ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L MMMMMMwwwMAAAAAAAAAAAAAAAAAAAAA AAAAAAAAnnnnnAMMow ದಿವ್ಯಸುಂದರಿ ಅಥವಾ ದೀರ್ಘ ಪ್ರಯತ್ನ. ಎಂದಳು. ಅಷ್ಟರಲ್ಲಿ ಖಾಡಖಾಡ ಬೂಟಿನ ಸಪ್ಪಳವಾಡುತ್ತ ವಸಂತನು ಕೊಣೆ ಯಲ್ಲಿ ಬಂದನು, ಅವನು ಬಂದ ಕೂಡಲೆ ಒಂದು ಮೂಲೆಯೊಳಗಿದ್ದ ಖುರ್ಚಿಯ ಮೇಲೆ ಕುಳಿತು, ಟೊಪ್ಪಿಗೆಯನ್ನು ಹತ್ತಿರದಲ್ಲಿದ್ದ ಮೇಜಿನ ಮೇಲಿಟ್ಟು ಹುಶಹುಶ ಮಾಡಹತ್ತಿದನು. ಲೀಲಾ-ಸರಲೆಯರ ಕಡೆಗೆ ಅವನ ಲಕ್ಷವಿದ್ದಿಲ್ಲ. ಅವನ ಕಣ್ಣು ಗಳು ಕೆಂಪಗಾಗಿದ್ದವು, ಅವನು ಒಳಗೆ ಬಂದಕೂಡಲೆ ಮದ್ಯದ ವಾಸನೆಯು ಕೋಣೆ ತುಂಬ ಪಸರಿಸಿತು. ಮೂರ್ತಿಯು ಮದಿರಾಮಂದಿರಕ್ಕೆ ಹೋಗಿ ಬಂದಿರುತ್ತದೆಂಬುವ ದನ್ನು ಅವರಿಬ್ಬರು ಕೂಡಲೆ ಕಂಡುಹಿಡಿದರು. ವಸಂತನು ಬಂದ ಕೆಲಹೊತ್ತಿನ ಮೇಲೆ ಲೀಲೆಯು ನಗುತ್ತ ವಸಂತನನ್ನು ಕುರಿತು II ಶಾಮರಾಯರು ನಿಮಗೆ ಒಂದು ಕೆಲಸದ ಸಲುವಾಗಿ ಹೇಳಿದ್ದಾರೆ. ” ಎಂದಂದಳು, ಇತ್ತ ಸರಲೆಯು ತ್ವರೆಯಿಂದ ಸ್ಕೋ ಹೊತ್ತಿಸಿ ಚಹಾಮಾಡಲಿಕ್ಕೆ ಆರಂಭಿಸಿದಳು. ಲೀಲೆಯು < ಶಾಮರಾಯ ? ಎಂದಂದ ಕೂಡಲೆ ವಸಂತನು ಜಾಗೃತಾವಸ್ಥೆಯಲ್ಲಿ ಬಂದು, ಲೀಲೆಯ ಕಡೆಗೆ ತಿರುಗಿ « ಶಾಮರಾಯರು ನನಗೆ ಯಾವ ಕೆಲಸವನ್ನು ಹೇಳಿದ್ದಾರೆ. ೨” ಎಂದು ಕೇಳಲು ಲೀಲೆಯು ತನ್ನ ಕೈಯೊಳಗಿನ ಪತ್ರವನ್ನು ಅವನ ಕೈಯಲ್ಲಿ ಕೊಟ್ಟಳು, ಕೈಯಲ್ಲಿ ಪತ್ರವು ಸಿಕ್ಕ ಕೂಡಲೆ ಅವನು ಪತ್ರದ ಮೇಲಿನ ಹೊದಿಕೆಯನ್ನು ತೆಗೆದೊಗೆದು ಆ ಪತ್ರವನ್ನು ಒಳ್ಳೆ ಉತ್ಸುಕತೆಯಿಂದ ಓದಹತ್ತಿದನು. ಪತ್ರದ ಅಭಿಪ್ರಾಯವನ್ನು ನೋಡಿ ಅವನಿಗೆ ಮಿತಿಮೀರಿ ಆನಂದವಾಯಿತು. ಅವನು ಆನಂದದ ಭರದಲ್ಲಿ ಗಟ್ಟಿ ಯಾಗಿ:-( ಆ ವಿನಾಯಕನಿಗೆ ಇನ್ನು ಮೇಲೆ ನನ್ನ ಕೈಯನ್ನು ತೋರಿಸುತ್ತೇನೆ ? ಎಂದಂದು ನಗುತ್ತ ಲೀಲೆಯ ಕಡೆಗೆ ನೋಡಿ ( ಒಳ್ಳೇದು, ನಾನು ಈ ಪತ್ರದ ಪ್ರಕಾರ ವ್ಯವಸ್ಥೆ ಮಾಡುತ್ತೇನೆ, ೨” ಎಂದನು. ಇಷ್ಟರಲ್ಲಿ ಸರಿಯು ಚಹಾದ ಬೇಲಿಗಳನ್ನು ತಂದು ಒಬ್ಬೊಬ್ಬರಿಗೆ ಒಂದು ಪೇಲಿಯನ್ನು ಕೊಟ್ಟು ತಾನೂ ಒಂದು ಪೇಲಿಯನ್ನು ತಕ್ಕೊಂಡಳು. ಲೀಲೆಯು ಚಹಾ ಕುಡಿದು ಆ ಇಬ್ಬರ ಅಪ್ಪಣೆಯನ್ನು ತಕ್ಕೊಂಡು ಹೊರಟುಹೋದಳು. ಲೀಲೆಯು ಹೋದಕೂಡಲೆ ವಸಂತ ಸರಲೆಯರ ಮಾತು ಕಥೆಗಳು ಪ್ರಾರಂಭವಾದವು. ಸರಲೆ:- ( ಮುಸುಡಿ ಗಂಟುಹಾಕಿಕೊಂಡು ) ನೋಡಿದಿರಾ ಲೀಲೆಯ ಪೋಷಾಕು!! ನನಗೆ ಬಂಗಾರದ ಚಾಳೀಸೂ, ಲೇಡೀ ಬೂಟ್ಟೂ ಬೇಕೆಂದು ನಿಮಗೆ ಎಷ್ಟೋಸಾರೆ ಹೇಳಿರುವೆನು; ಆದರೂ ಆ ಕಡೆಗೆ ನೀವು ಸ್ವಲ್ಪಾದರೂ ಲಕ್ಷಗೊಡು ವದಿಲ್ಲ. ” - ವಸಂತ:- ( ಅವಳಿಗೆ ಕಾಣದಂತೆ ಅವಳನ್ನು ಕೆಟ್ಟ ಕಣ್ಣಿನಿಂದ ನೋಡಿ) ಸರಲೆ, ನಿನಗಿಂತ ಮೊದಲು ನಿನ್ನ ಪೋಷಾಕಿನ ಬಗ್ಗೆ ನನಗೆ ಬಹಳ ಹಳಹಳಿಯಾಗಿದೆ. ಏನು ಮಾಡಲಿ, ಕೈಯಲ್ಲಿ ದ್ರವ್ಯವಿಲ್ಲ. ಒಮ್ಮೆ ಕೈಯಲ್ಲಿ ಹಣದ ಸಂಗ್ರಹವಾಯಿ ತೆಂದರೆ ನಿನ್ನ ಇಚೆ ಯನ್ನು ಪೂರ್ಣಮಾಡುವೆನು. ”