ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Lo ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ, MMon೦೧೧ownMon ಇಂದಿರೆಯನ್ನು ಒಬ್ಬ ವೃದ್ಧನಿಗೆ ಕೊಟ್ಟು ಆ ನೆವದಿಂದ ದುಡ್ಡು ಅಪಹರಿಸಿರಬಹುದು. ಚಲೋಹುಡುಗೆ ಇಂದಿರೆ ನಿಜವಾಗಿ ಅವಳ ಸಲುವಾಗಿ ನನಗೆ ದಯವು ಬರುತ್ತದೆ.” ಲೀಲೆ:-( ಛೇ! ಛೇ! ಅವಳು ಮಹಾಗುಲಾಮ ಪೋರಿಯು, ಅವಳು ಶಾಮ ರಾಯನ ತಂತ್ರದಂತೆ ನಡೆದಿದ್ದರೆ ಅವನು ಲಕ್ಷ ರೂಪಾಯಿ ಖಾವಂದನಾಗುತ್ತಿದ್ದನು; ಆದರೆ ಆ ಹುಚ್ಚಮುಂಡಿಯ ಹಣೆಯಲ್ಲಿ ವೈಭವದಿಂದ ಇರುವದೇ ಬರೆದಿಲ್ಲ. ರಂಡೆಯು ಇಹಲೋಕದ ರತಿಯಾಗಿದ್ದಾಳೆ; ಆದರೆ ಯಾವಾಗಲೂ ಗೋಸಾವಣಿ-ಬೈ ರಾಗಿಣಿ ಯಂತ ಧೂತವಸ್ತ್ರವನ್ನು ಉಟ್ಟು ಕೊಳ್ಳುತ್ತಾಳೆ ! ಸರಲೆ:-( ಹೋ ಹೋ ! ಇದು ಮಾತ್ರ ನಿಜ, ಒಂದು ವೇಳೆ ನಾವಿಬ್ಬರು ಅವಳಷ್ಟು ಸುಂದರರಿದ್ದರೆ ನಮ್ಮ ಈ ಪೋಷಾಕು ನಮಗೆ ಬಹಳೇ ಶೋಭಾಯಮಾನ ವಾಗಿ ಕಾಣಿಸುತ್ತಿದ್ದಿತು. ಹೋಗಲಿ ಬಿಡು ಅದು; ಏನು, ಶಾಮರಾಯನೊಡನೆ ನಿನ್ನ ಲಗ್ನವು ನಿಶ್ಚಿತವಾದಂತೆ ಕಾಣಿಸುತ್ತದೆ? ” ಲೀಲೆಗೆ ಸ್ತ್ರೀಧರ್ಮಾನುಸಾರ ಲಜ್ಜೆಯೇ ಇದ್ದಿಲ್ಲ. ಅವಳು ಒಬ್ಬ ಅಸಾಧಾರಣ ಸ್ತ್ರೀಯಿದ್ದಳು. ಸರಲೆಯ ಪ್ರಶ್ನೆ ದಿಂದ ಅವಳಿಗೆ ಲಜ್ಜೆಯು ಹುಟ್ಟಲಿಲ್ಲ. ಅವಳು ನಿರ್ಲಜ್ಞೆಯಿಂದ: ಲೀಲೆ:- ಈಗ ಅದರಲ್ಲಿ ನಿಶ್ಚಯಿಸುವದಾದರೂ ಏನು? ಅವರು ನನಗೆ ಆ ಬಗ್ಗೆ ಒಂದು ಪತ್ರವನ್ನೇ ಬರೆದುಕೊಟ್ಟಿದ್ದಾರೆ. ನಾನೂ ಅವರಿಗೆ ಒಂದು ಪತ್ರವನ್ನು ಬರೆದು ಕೊಟ್ಟಿದ್ದೇನೆ, ಇಬ್ಬರಿಗೂ ಅನುಕೂಲವೇಳೆಯು ದೊರೆಯಿತೆಂದರೆ ಸಹಜ ಒಂದು ತಾಸಿನಲ್ಲಿ ಲಗ್ನವು ಆಗೇ ಹೋಗುತ್ತದೆ ! " ಸರಲೆ:- ( ವ್ಯಂಗಸ್ವರದಿಂದ ) ಆ ಲಗ್ನದಿಂದಾದರೂ ಈಗ ನಿಮ್ಮಿರ್ವರ ಯಾವ ವ್ಯವಹಾರಗಳಿಗೆ ತೊಂದರೆ ಬಂದಿರುತ್ತದೆ? ಎಲ್ಲ ಕೆಲಸಗಳೂ ಎಡಬಿಡದೆ ನಡೆದಿರುತ್ತವೆ. ” ಲೀಲೆ:- ಸರಿ, ನಮ್ಮದಂತೂ ಆಯಿತು, ಹೋಗಲಿ ಬಿಡು, ವಸಂತ ರಾಯನೊಡನೆ ನಿನ್ನ ಲಗ್ನ ವಾಗದಿದ್ದರೂ ನೀನು ಆತನ ಸಂಗಡ ಮಾಡುವ ಎಲ್ಲ ವ್ಯವ ಹಾರಗಳು ಎಷ್ಟೋ ಸಾರೆ ನನ್ನ ಕಣ್ಣಿಗೆ ಬಿದ್ದಿರುತ್ತವೆ. ಸರಲೆ, ಹೌದೋ ಅಲ್ಲೋ?” ಸರಲೆ:-( ಲೀಲೆ, ಇದಕ್ಕೆ ನೀನು ಸುಧಾರಣೆಯೊಂದನ್ನು ಸ್ತ್ರೀ ನಿಜ, ಆದರೆ ಎಷ್ಟೋ ಜನರು ಈ ಬಗ್ಗೆ ನಿಂದೆಯನ್ನು ಮಾಡುತ್ತಾರೆ. ಒಮ್ಮೊಮ್ಮೆ ನನಗೂ ಈ ಕೆಲಸವು ಅಯೋಗ್ಯವಾಗಿ ತೋರುತ್ತದೆ. ? ಲೀಲೆ:- ( ನಗುತ್ತ) ಅಹಾ! ಹುಚ್ಚ ಸರಲೆ !! ನಿನಗೆ ಸ್ವಲ್ಪಾದರೂ ಧೈರ್ಯ ವಿಲ್ಲ. ಮೊದಲು ಯಾವದೊಂದು ಹೊಸ ವಿಷಯವನ್ನು ಅನುಕರಣ ಮಾಡುತ್ತಿರು ವಾಗ ಜನರ ನಿಂದ್ಯೋಕ್ತಿಗಳನ್ನು ಸಹನ ಮಾಡಬೇಕಾಗುತ್ತದೆ. ಒಂದು ವೇಳೆ