ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ನೆಯ ಪ್ರಕರಣ- ಸಖಸಂದರ್ಶನ! wmmonwww+MMMIMMwwwwmmer/www ನೀನು ಜನರ ಆ ಬಡಬಡಿಯ ಕಡೆಗಾದರೂ ಯಾಕೆ ಲಕ್ಷಗೊಡಬೇಕು ? ಸ್ತ್ರೀಯರು ನೀಟವಾಗಿ ಬೈತಲೆಯನ್ನು ತಕ್ಕೊಂಡು, ಟಾರ್ಚನೆಯಿಂದ ಕುಂಕುಮವನ್ನು ಹಚ್ಚಿ ಕೊಂಡು, ಕೈಯಲ್ಲಿ ಕರವಸ್ತ್ರವನ್ನು ಹಿಡಕೊಂಡು, ಕಾಲಿನಲ್ಲಿ ಬೂಟುಗಳನ್ನು ಹಾಕಿ ಕೊಂಡು ಪುರುಷರ ಸಂಗಡ ಮಾತುಕಥೆಗಳನ್ನಾಡುತ್ತ ಬೀದಿಯಲ್ಲಿ ತಿರುಗಾಡಿದ ಕೂಡಲೆ ಇವರ ಒದರಾಟವು ಪ್ರಾರಂಭವಾಗುವದು, ಸ್ವತಃ ತಮಗೂ ಸುಧಾರಣೆಯು ಬೇಡ, ಮಂದಿಮಾಡಿದರೂ ಸಹಿಸುವಂತಿಲ್ಲ. " ಸರಲೆ:- “ ( ಅತ್ತಿತ್ತ ನೋಡಿ ) ಸಿಕ್ಕ ಸಿಕ್ಕ ಜನರೊಡನೆ ಸ್ನೇಹಮಾಡು ವದೂ, ಅವರೊಡನೆ ಮಧ್ಯಪಾನಮಾಡುವದೂ ಸುಧಾರಣೆಯಲ್ಲವಷ್ಟೆ ?” ಲೀಲೆ:- ಇದು ಕೂಡ ನಿಸ್ಸಂಶಯವಾಗಿ ಸುಧಾರಣೆಯು ಹೌದು, ಯಾವ ಹಕ್ಕುಗಳು ಪುರುಷರಿಗೆ ಇರುತ್ತವೆಯೋ ಅವೇ ಹಕ್ಕುಗಳು ಸ್ತ್ರೀಯರಿಗೂ ಇರುತ್ತವೆ. ದ್ವೇಚ್ಛಾಚಾರಿಯಾಗಿ ನಡೆಯುವ ವುರುಷನಿಗೆ ಮಾತ್ರ ಬ್ರಹ್ಮನು ಸನದು ಕೊಟ್ಟಿದ್ದಾನೆ; ಆದರೆ ಸ್ತ್ರೀಯರು ಮಾತ್ರ ಕಳವುಮಾಡಿದಂತೆ ಕಾಣಿಸುತ್ತದೆ. ಇದು ಒತ್ತಟ್ಟಿಗಿರಲಿ. ನಾಲ್ಕಾರು ಮಂದಿ ಪುರುಷರ ಪರಿಚಯವಾದ ಹೊರ್ತು ಲಗ್ನ ವನ್ನು ಯಾರ ಸಂಗಡ ಆಗಬೇಕೆಂಬುವದು ಗೊತ್ತಾಗುವದಿಲ್ಲ. ಇದು ನೋಡು, ಪಾಪ-ಪುಣ್ಯಗಳು ಕೇವಲ ಮನಸ್ಸಿನ ಕಲ್ಪನೆಗಳಾಗಿರುತ್ತವೆ, ಕೆಲವು ಕೆಲಸಗಳು ಎಷ್ಟೋ ಜನರಿಗೆ ಪಾಸಮಯ ವಾಗಿ ತೋರಿದರೆ ಅವೇ ಕೆಲಸಗಳು ಎಷ್ಟೋ ಜನರಿಗೆ ಪುಣ್ಯಮಯವಾಗಿ ತೋರು ತವೆ. ಸ್ತ್ರೀಯರು ಮಧ್ಯಪಾನಮಾಡುವದೂ, ನಾಲ್ಕಾರು ಮಂದಿ ಪುರುಷರೊಡನೆ ಪತಿಯಂತೆ ವರ್ತನವಿಡುವದೂ ನಿಜವಾಗಿ ಪಾಪವಲ್ಲ. ಈ ಬಗ್ಗೆ ಜನರು ಬೇಕಾದಷ್ಟು ನಿಂದೆಯನ್ನು ಮಾಡಲಿ, ನಮ್ಮ ಸುಧಾರಣಾರಥವು ಹೀಗೆಯೇ ಪ್ರಗತಿಯಿಂದ ಮುಂದೆ ಹೋಗುವದು, ಈ ನಿಂದೆಯನ್ನು ಮಾಡುವವರು ಮಾತ್ರ ಹಿಂದೆಯೇ ಉಳಿಯುವರು. ಹೋಗಲಿ, ಇಂಥ ನಿಂದಕರ ನಿಂದೆಗೆ ನೀನೆಂದೂ ಕಿವಿಗೊಡಬೇಡ, ಒಂದು ವೇಳೆ ನಾವು ಜನರ ನಿಂದೆಯ ಕಡೆಗೆ ಲಕ್ಷಗೊಟ್ಟು ನಡೆಯಹತ್ತಿದರೆ ನಮ್ಮ ಕೈಯಿಂದ ಒಂದು ಸುಧಾರಣೆಯಾದರೂ ಧಡಕ್ಕೆ ಹತ್ತುವದಿಲ್ಲ, ಮಾನವರ ಮೆಚ್ಚಿಗೆಯಿಲ್ಲದ ನಮ್ಮ ಕೆಲಸ ಗಳಿಗೆ ದೇವತೆಗಳ ಮೆಚ್ಚಿಗೆಯಿರುತ್ತದೆಂಬುವದು ( aa araeg 77ನೆ

  • ai: ” ಎಂಬ ಶೋಕದಿಂದ ಪೂರ್ಣ ಸಿದ್ಧವಾಗುತ್ತದೆ. ಈ ಸ್ಪಷ್ಟವಾದ ನ್ಯಾಯವು ಈ ನಿಂದಕರ ಲಕ್ಷದಲ್ಲಿ ಯಾಕೆ ಬರುವದಿಲ್ಲವೋ ಏನೋ ! )

ವಾಚಕರೇ! ನೋಡಿದಿರಾ!! ಲೀಲೆಯ ಪಾಂಡಿತ್ಯವನ್ನು ಇಂಥ ಸ್ತ್ರೀಯರ ಸಂಖ್ಯೆಯು ಬೆಳೆಯುತ್ತ ಹೋದಲ್ಲಿ ನಮ್ಮ ಹಿಂದೂಸಮಾಜಸ್ತ್ರೀಪದ್ದತಿಯ ಕುರುಹು ಸ್ವಲ್ಪಾದರೂ ಉಳಿದೀತೇ? ಲೀಲೆಯ ಪಾಂಡಿತ್ಯಕ್ಕೆ ಸರಲೆಯು ತೀರ ಮುಗ್ಧಳಾಗಿ ಹೋದಳು, ಅವಳು ಲೀಲೆಯ ಕಡೆಗೆ ನೋಡಿ “ ಲೀಲೆ, ನಿನ್ನ ಉಪ ದೇಶವಚನಗಳಿಂದ ನನ್ನ ಮನಸ್ಸಿನ ಸಂಶಯವು ಸಮೂಲವಾಗಿ ಲೋಪವಾಯಿತು, ”