ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ನೆಯ ಪ್ರಕರಣ_ಸಖಿಸಂದರ್ಶನ! ೫1 ಹೊತ್ತಾದರೂ ಅವಳು ವಿನಾಯಕನ ಭವ್ಯ ಮೂರ್ತಿಯನ್ನು ಹೃದಯಪಟಲದ ಮೇಲೆ ಸ್ಥಾಪಿಸಿಕೊಂಡು ಏನೋ ವಿಚಾರಿಸುತ್ತ ಆ ಕಿಡಿಕಿಯ ಹತ್ತರವೇ ನಿಂತುಕೊಂಡಿದ್ದಳು; ಆದರೆ ಅಷ್ಟರಲ್ಲಿ ಯಾರೋ ಹಿಂದಿನಿಂದ ಬಂದು ಮೆತ್ತನ್ನ ಎರಡು ಕೈಗಳಿಂದ ಅವಳ ಕಣ್ಣು ಗಳನ್ನು ಮುಚ್ಚಿದರು. ಆ ಕೂಡಲೆ ದಿವ್ಯಸುಂದರಿಯು ಜಾಗೃತಳಾಗಿ ಆ ಕೈಗಳು ಯಾರವೆಂಬುವದನ್ನು ಹುಡುಕಹತ್ತಿದಳು, ಮೊದಲು ಅವಳು ಮಧುರೆಯಿರಬೇಕಾಗಿ ತರ್ಕಿಸಿದಳು; ಆದರೆ ಕೈಯನ್ನು ಹಿಡಿದು ನೋಡಿದ ಮೇಲೆ ಅವಳಿಗೆ ಮಧುರೆಯಲ್ಲ ವೆಂದು ನಂಬಿಗೆಯಾಯಿತು, ಅವಳು ಸ್ವಲ್ಪ ವೇಳೆ ಸುಮ್ಮನಿದ್ದು ಒಮ್ಮೆಲೇ ಹರ್ಷಪೂರಿತ ಸ್ವರದಿಂದ- ಓಹೋ, ನೀನು ಪರ್ವತದ ಮೇಲಿನಿಂದ ಹರಿಯುವ ನಮ್ಮ ನರ್ಮ ದೆಯು ಅಲ್ಲವೇ ? ” ಎಂದಳು. ದಿವ್ಯಸುಂದರಿಯ ಕಣ್ಣು ಮುಚ್ಚಿದ ಸ್ತ್ರೀಯ ಹೆಸರು ನರ್ಮದೆ ಹೌದು, ಅವಳು ದಿವ್ಯಸುಂದರಿಯ ಕಣ್ಣುಗಳ ಮೇಲಿನ ಕೈಗಳನ್ನು ತೆಗೆದು ನಗುತ್ತ:-ಹೌದು, ಅಶ್ರುವಾಹಿನೀ ದಿವ್ಯಸುಂದರಿ! ನಾನು ಪರ್ವತದ ಮೇಲಿನಿಂದ ಹರಿಯುತ್ತೇನೆಂಬು ವದು ನಿಜ, ಆದರೆ ಕಣ್ಣೀರುಗಳು ನಿನ್ನ ಮೇಲಿನಿಂದ ಹರಿಯುತ್ತವಲ್ಲ ! ಇದೇ ನೋಡು, ನನ್ನ ಕೈಗಳು ಎಷ್ಟು ತೊಯ್ಲಿ ರುತ್ತವೆ. ” ಎಂದಳು. ದಿವ್ಯಸುಂದರಿಯ ಕಣ್ಣಿನಿಂದ ಕಣ್ಣೀರು ಸುರಿಯುತ್ತಿದ್ದುದರಿಂದ ನರ್ಮದೆಯ ಕೈಗಳು ತೊಯ್ದಿದ್ದವು. ಅವಳು ತೊಯ್ದ ಕೈಗಳನ್ನು ತೋರಿಸಿದ ಕೂಡಲೆ ದಿವ್ಯಸುಂದರಿಗೆ ಬಹಳ ನಾಚಿಕೆ ಯೆನಿಸಿತು. ನರ್ಮದೆಗೆ ಹೇಳಬೇಕಾದದ್ದು ಅವಳಿಗೆ ತಿಳಿಯದೆ ಹೋಯಿತು. ಸರ್ಮ ದೆಯು ದಿವ್ಯಸುಂದರಿಯ ಬಾಲಸಖಿಯಾಗಿದ್ದಳು. ಚಿಕ್ಕಂದಿನಿಂದ ಗಂಟುಬಿದ್ದ ಅವ ರಿಬ್ಬರ ಸ್ನೇಹವು ಒಂದೇಸವನೆ ಹೆಚ್ಚುತ್ತಲೇ ನಡೆದಿದ್ದಿತು. ನರ್ಮದೆಯು ದಿವ್ಯಸುಂದ ರಿಗಿಂತ ವಯಸ್ಸಿನಿಂದ ಹಿರಿಯಳಾಗಿದ್ದಳು. ಅವಳ ತಾಯಿತಂದೆಗಳು ಸಾಧಾರಣ ಸ್ಥಿತಿ ಯವರಿದ್ದು, ಅವರು ಮಹಾಲಕ್ಷ್ಮೀದೇವಾಲಯದ ಹತ್ತರ ಸ್ವಂತ ಮನೆಯಲ್ಲಿ ಇರುತ್ತಿ ದ್ದರು. ನರ್ಮದೆಯು ಲಗ್ನ ವಾದ ಕೆಲವು ದಿವಸ ಗಂಡನ ಮನೆಯಲ್ಲಿದ್ದಳು; ಆದರೆ ದೀನಳ ಗಂಡನು ಅವಳ ಸೌಖ್ಯಕ್ಕೆ ನೀರುಬಿಟ್ಟು ಸ್ವಲ್ಪ ದಿನದಲ್ಲಿಯೇ ಮೃತಪಟ್ಟಿದ್ದ ರಿಂದಲೂ, ಗಂಡನ ಮನೆಯಲ್ಲಿ ಗಂಡನ ಹೊರ್ತು ಮಿಕ್ಕವರು ಯಾರೂ ಇಲ್ಲದ್ದರಿಂದಲೂ ಅವಳು ಮರಳಿ ತಂದೆಯ ಮನೆಯನ್ನು ಸೇರಿದ್ದಳು. ತನ್ನ ಗಂಡನ ಮನೆಯ ದುಡ್ಡನ್ನು ತಂದು ಅವಳು ತಂದೆಯಕಡೆಗೆ ಕೊಡಲಿಕ್ಕೆ ಹೋದಳು; ಆದರೆ ತಂದೆಯು ತನ್ನ ಕಡೆಗೆ ಇಟ್ಟು ಕೊಳ್ಳಲೊಪ್ಪದೆ ಅವಳ ಕಡೆಗೇ ಇರಲಿಕ್ಕೆ ಹೇಳಿದನು, ನರ್ಮದೆಯು ಆಚಾ ರವಂತಳೂ, ಬುದ್ಧಿವಂತಳೂ, ಉದಾರಳೂ ಆಗಿದ್ದಳು. ಅವಳು ಗಂಡನು ಸತ್ತನಂತರ ತೀರ ಸಾದಾ ಉಡಿಗೆಯನ್ನು ಧರಿಸುತ್ತಿದ್ದಳು. ಅವಳಿಗೆ ಇಂಗ್ರೇಜಿ-ಸಂಸ್ಕೃತ-ಮಹಾ ರಾಷ್ಟ್ರ ಭಾಷೆಗಳು ಬರುತ್ತಿದ್ದದ್ದರಿಂದ ಅವಳು ಆ ಎಲ್ಲ ಭಾಷೆಯ ಪುಸ್ತಕಗಳನ್ನು ತರಿಸಿ ಕೊಂಡು ಪ್ರತಿನಿತ್ಯ ಓದುತ್ತಿದ್ದಳು. ಬೆಳಗಿನ ಐದು ಹೊಡೆದ ಕೂಡಲೆ ಎದ್ದು ಸ್ನಾನ