ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯಸು೦ದರಿ ಅಥವಾ ದೀರ್ಘ ಪ್ರಯತ್ನ. NAAAAAAAAAAAA hhhhhhhhhhhhh/AAA Arshhhhh -ಇ. ೫ನೆಯ ಪ್ರಕರಣ. ವನದೇವತೆ! 4. ವಿ ನಾಯಕನು ರಾಮಪುರಕ್ಕೆ ಬಂದು ಆರು ತಿಂಗಳಾಗಿದ್ದಿತು. ಅವನು ತ್ಯ' ಮೊದಲು ಹಮ್ಮಿದ ಉದ್ಯೋಗವು ಆರುತಿಂಗಳದಿದ್ದರೂ, ಪರಿಶ್ರಮವಿಶೇಷದಿಂದ ಶುದ್ದ ಕಬ್ಬಿಣದ ಕಾರಖಾನೆಯನ್ನೇ ಹೊರಡಿಸಿದನು, ಈ ಕೆಲಸಕ್ಕೆ ಅವನಿಗೆ ಆಗ ತಕ್ಕಷ್ಟು ಧನದ ಸಹಾಯವಾಗದಿದ್ದರೂ, ಅವನಂತೆ ಉದ್ಯೋಗಶೀಲರಾದ ನಾಲ್ಕಾರು ಮಂದಿ ತರುಣರ ಸಹಾಯವು ಮಾತ್ರ ಅವನಿಗೆ ಲಭಿಸಿದ್ದಿತು. ಆ ತರುಣರಾದರೂ ಬೇರೆ ಬೇರೆ ದೇಶಗಳಲ್ಲಿ ಖನಿಜಶಾಸ್ತ್ರಾಭ್ಯಾಸವನ್ನು ಮಾಡಿದವರಾಗಿದ್ದರು. ಅವರಲ್ಲಿ ಇಬ್ಬರಂತೂ ಬಡೋದಾ ಮೈಸೂರ ಸಂಸ್ಥಾನಗಳಲ್ಲಿ ಖನಿಜವಸ್ತು ಶೋಧನದ ನವ ಕರರಿದ್ದರು. ಆ ಸಂಸ್ಥಾನಗಳಲ್ಲಿ ವಿಪುಲವಾಗಿ ಖನಿಜಗಳು ಸಿಗುತ್ತಿದ್ದರೂ, ಕಾರ ಖಾನೆಯನ್ನು ತೆಗೆಯಲಿಕ್ಕೆ ಅನುಕೂಲತೆಗಳಿದ್ದರೂ ಅಲ್ಲಿ ಕಾರಖಾನೆಯನ್ನು ತೆಗೆ ಯುವ ಲಕ್ಷಣವು ತೋರದ್ದರಿಂದ ಅವರು ನವಕರಿಗೆ ನೀರು ಬಿಟ್ಟು ವಿನಾಯಕನಿಗೆ ಬಂದು ಕೂಡಿದರು. ವಿನಾಯಕನು ಅವರನ್ನು ತನ್ನ ಕಾರಖಾನೆಯಲ್ಲಿ ಹಿಸ್ಸೇದಾರರ 'ನ್ನಾಗಿ ಮಾಡಿದನು. ಈ ಎಲ್ಲರ ಅಲ್ಪಸ್ವಲ್ಪ ಭಾಂಡವಲವು ಏಕತ್ರವಾದದ್ದರಿಂದ ಆರು ತಿಂಗಳೊಳಗೇ ವಿನಾಯಕನ ಕಾರಖಾನೆಯು ಒಳ್ಳೇ ರೂಪಕ್ಕೆ ಬಂದಿತು. ವಿಶ್ವಕರ್ಮನು ನಿರ್ಮಾಣಮಾಡಿದ ಭೂಮಿಯ ಮೇಲೆ ಕಾದಂಬರಿಯ ಕಥಾ ನಕದ ಆರಂಭದ ವೇಳೆಯಲ್ಲಿ ರಾಮಪುರಗ್ರಾಮವು ಎಡಬಲ ಹಳ್ಳಿಗಳಿಗಿಂತ ಸ್ವಲ್ಪ ದೊಡ್ಡದಾಗಿದ್ದು, ಆ ರಾಮಪುರಭೂಮಿಯಲ್ಲಿ ರಾಮಪುರಸಹಿತ ಹದಿನಾರು ಹಳ್ಳಿ ಗಳು ಮಾತ್ರ ಇದ್ದವು, ರಾಮಪುರಪ್ರದೇಶವು ಎಲ್ಲ ಕೂಡಿ ಹದಿನೈದ್ದು-ಇಪ್ಪತ್ತು ಹರ ದಾರಿ ವಿಸ್ತಾರವುಳ್ಳದ್ದದೆ. ಈ ಪ್ರದೇಶದ ದಕ್ಷಿಣದಿಕ್ಕಿಗೆ ಗೋದಾವರಿ ನದಿಯು ಹರಿಯುತ್ತಿದ್ದು, ಉತ್ತರದಿಕ್ಕಿಗೆ ಪರ್ವತದ ಪಂಕ್ತಿಯು ಹಬ್ಬಿರುತ್ತದೆ. ರಾಮಪುರದಿಂದ ಹತ್ತು ಹರದಾರಿಯ ಮೇಲೆ ಗೋದಾವರೀ ನದಿಯಿದ್ದು, ಅಲ್ಲಿ ಬಸರಾಬಾದವೆಂಬ ಹೆಸರಿನ ಒಂದು ಹಳ್ಳಿಯದೆ, ಈ ಹಳ್ಳಿಯಿಂದ ರಾಮಪುರಕ್ಕೆ ಹೋಗಲಿಕ್ಕೆ ಒಂದು ಸಣ್ಣ ಚಕ್ಕಡಿಯ ಹಾದಿಯದೆ. ರಾಮಪುರಕ್ಕೆ ಹೋಗಲಿಕ್ಕೆ ಅನುಕೂಲವಾಗಿ ಬೇಜ