ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಹಿನಯ ಪ್ರಕರಣ- ಸುಂದರ ಭವನ, ••••••••••••••••••ws. ಕೂಡಲೆ ಯಮುನೆಯು ಎಲ್ಲರ ಅಪ್ಪಣೆಯನ್ನು ಹೊಂದಿ ವಿನಾಯಕನ ಕೂಡ ಕೆಳ ಗಿಳಿದು ಗಾಡಿಯಲ್ಲಿ ಕುಳಿತಳು, ಗಾಡಿಯಲ್ಲಿ ಕುಳಿತ ಕಾಲಕ್ಕೆ ಅವಳ ದೃಷ್ಟಿಯು ಸಾಹಜಿಕವಾಗಿ ಬಂಗಲೆಯ ನಡುವಿನ ಅಂತಸ್ತಿನ ನಡುವಿನ ಕಿಡಿಕಿಯ ಕಡೆಗೆ ಬಿದ್ದಿತು. ನೋಡುತ್ತಾಳೆ, ಆ ಕಿಡಿಕಿಯ ಹತ್ತರ ದಿವ್ಯಸುಂದರಿಯು ನಿಂತುಕೊಂಡು ನಗೆಮೊಗ ದೊಡನೆ ಕೈಯನ್ನು ಮೇಲಕ್ಕೆತ್ತಿ ನಿರೋಪಗೊಡುತ್ತಾಳೆ. ಹಾಗೇ ಮೇಲಕ್ಕೆ ಯಮು ನೆಯು ನೋಡಲು ಅದೇ ಕಿಡಿಕಿಯ ಮೇಲೆ ಒಂದು ಕಲ್ಲಿನಲ್ಲಿ ಕೊರೆದ ಸುಂದರ ಸುವ ರ್ಣಾಕ್ಷರಗಳು ಕಂಡವು, ಅವುಗಳನ್ನು ನೋಡಿ ಅವಳು ವಿನಾಯಕನನ್ನು ಕುರಿತು:- « ವಿನಾಯಕರಾಯ, ಬಂಗಲೆಯ ಮೇಲೆ ಏನು ಬರೆದದೆಯೆಂಬುವದನ್ನು ನೀವು ನೋಡಿರುವಿರೋ? !” ಎಂದು ಕೇಳಲು ವಿನಾಯಕನು ಆ ಕಡೆಗೆ ನೋಡುತ್ತಾನೆ. ದಿವ್ಯಸುಂದರಿಯು ನಾಚಿಕೆಯ ನೋಟದಿಂದ ತನ್ನ ಕಡೆಗೆ ನೋಡುತ್ತ ನಿಂತು ಕೊಂಡಿದ್ದಾಳೆ, ಮೇಲ್ಬಾಗಕ್ಕೆ ಕಲ್ಲಿನಲ್ಲಿ ಕೊರೆದ ಅಕ್ಷರಗಳೂ ತನ್ನನ್ನು ನೋಡು ತವೆಯೋ ಏನೋ ಅನ್ನು ವಂತೆ ರಮಣೀಯವಾಗಿ ಕಾಣಿಸುತ್ತವೆ. ಆ ದಿಕ್ಕಿನ ಕಡೆಗೆ ವಿನಾಯಕನು ನೋಡಿದರೂ ಅವನಿಂದ ತನ್ನ ಪ್ರಶ್ನೆಗೆ ಉತ್ತರವು ದೊರೆಯದ್ದರಿಂದ ಯಮುನೆಯು ( ವಿನಾಯಕರಾಯ, ಏನು ಬರೆದದೆ ? ೨” ಎಂದು ಕೇಳಿದಳು. ವಾಸ್ತವಿಕ ಯಮುನೆಯು ಆ ಅಕ್ಷರಗಳನ್ನು ಓದಿದ್ದಳು; ಆದರೂ ಆ ಪ್ರಶ್ನೆಯನ್ನು ಅವಳು ವಿನಾಯಕನಿಗೆ ಯಾಕೆ ಮಾಡಿದಳೋ ಏನೋ ! ತಿರುಗಿ ಯಮುನೆಯ ಮತ್ತೊಂದು ಪ್ರಶ್ನೆಗೆ ವಿನಾಯಕನು ಜಾಗೃತನಾಗಿ “ ಸುಂದರಭವನ ” ಎಂಬ ದಾಗಿ ಅಂದನು.