ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ನೆಯ ಪ್ರಕರಣ- ಸುಸಂದರ್ಶನ! MMuvvvvvv vvvvvvvvv ಉತ್ಪನ್ನವಾಗಿದ್ದಿತು. ಈ ಸಂಶಯದ ಕಲ್ಪನೆಯು ಅವನ ಹೃದಯಪಟಲದ ಮೇಲೆ ಮೂರ್ತಿ ಮಂತವಾದ ಕೂಡಲೆ ಅವನು ಭಾವಿಸುಖದ ಮಂಡಿಗೆಗಳನ್ನು ತಿಂದು ತಿಂದು ಉಬ್ಬು ಸಬಡುತ್ತಿದ್ದನು. ಒಮ್ಮೊಮ್ಮೆ ಅವನ ಮನಸ್ಸಿನಲ್ಲಿ ದೈದೀಭಾವವಾಗಲು ಅವ. ನಿಗೂ, ಮನಸ್ಸಿಗೂ ಅಪಾರವಾದ ಕಲಹವು ನಡೆಯುತ್ತಿದ್ದಿತು. ಕಡೆಗೆ ಕಲಹದಲ್ಲಿ ವಸಂತನಿಗೇ ಜಯವು ಬರುತ್ತಿದ್ದಿತು. ಅವನು ತನ್ನ ಮನಸ್ಸಿಗೆ ( ಎಲೈ ಮನಸ್ಸೇ, ಪ್ರೇಮವು ರಹಸ್ಯವಾಗಿದೆ. ಅದನ್ನು ಹೊರಪಡಿಸಲಿಕ್ಕೆ ದಿವ್ಯಸುಂದರಿಗೆ ಬರುವಂತಿಲ್ಲ. ದಿವ್ಯಸುಂದರಿಯು ಸುಧಾರಣಾಪ್ರಿಯಳಾಗಿರುವದರಿಂದ ನನ್ನಂಥ ಸುಧಾರಣಾಶಿಖರ ವನ್ನೇರಿದ ಮನುಷ್ಯನ ಹೊರ್ತು ಎರಡನೆಯವರು ಯಾರು ಅವಳ ಮನಸ್ಸಿಗೆ ಬರು ವರು ? ಮುಖ್ಯ ಕಾರಣ-ವಸಂತ ಮತ್ತು ದಿವ್ಯಸುಂದರಿ ಈ ಹೆಸರುಗಳ ಜೋಡಾದ ರೂ ಎಷ್ಟು ರಮಣೀಯವಾಗಿ ಕಾಣಿಸುತ್ತದೆ, ಅರ್ಥಾತ್ • ದಿವ್ಯಸುಂದರಿ ” ಎಂದನ್ನು ವಾಗ ಎಷ್ಟು ನನ್ನ ಮನಸ್ಸಿಗೆ ಆನಂದವಾಗುತ್ತದೆಯೋ ಅಷ್ಟೇ ಆನಂದವು ದಿವ್ಯ ಸುಂದರಿಗೆ " ವಸಂತ ” ಎಂದನ್ನು ವಾಗ ಆಗುತ್ತಿರಬಹುದು, ಮತ್ತು ದಿವ್ಯಸುಂದರಿಯು ಹಗಲಿರುಳೂ : ವಸಂತ, ವಸಂತ ” ಎಂದು ಜಪಿಸುತ್ತ ಕುಳಿತಿರುತ್ತಾಳೆ, ” ಎಂದು ಹೇಳುತ್ತಿದ್ದನು. ವಾಚಕರೇ, ಇಷ್ಟು ದೊಡ್ಡ ಒಜ್ಜೆಯನ್ನು ಮನಸ್ಸಿನ ಮೇಲೆ ಹೇರಿ ದರೆ ಅದು ಕುಸಿಬೀಳದೆ ಏನು ಮಾಡೀತು ? ಚಿಂತಾಮಣಿರಾಯನ ಬಂಗಲೆಯಲ್ಲಿ ವಿನಾಯಕನ ಪ್ರವೇಶವಾದಂದಿನಿಂದ ದಿವ್ಯಸುಂದರಿಯು ತನ್ನ ಕಡೆಗೆ ನೋಡದೆ, ವಿನಾಯಕನ ಕಡೆಗೆ ಚಮತ್ಕಾರ ದೃಷ್ಟಿಯಿಂದ ನೋಡುತ್ತಾಳೆಂದೂ, ಅವನೊಡನೆ ಸವಿ ಸವಿ ಮಾತುಗಳನ್ನಾಡುತ್ತಾ ಳೆಂದೂ ವಸಂತನು ತರ್ಕಿಸಿದನು. ವಾಸ್ತವ್ಯ ದಿವ್ಯಸುಂದರಿಯು ವಸಂತನ ಕಡೆಗೆ ಎಂದೂ ನೋಡಿದ್ದಿಲ್ಲ, ಮತ್ತು ಅವನೊಡನೆ ಎಂದೂ ಮತಾಡಿದ್ದಿಲ್ಲ, ಆದರೂ ಯಾವ ಕಾರಣದಿಂದಲೋ ಏನೋ ಯಾರಿಗೆ ಗೊತ್ತು, ವಸಂತನು ದಿವ್ಯಸುಂದರಿಯ ಹೃದಯವು ವಸಂತಮಯವಾಗಿರುತ್ತದೆಂದು ಭಾವಿಸಿದ್ದನು. ಇಂಥ ಭ್ರಾಮಕ ಕಲ್ಪನೆಗಳಿಂದ ಹುಚ್ಚನಾಗಿದ್ದ ವಸಂತನ ಕಣ್ಣಿಗೆ ದಿವ್ಯಸುಂದರಿಯು ವಿನಾಯಕ ನೊಡನೆ ಗುಲು ಗುಲು ಮಾತಾಡುವದು ಕಾಣಿಸಿದ ಕೂಡಲೆ ಅವನು ವಿನಾ ಯಕನ ವಿಷಯವಾಗಿ ವೈಷಮ್ಯ ತಾಳುವದರಲ್ಲಿ ಆಶ್ಚರ್ಯವೇನು? ಇಂದಿಲ್ಲ ನಾಳೆ, ಹೇಗಾದರೂ ಮಾಡಿ ತನ್ನ ಮೋಹಿನೀ ಅಸ್ತ್ರದಿಂದ ದಿವ್ಯಸುಂದರಿಯನ್ನು ವಶಮಾಡಿ ಕೊಂಡರೆ ಚಿಂತಾಮಣಿರಾಯನು ಸ್ತ್ರೀಸ್ವಾತಂತ್ರನ್ಯಾಯದಿಂದ ದಿವ್ಯಸುಂದರಿಯ ಲಗ್ನವನ್ನು ನನ್ನೊಡನೆಯೇ ಮಾಡುವದರಲ್ಲಿ ಸಂದೇಹವಿಲ್ಲ ಎಂಬದಾಗಿ ಸಂಪೂರ್ಣ ಭರವಸ ಮಾಡಿಕೊಂಡು, ವಸಂತನು ವಿನಾಯಕನ ವಿರುದ್ಧವಾಗಿ ರಾಮರಾಯನ ಕಿವಿಯಲ್ಲಿ ತುಂಬಬಾರದ್ದನ್ನು ತುಂಬಹತ್ತಿದನು, ವಿನಾಯಕನು ಅಶಿಕ್ಷಿತನಿದ್ದಾನೆ; ಅವನು ಸುಧಾರಣಾಪ್ರಿಯನಲ್ಲ. ಹಿಂದೂ ಇದ್ದಾನೆ; ಮೂರ್ತಿಪೂಜಕನಿದ್ದಾನೆ; ಸಭ್ಯಸ್ತ್ರೀಯರ