದ್ದಲ್ಲವೆಂದು ಅಂದಳು, “ಆಗ ವಿನಾ ಯಕನು ಯಾವ ರೀತಿಯಿಂದಲೂ ಅವರ ಮನೆಗೆ ಬರಲಿಕ್ಕೆ ಅಡ್ಡಿಯಿಲ್ಲವೆಂದು ಹೇಳಲು ಅವಳು ಒಪ್ಪಿದಳು. ಮೂರು ನಾಲ್ಕು ದಿವಸವಾದ ಮೇಲೆ ವಿನಾಯಕನು ಯಮುನೆಯನ್ನು ಸಂಗಡ ಕರಕೊಂಡು ಚಿಂತಾಮಣಿರಾಯನ ಬಂಗಲೆಗೆ ಬಂದನು. ಯಮುನೆಯ ಶೀಲಸ್ವಭಾವವನ್ನೂ, ಮಧುರವಚನವನ್ನೂ, ಅಪೂರ್ವಜ್ಞಾನವನ್ನೂ ನೋಡಿ ದಿವ್ಯಸುಂದರಿ-ಮಧುರೆಯರು ಆಶ್ಚರ್ಯಚಕಿತರಾದರು. ಯಮುನೆಯು ಅಪ್ಪ ತಿಮ ಸುಂದರಿಯಿದ್ದಳು. ಅವಳು ದಿವ್ಯಸುಂದರಿಗಿಂತ ಸುಂದರಿಯೆಂಬುವದನ್ನೂ, ದಿವ್ಯಸುಂದರಿಯು ಅವಳಿಗಿಂತ ಸುಂದರಿಯೆಂಬುವದನ್ನೂ ಹೇಳುವದು ಕಠಿಣವಾಗಿ ದ್ದರೂ ಅವಳು ಮಧುರೆಗಿಂತ ಎಷ್ಟೋ ಪಟ್ಟು ಸುಂದರಳಿದ್ದಳು. ಯಮುನೆಯ ಸಾದಾ ಪೋಷಾಕನ್ನು ನೋಡಿದ ಕೂಡಲೆ ಮಧುರೆಗೆ ತನ್ನ ಬೆರಿಕೆಯ ಉಡಿಗೆತೊಡಿಗೆಗಳ ಸಲುವಾಗಿ ಸ್ವಲ್ಪ ನಾಚಿಕೆಯಾಯಿತು, ಅದರಲ್ಲಿಯೂ ಸಾದಾಪೋಷಾಕಿನ ಅವಳು ಇಂಗ್ರೇಜೀಭಾಷೆಯಲ್ಲಿ ಮಾತಾಡುವದನ್ನು ನೋಡಿಯಂತೂ ಮಧುರೆಗೆ ಹೇಗೋ ಹೇಗೋ ಆಯಿತು ದಿವ್ಯಸುಂದರಿ-ಮಧುರೆಯರು ಯಮುನೆಗೆ ಬಹಳವಾಗಿ ಆದರಿಸಿ ದರು, ಮೂವರ ಅಂತಃಕರಣಗಳೂ ನಿರ್ಮಲವಾಗಿದ್ದುದರಿಂದ ಅವರಲ್ಲಿ ಪರಸ್ಪರ ಪ್ರೇಮಭಾವವು ಬೇರುಗೊಂಡಿತು. ಯಮುನೆಗೆ ಮೇಲೆ ತಮ್ಮ ಮನೆಗೆ ಬರುತ್ತಿರ ಬೇಕೆಂದು ದಿವ್ಯಸುಂದರಿ-ಮಧುರೆಯರು ತಮ್ಮ ಆಗ್ರಹದ ಅಪೇಕ್ಷೆಯನ್ನು ತಿಳಿಸಿದರು.