ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ. wwwx •vvvvvvvvv 1 # \r\/ ಕಾರವಾಗಿರುತ್ತೀಯೆಂದು ಕೇಳಿ ನನಗೆ ಕಸಬಿಸಿಯಾಗುತ್ತದೆ. ನಿನ್ನ ಚರಣಕಮಲ ಗಳ ಮೇಲೆ ಮಸ್ತಕವನ್ನಿಟ್ಟು ಕಣ್ಣೀರು ಸುರಿಸುವದರಲ್ಲಿ ಆಗುವಷ್ಟು ಆನಂದವು ನಿನಗೆ ಚರಣಕಮಲಗಳಿಲ್ಲವೆಂಬ ಭಾವನೆಯಿಂದ ಎಂದೂ ಆಗುವದಿಲ್ಲ, ನೀನು ನಮ್ಮಂಥ ಭಕ್ತರ ಮೇಲೆ ಪ್ರೇಮಮಾಡುವದರಿಂದ ನಿನಗೆ ಹೃದಯವದೆ! ಕರುಣಾದೃಷ್ಟಿಯಿಂದ ನಮ್ಮನ್ನು ನೋಡುವದರಿಂದ ನಿನಗೆ ಕಣ್ಣುಗಳಿರಲಿಕ್ಕೆ ಬೇಕು!! ಭಗವಂತಾ, ಈ ನಿನ್ನ ಮಹದಾನಂದದಾಯಕ ಸಾಕಾರಸ್ವರೂಪವನ್ನು ಬಿಟ್ಟು, ಯಾಕೆ ನಾನು ಭ್ರಾಮಕದೃಷ್ಟಿಯಿಂದ ನಿರಾಕಾರವನ್ನು ತಿಳಕೊಳ್ಳುವ ಯತ್ನ ಮಾಡಲಿ! ೨” ಹೀಗನ್ನುತ್ತ ಶ್ರೀಶಂಕರಭಕ್ತಿವಿಶೇಷದಿಂದ ತನ್ನ ಮಸ್ತಕವನ್ನು ನೆಲಕ್ಕೆ ಹಚ್ಚಿ ಭೂದೇವಿಗೆ ಕಣ್ಣೀ ರಿನ ಮಜ್ಜನವನ್ನು ಮಾಡಿಸಿದಳು. ಜ ಸಖಿಸಂದರ್ಶನದ ಒಂದು ಚಿತ್ರವನ್ನಂತೂ ತೆಗೆದು ನಾವು ವಾಚಕರಿಗೆ ತೋರಿ ಸಿದೆವು, ಇನ್ನು ಈಗ ಎರಡನೇ ಚಿತ್ರವನ್ನು ತೆಗೆದು ತೋರಿಸುವದು ನಮಗೆ ಬಹು ಕಠಿಣವಾಗಿದೆ. ಯಾಕಂದರೆ ಈ ಚಿತ್ರವು ಮೊದಲನೇ ಚಿತ್ರದಂತೆ ಸುಲಭಸಾಧ್ಯ ವಾದದ್ದಲ್ಲ. ಇದರ ಸ್ವರೂಪಾದಿಗಳು ವಿಲಕ್ಷಣವಾದವುಗಳಿರುತ್ತವೆ. ಈ ಚಿತ್ರವನ್ನು ತೆಗೆಯಲಿಕ್ಕೆ ಸಾಕ್ಷಾತ್ ವಿಶ್ವಕರ್ಮನೇ ಬೇಕು, ಆದರೂ ವಸ್ತುಸ್ಥಿತಿಯಲ್ಲಿ ವಿಪ ರ್ಯಾಸಮಾಡದೆ ಆ ಚಿತ್ರವನ್ನು ರೂಪಿಸಲಿಕ್ಕೆ ನಾವು ಪ್ರಾರಂಭಿಸಿರುತ್ತೇವೆ. ಮುಂಬ ಯಿ ಪಟ್ಟಣದಲ್ಲಿ ಗಿರಗಾಂವದ ಒಂದು ಭಾಗಕ್ಕೆ ಇರುವ ಕೋಣೆಯಲ್ಲಿ ಒಬ್ಬ ತರು ೬ಣಿಯು ಒಂದು ಸಾದಾ ಖುರ್ಚಿಯ ಮೇಲೆ ಕುಳಿತು, ( ಯುವತೀರಂಜನ' ಎಂಬ ಹೆಸರಿನ ಒಂದು ಸಚಿತ್ರ ಮಾಸಿಕ ಪುಸ್ತಕವನ್ನು ಓದುತ್ತಿದ್ದಳು, ಅವಳು ಈಗಿನ ಹೊಸ ಪದ್ಧತಿಯಂತೆ ಮೈಮೇಲೆ ಒಂದು ಶರ್ಟು ಹಾಕಿಕೊಂಡು ಉಫ್ ಅಂದರೆ ಗಾಳಿಗೆ ಹಾರುವಂಥ ತೆಳ್ಳನ್ನ ಶುಭ್ರವಸ್ತ್ರವನ್ನು ಉಟ್ಟು ಕೊಂಡಿದ್ದಳು. ಅವಳು ಸಾಧಾರಣ ಎಣ್ಣೆಗರಿದಿನ ಬಣ್ಣದವಳಾಗಿದ್ದಳು. ಅವಳ ಮುಖದ ಮೇಲೆ ಸೌಂದರ್ಯದ ಯಾವ ಚಿನ್ದಗಳೂ ಇದ್ದಿಲ್ಲ; ಆದರೂ ಅವಳು ನೀಟವಾಗಿ ಬೈತಲೆಯನ್ನು ತೆಗೆದುಕೊಂಡು, ಹಣೆಯ ಮೇಲೆ ಸಾಸಿವೇಕಾಳಿಗಿಂತಲೂ ಸಣ್ಣದಾದ ಚಿಕ್ಕೆಯನ್ನು ಇಟ್ಟು ಕೊಂಡು ಎಷ್ಟೊಮಟ್ಟಿಗೆ ತನ್ನ ಮುಖದ ಮೇಲೆ ಕುರೂಪತ್ವದ ಲಕ್ಷಣವನ್ನು ಅಡಗಿಸಿದ್ದಳು. ಅವಳ ಕೈಯಲ್ಲಿ ಪುಸ್ತಕ ಮಾತ್ರ ಇದ್ದದ್ದು ನಿಜ, ಆದರೆ ಅದರ ಕಡೆಗೆ ಸ್ವಲ್ಪಾದರೂ ಅವಳ ಲಕ್ಷವಿಲ್ಲದಿದ್ದು, ಅವಳು ಯಾವದೋ ಒಂದು ಚಿಂತೆಯಲ್ಲಿ ಮಗ್ನಳಾಗಿದ್ದಳು. ನಡುನಡುವೆ ಪುಸ್ತಕದ ಪಾನು ತಿರುವಿಹಾಕುತ್ತ ಒಂದು ದಿಕ್ಕಿನ ಕಡೆಗೆ ತನ್ನ ಮುಂದಿನ ಆಯುಷ್ಯದ ಚಿತ್ರಪಟವದೆಯೆಂಬ ಭಾವನೆಯಿಂದ ಎಷ್ಟೋ ಹೊತ್ತು ನೋಡುತ್ತಿದ್ದಳು, ಈ ರೀತಿಯಿಂದ ಅವಳು ನೋಡುತ್ತಿರುವಾಗ ಒಮ್ಮೊಮ್ಮೆ ಅವಳ ಮುಖಮುದ್ರೆಯು ಉದಾಸೀನವಾಗುತ್ತಿದ್ದಿತು; ಒಮ್ಮೊಮ್ಮೆ ಅವಳು ನಿರಾಶೆಯ