ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ನೆಯ ಪ್ರಕರಣ- ಸಖಿಸಂದರ್ಶನ! MMwwwwvvvvvvvvvvvvvvvvvvvvvvvvvvvvvvv ಸುಸ್ಕಾರವನ್ನು ಬಿಡುತ್ತಿದ್ದಳು; ಹೊರಗೆ ಅವಳು ಸುಧಾರಣಾಪ್ರಿಯಳಾಗಿ ಕಾಣಿಸು ತಿದ್ದರೂ ಅಂತಃಕರಣದೊಳಗಿನ ಎಷ್ಟೋ ಪ್ರವೃತ್ತಿಗಳು ಅವಳಿಗೆ ಇನ್ನೂ ಅನು ಕೂಲವಾಗಿದ್ದಿಲ್ಲ; ಒಮ್ಮೊಮ್ಮೆ ಈ ಪ್ರವೃತ್ತಿಗಳು ಅವಳ ಅಂತಃಕರಣದಲ್ಲಿ ದೊಡ್ಡ ಬಂಡನ್ನೇ ಮಾಡುತ್ತಿದ್ದವು; ಒಮ್ಮೊಮ್ಮೆ ತನ್ನ ಮನೋವೃತ್ತಿಗಳು ತನ್ನನ್ನು ದುರ್ಮಾರ್ಗದ ಕಡೆಗೆ ಒಯ್ಯುತ್ತವೆಂದು ಆಲೋಚಿಸಲು ಅವಳಿಗೆ ಅನುತಾಪವಾಗುತ್ತಿದ್ದಿತು; ಆದರೆ ಆ ವೇಳೆಯು ಹೋಯಿತೆಂದರೆ ತಿರುಗಿ ಅವಳ ಮನಸ್ಸಿನಲ್ಲಿ ಸುಧಾರಿಸಿದ ಐಹಿಕಸುಖದ ವಿಚಾರವು ಬರುತ್ತಿದ್ದಿತು; ಮತ್ತು ಇದರಲ್ಲಿಯೇ ವಿನೊದವಿರುತ್ತ ದೆಂದು ಅವಳಿಗೆ ತೋರುತ್ತಿದ್ದಿತು. ಈ ಪ್ರಕಾರ ಅವಳು ವಿಚಾರಸಾಗರದಲ್ಲಿ ಮುಳು ಗೇಳುತ್ತಿರುವಾಗ ಅವಳ ಕೋಣೆಯ ಬಾಗಿಲಿನ ಮೇಲೆ ಕಟಕಟ ಸಪ್ಪಳವಾಯಿತು. ಆ ಕೂಡಲೆ ಆ ಸ್ತ್ರೀಯು ತನ್ನ ಖುರ್ಚೆಯಮೇಲಿಂದ ಚಟಕ್ಕನೆ ಎದ್ದು ಕೋಣೆಯ ಬಾಗಿಲು ತೆಗೆದಳು. ಮೊದಲು ಅವಳಿಗೆ ವಸಂತರಾಯನೇ ಬಂದಿರಬೇಕಾಗಿ ತೋರಿತು; ಆದರೆ ಅವನ ಬದಲಾಗಿ ತನ್ನ ಸಖಿಯ ಆಗಮನವಾದದ್ದರಿಂದ ಅವಳಿಗೆ ಒಳ್ಳೆ ಆನಂದವಾಯಿತು. ಅವಳ ದರ್ಶನವಾಗುತ್ತಲೇ ಈ ಸ್ತ್ರೀಯು ನಗುತ್ತ ಅವಳನ್ನು ಒಳಗೆ ಕರಕೊಂಡು ಬಂದು:-( ಲೀಲೆ, ನಾಲೈದು ದಿವಸ ಗಳಿಂದ ನಿನ್ನ ದರ್ಶನವೇ ಇಲ್ಲ ! ಚಂದ್ರಿಕೆಯು ಎಲ್ಲಿಗೆ ಹೋಗಿದ್ದಿತು. ” ಎಂದ ನ್ನುತ್ತ ಅವಳ ಕೈಯನ್ನು ಹಿಡಿದು ಖುರ್ಚಿಯ ಮೇಲೆ ಕೂಡ್ರಿಸಿದಳು. ಲೀಲೆಯು ಇಂದು ವಿಶೇಷ ಮನೋಹರವಾದ ಪೋಷಾಕು ಹಾಕಿಕೊಂಡದ್ದರಿಂದ ಅವಳ ಆ ಚಿತ್ರವಿಚಿತ್ರ ಆಪಾದಮಸ್ತಕಾಕೃತಿಯನ್ನು ಆ ಸ್ತ್ರೀಯು ಒಳ್ಳೇ ಕುತೂಹಲದಿಂದ ನೋಡುತ್ತಿದ್ದಳು. ಲೀಲೆಯು ಖುರ್ಚಿಯ ಮೇಲೆ ಕುಳಿತ ಕೂಡಲೆ ನಗುತ್ತ:- ಈ ಯುವತೀರಂಜನ ಮಾಸಿಕ ಪುಸ್ತಕದೊಳಗಿನ ಕೆಲಕೆಲವು ವಾಕ್ಯಗಳನ್ನು ಮುಖ ಪಾಠ ಮಾಡುವದಾಗಿ ಕಾಣಿಸುತ್ತದೆ. ಇರಲಿ, ಸರಲೆ, ಈ ಚಂದ್ರಿಕೆಯು ಎಲ್ಲಿಗೆ ಹೋಗಿರಬಹುದು ನೀನೇ ಹೇಳು ? ” ಕೋಣೆಯೊಳಗಿದ್ದ ಮೊದಲಿನ ಸ್ತ್ರೀಯ ಹೆಸರು ' ಸರಲೆ ” ಎಂಬುವದು ನಿಜ, ಅವಳು ಲೀಲೆಯ ಕಡೆಗೆ ಏನೋ ಚಮತ್ಕಾ ರಿಕ ದೃಷ್ಟಿ ಪಾತದಿಂದ ನೋಡಿ ಸ್ವಲ್ಪ ವ್ಯಂಗಸ್ವರದಿಂದ:-( ಬಹಳ ಮಾಡಿ ಚಕೋ ರದ ಭೆಟ್ಟಿಯ ಸಲುವಾಗಿ ಹೋಗಿರಬೇಕು; ಆದರೆ ಭೆಟ್ಟಿಯಾಯಿತೇ ? ಈಗ ಚಕೋ ರಕ್ಕೆ ಪೋಲೀಸರು ಬೆನ್ನು ಹತ್ತಿರುವದರಿಂದ ಅದು ಅತ್ತಿತ್ತ ಹಾರಾಡಹತ್ತಿರುತ್ತದೆ!” ಲೀಲೆ:-ಪೋಲೀಸರ ಕೈಯಿಂದ ಪಾರಾಗುವ ಮಂತ್ರವನ್ನು ಅವರು ಚನ್ನಾಗಿ ಕಲಿತಿರುತ್ತಾರೆ, ಮತ್ತು ಪುಣೆಯಲ್ಲಿ ಒಬ್ಬ ದೊಡ್ಡ ಮನುಷ್ಯನ ದ್ರವ್ಯವನ್ನು ಅಪಹ ರಿಸಿ, ಈಗ ಮೂರ್ತಿಯು ಒಬ್ಬ ದೊಡ್ಡ ಸರದಾರನಂತೆ ಇರುತ್ತದೆ.' ಸರಲೆ:- ( ಆಶ್ಚರ್ಯದಿಂದ ) ಲೀಲೆ, ನಿಜವೇನು ? ಅವರು ಬಹಳ ಮಾಡಿ ಆ ಇಂದಿರೆಯನ್ನು ಮುಂದು ಮಾಡಿ ಧನವನ್ನು ಕೂಡಿಸಿರಬಹುದು, ಸುಂದರಿಯಾದ