ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪ನೆಯ ಪ್ರಕರಣ-ಸಖಿಸಂದರ್ಶನ! veMwwwy ಸರಲೆ: ಆ ದ್ರವ್ಯವು ನಿಮ್ಮ ಕೈಯಲ್ಲಿ ಕೂಡಬೇಕೆಂದು-ನನ್ನ ಇಚ್ಛೆಯ ಪೂರ್ಣವಾಗಬೇಕೆಂದು ? ?) ವಸಂತ:- ( ಸರಲೆಯನ್ನು ಹತ್ತರ ಜಗ್ಗಿ ಕೊಂಡು ) ಇದನ್ನು ನೋಡು, ಶಾಮರಾಯನ ಪತ್ರದ ಮೇಲಿಂದ ಒಂದು ಹುಂಡಿಯು ಬೇಗನೆ ದೊರೆಯುವಂತೆ ಕಾಣುತ್ತದೆ. ಆ ರಕಂ ಸಿಕ್ಕ ಕೂಡಲೆ ನಿನಗೆ ಬೇಕಾದದ್ದನ್ನು ತಂದು ಚಲ್ಲಿ ಬಿಡುತ್ತೇನೆ. " ಸರಲೆ:- ( ಮಧ್ಯಪಾನಮಾಡಿದವರಂತೆ ಉನ್ಮತ್ತಳಾಗಿ ಹರ್ಷಭರದಿಂದ) ಈ ಮಾತು ನಿಜವಷ್ಟೇ ?” ವಸಂತ:- ( ಕುತ್ತಿಗೆಯ ಮೇಲೆ ಕೈಯನ್ನು ಹಾಕಿ ) ನಾನು ನಿನ್ನಾಣೆಯಾಗಿ ಸುಳ್ಳು ಹೇಳುವದಿಲ್ಲ, ನನ್ನ ಪ್ರೇಮಸರ್ವಸ್ವವೇ ನೀನಾಗಿರುವಿ, ನಿನ್ನ ಶೃಂಗಾರ ದಿಂದಾಗುವ ಆನಂದವು ಆ ನಿರಾಕಾರದೇವನಿಗೆ ಗೊತ್ತು ! ೨೨ ಹೀಗನ್ನುತ್ತ ಸರಲೆಯನ್ನು ಅಲಂಗಿಸಿದನು. ಇದರಿಂದ ಸರತೆಗೆ ಅತ್ಯಾನಂದ ವಾಯಿತು, ಅವಳು ಮೆಲ್ಲನೆ ವಸಂತನ ಕೈಯಿಂದ ತನ್ನ ಕೈಯನ್ನು ಬಿಡಿಸಿಕೊಂಡು ಶಾಲು ಮೈಮೇಲೆ ಹಾಕಿಕೊಂಡು ತಿರುಗಾಡುವದಕ್ಕೆ ಸಮುದ್ರದಂಡೆಗೆ ಹೋದಳು. ಸರಲೆಯು ಹೋದ ಕೂಡಲೆ ವಸಂತನು ಮೇಲಕ್ಕೆದ್ದು ಬಾಗಿಲು ಹಾಕಿಕೊಂಡು ಸೊಟ್ಟ ಮೋರೆ ಮಾಡಿಕೊಂಡು ತನ್ನ ಷ್ಟಕ್ಕೆ ತಾನೇ “ ಈ ನಮ್ಮ ಅತ್ಮವಕ್ರಳಿಗೆ ಬೂಟು ಚಾಳೀಸು ಬೇಕಂತೆ, ಅಹಹ ಏನು ಇವಳ ಅಪೇಕ್ಷೆ ! ಇವಳಿಗೆ ವಸಂತನು ತನ್ನೊಡನೆ ಲಗ್ನವಾಗುತ್ತಾನೆಂದು ತೋರಿದೆ. ಆದರೆ ಈ ವಸಂತಬಹಾದ್ದೂರನು ದಿವ್ಯಸುಂದರಿಯನ್ನೆ ತನ್ನ ರಾಣಿಯನ್ನಾಗಿ ಮಾಡಿಕೊಳ್ಳುವನು ! ಶಾಮರಾಯ ಗೋಪಾಳರಾಯರ ಸಹವಾಸದಿಂದ ಚಿಂತಾಮಣಿರಾಯನ ದುಡ್ಡಿನ ಕೊಪ್ಪರಿಗೆಯೂ, ದಿವ್ಯಸುಂದರಿಯೂ ಕೈವಶವಾಗದಿದ್ದರೆ ನಾವು ಮಾಡಿದ ಕಾರಸ್ಥಾನವು ಕಾರಸ್ಥಾನವೇ? ಮೊದಲು ಯಾವ ಬಗೆಯಿಂದಾದರೂ ವಿನಾಯಕನನ್ನು ದೂರಮಾಡಿ, ನಂತರ ಯುಕ್ತಿ ಪ್ರಯುಕ್ತಿಯಿಂದ ರಾಮರಾಯನ ಮನಸ್ಸಿನಲ್ಲಿ ನನ್ನ ಸಲುವಾಗಿ ಪೂಜ್ಯಬುದ್ಧಿಯನ್ನು ಹುಟ್ಟಿಸಿ ದಿವ್ಯಸುಂದರಿಗೆ ವಸಂತನ ಮನೋಹರ ಸಾಮರ್ಥವನ್ನು ತೋರಿಸಲಿಕ್ಕೆ ಬೇಕು. ?” ಹೀಗನ್ನುತ್ತ ಸೇಡು ತೀರಿಸಿಕೊಳ್ಳುವ ದೃಷ್ಟಿಯಿಂದ ಒಂದು ದಿಕ್ಕಿನ ಕಡೆಗೆ ನೋಡಿದನು, ಆಗ ಅವನು ಪ್ರಳಯಕಾಲದ ಯಮನಂತೆ ತೋರಿದನು |