ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ನೆಯ ಪ್ರಕರಣ-ಸಖಿಸಂದರ್ಶನ! ೫೬ ru ಕೊಳ್ಳುವದು ಬಹು ಕಠಿಣವಾದದ್ದರಿಂದ ಸಗುಣೋಪಾಸಕ ಜನರೇ ಹೆಚ್ಚಿರುತ್ತಾರೆ. ಮತ್ತು ಹಾಗಿರುವದರಿಂದ ಬಹು ಕಲ್ಯಾಣವಾಗುವದು. ” ಎಂದಳು. ನರ್ಮದೆಯ ಈ ಭಾಷಣವನ್ನು ದಿವ್ಯಸುಂದರಿಯು ಒಳ್ಳೆ ಲಕ್ಷ ಪೂರ್ವಕವಾಗಿ ಕೇಳುತ್ತಿದ್ದಳು, ಅವಳ ಮಾತು ಮುಗಿದ ಕೂಡಲೆ ದಿವ್ಯಸುಂದರಿಯು ಆರ್ತಸ್ವರ ದಿಂದ:- ನರ್ಮದೆ, ಆ ವಿಷಯವು ಇರಲಿ ಬಿಡು, ನಿಮ್ಮ ಅವ್ವನು ಮೊನ್ನೆ ಇಲ್ಲಿಗೆ ಬಂದು ಒಂದು ಸಂಗತಿಯನ್ನು ಹೇಳಿ ಹೋಗಿದ್ದಾಳೆ. ” ನರ್ಮದೆ:- ( ನಕ್ಕು ) ಏನು ಹೇಳಿರುವಳು ? ” ದಿವ್ಯ:- ನಿಜಾಮನ ರಾಜ್ಯದಲ್ಲಿ ನಿರ್ಮಲವೆಂಬ ಹೆಸರಿನ ಕ್ಷೇತ್ರವದೆಯಂತೆ. ನೀನು ಎಲ್ಲಾ ತ್ಯಾಜ್ಯ ಮಾಡಿ ಅಲ್ಲಿಗೆ ಹೋಗಬೇಕೆಂದು ಆಲೋಚನೆ ಮಾಡಿರುತ್ತೀ ಯಂತೆ, ಈ ಪ್ರಕಾರ ನೀನು ಹೋಗಬಾರದಾಗಿ ಮಾತೆಯ ಅಭಿಪ್ರಾಯವದೆ. ನರ್ಮದೆ, ಹೀಗೆ ನೀನು ಅಲ್ಲಿಗೆ ಹೋಗಲಿಕ್ಕೇಬೇಕೆಂದು ಆಲೋಚಿಸಿರುವಿಯೇನು ? ” ನರ್ಮದೆ:- ಹೌದು ದಿವ್ಯಸುಂದರಿ, ನಾನು ನಿನಗೆ ನನ್ನ ಎಲ್ಲ ವಿಚಾರವನ್ನು ತಿಳಿಸಿರುವದಿಲ್ಲವೇ? ” ದಿವ್ಯ:- ( ಕಣ್ಣೀರು ಸುರಿಸುತ್ತ ) ನೀನು ನಿರ್ಮಲಕ್ಷೇತ್ರಕ್ಕೆ ಹೋಗಿ ಮಾಡುವದನ್ನೆಲ್ಲ ಇಲ್ಲಿಯೇ ಮಾಡಲಿಕ್ಕೆ ಬರುವಂತಿಲ್ಲೇನು? !” ನರ್ಮದೆ:-( ದಿವ್ಯಸುಂದರಿ, ಮನುಷ್ಯನ ಚಮತ್ಕಾರವಾದ ಮನಸ್ಸಿನ ಸ್ಥಿತಿಯು ನಿನಗೆ ಇನ್ನೂ ಗೊತ್ತಾಗಿಲ್ಲ. ಇಲ್ಲಿಯೇ ಇದ್ದು ಮಾಡಬೇಕಾದದ್ದನ್ನು ಮಾಡಲಿಕ್ಕೆ ಬರುವದಿಲ್ಲೆಂಬಂತಿಲ್ಲ, ಆದರೆ ಇಲ್ಲಿ ಮನಸ್ಸನ್ನು ಚಂಚಲಮಾಡುವ ಪರಿಸ್ಥಿ ತಿಯು ಇದ್ದದ್ದರಿಂದ ನನ್ನಂಥವಳಿಗೆ ತೀರ ನಿರಾಮಯಸ್ಥಳಕ್ಕೆ ಹೋಗಿರುವದು ಯೋಗ್ಯವಾಗಿದೆ. ನಿದಾನ ನನ್ನ ಮನಸ್ಸಿನ ಮೇಲೆ ನನ್ನ ಸಂಪೂರ್ಣಾಧಿಕಾರವು ಕೂಡ್ರುವ ತನಕ ನಾನು ಏಕಾಂತದಲ್ಲಿಯೇ ಅಭ್ಯಾಸವನ್ನು ಮಾಡಲಿಕ್ಕೆಬೇಕು. ಒಳ್ಳೇದು, ಈಗ ಹೊತ್ತು ಬಹಳವಾಗಿದೆ. ನಾನು ಮನೆಗೆ ಹೋಗಲಿಕ್ಕೆಬೇಕು. ಬೇಕಾದರೆ ನಾಳೆ ಈ ಸಂಬಂಧವಾಗಿ ಮತ್ತಿಷ್ಟು ಮಾತಾಡುತ್ತ ಕೂಡೋಣ.” ಹೀಗನ್ನುತ್ತ ಖುರ್ಚೆಯಮೇಲಿಂದ ಎದ್ದು ಅವಳು ಮನೆಗೆ ಹೋದಳು. ದಿವ್ಯ ಸುಂದರಿಯು ಅವಳನ್ನು ಅಟ್ಟದ ವರೆಗೆ ಕಳಿಸಿ ತಿರುಗಿ ಬಂದು ತನ್ನ ದಿವಾಣಖಾನೆ ಯನ್ನು ಹೊಕ್ಕಳು, ಮತ್ತು ಶಂಕರನ ಭಾವಪಟದ ಎದುರಿಗೆ ಕುಳಿತು, ತನ್ನಯವೃತ್ತಿ ಯಿಂದ ಕಣ್ಣೀರು ಸುರಿಸುತ್ತ ಎರಡೂ ಕೈಗಳನ್ನು ಜೋಡಿಸಿ ಗದ್ದ ದಸ್ವರದಿಂದ:- (ಭೋ ದೇವರದೇವಾ, ನೀನು ನನ್ನಂಥ ಅಜ್ಞಭಕ್ತಳ ಸಲುವಾಗಿ ಸಾಕಾರವಾಗಿಯೇ ಇರು. ನೀನು ಅನಂತರೂಪಿಯಾಗಿದ್ದರೂ, ಸರ್ವ ಚರಾಚರವಸ್ತುಗಳನ್ನು ವ್ಯಾಪಿಸಿ ದ್ದರೂ ನನ್ನ ಸಲುವಾಗಿ ಮಾತ್ರ ಈ ಚತುರ್ಭುಜಮೂರ್ತಿಯೇ ಆಗಿರು, ನೀನು ನಿರಾ