ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ನೆಯ ಪ್ರಕರಣ- ವನದೇವತೆ ! \ مممممر رسرمرم MMIMA•MMMJIJIMM YYYYAM4 ವಾಡೆಯೆಂಬ ರೇಲ್ವೇ ಸ್ಟೇಶನ್ನು ಇರುತ್ತದೆ. ಇಲ್ಲಿಂದ ಬಸರಾಬಾದದ ತನಕ ಸಣ್ಣ ಸಣ್ಣ ಉಗಿಯ ಹಡಗಗಳು ಹೊರಬರಲಿಕ್ಕೆ ಶಕ್ಯವಿರುತ್ತದೆ; ಆದರೆ ಇಷ್ಟರ ಮೇಲಿಂದ ಬಸರಾಬಾದವು ನದೀತೀರದ ಬಂದರವಿರುತ್ತದೆಂದು ಯಾರೂ ತಿಳಿಯ ಬಾರದು. ವಿನಾಯಕನು ಹೋದಾಗ ಅದು ಹಳ್ಳಿಯಾಗಿದ್ದು ಈಗಲೂ ಅದೇ ಸ್ಥಿತಿ ಯಲ್ಲಿರುತ್ತದೆ. ವಿನಾಯಕನು ರಾಮಪುರಕ್ಕೆ ಹೋದ ಕೂಡಲೆ ಅಲ್ಲಿಯ ಜನರ ದಾರಿದ್ರ ಸ್ಥಿತಿಯನ್ನು ನೋಡಿ ಅವನಿಗೆ ಬಹು ದುಃಖವೆನಿಸಿತು. ದೀನರು ಮುಂಜಾವಿನಿಂದ ಸಂಜೆಯತನಕ ತಮ್ಮ ಹೊಲಗಳಲ್ಲಿ ಕಾಬಾಡಗಷ್ಯ ಮಾಡಿ.1ರೂ, ಅವರ ಮೈಮುಚ್ಚು ವಷ್ಟು ಬಟ್ಟೆಗಳಿಲ್ಲದ್ದನ್ನೂ, ಹೊಟ್ಟೆ ತುಂಬುವಷ್ಟು ಆಹಾರವಿಲ್ಲದ್ದನ್ನೂ ನೋಡಿ ಅವನ, ಅವನ ಸ್ನೇಹಿತರ ಅಂತಃಕರಣಗಳು ದ್ರವಿಸಿ ಅವರ ಕಣ್ಣುಗಳಲ್ಲಿ ಕಣ್ಣೀರುಗಳು ತುಂಬಿಬಂದವು, ಯಾರ ಪರಿಶ್ರಮದಿಂದ ನಮ್ಮ ಭರತಖಂಡದ ನಿವಾಸಿಗಳಿಗೆ ಅನ್ನ ವಸ್ತ್ರಗಳು ಸಿಗುತ್ತವೆಯೋ, ಆ ಒಕ್ಕಲಿಗರ ದೈನ್ಯಾವಸ್ಥೆಯನ್ನು ನೋಡಿ ವಿನಾಯಕ ನಂಥ ಕರುಣಾಳುವಾದ ಮನುಷ್ಯನ ಹೃದಯವು ವಿದೀರ್ಣವಾದದ್ದರಲ್ಲಿ ಆಶ್ಚರ್ಯ ವಿಲ್ಲ! ವಿನಾಯಕನು ಒಕ್ಕಲಿಗರ ಮನೆಮನೆಗೆ ಹೋಗಿ ವಿಚಾರಿಸಿ ರಾಮಪುರದಲ್ಲಿ ಧಾನ್ಯ ಬಿತ್ತಲಿಕ್ಕೆ ಸಮರ್ಥವಾದ ಭೂಮಿಗಳು ಸ್ವಿ ಇದ್ದರೂ, ಅವು ಬರೇ ಮಳೆಯ ನೀರಿಂದಲೇ ಬೆಳೆಯಬೇಕಾದದ್ದರಿಂದ ಅಷ್ಟಕ್ಕಷ್ಟೆ ಬೆಳೆ ಬರುತ್ತವೆಂಬ ಮಾತನ್ನು ಮನವರಿಕೆ ಮಾಡಿಕೊಂಡನು. ಆ ಪ್ರದೇಶದಲ್ಲಿ ವಿಶೇಷವಾಗಿ ಶಲೆಯು ಹೊರಡು ವಂತಿದ್ದರೂ, ಆ ವೇಳೆಯಲ್ಲಿ ಬಾವಿಗಳೊಂದೂ ಇದ್ದಿಲ್ಲ. ಹನ್ನೆರಡು ತಿಂಗಳೂ ಹರಿಯ ತಕ್ಕ ಸಣ್ಣ ಸಣ್ಣ ನಾಲ್ಕಾರು ನದಿಗಳಿದ್ದರೂ ಅವುಗಳಿಗೆ ಕಾಲುವೆಗಳಿದ್ದಿಲ್ಲ. ಪ್ರದೇಶ ದಲ್ಲಿ ವಿಪುಲವಾಗಿ ನೀರಿನ ಸಂಗ್ರಹವಿದ್ದರೂ, ಜನರು ದರಿದ್ರಾವಸ್ಥೆಯಲ್ಲಿದ್ದ ಬಗ್ಗೆ ವಿನಾ ಯಕನು ಚಿಂತಾಮಣಿರಾಯನ ಮೇಲೆ ದೋಷವನ್ನು ಹೊರಿಸಿದನು. ಅವನು ಮುಂಬ ಯಿಯಲ್ಲಿ ಕೇವಲ ವಿನೋದಕ್ಕಾಗಿ ರಾಜಮಹಾಲನ್ನು ಕಟ್ಟಿಸಿದ್ದಕ್ಕಿಂತ ಈ ಪ್ರದೇಶ ದಲ್ಲಿ ಅನೇಕ ಬಾವಿಗಳನ್ನು ತೆಗಿಸಿದ್ದರೆ, ನದಿಗಳಿಗೆ ಮೂರುನಾಲ್ಕು ಕಾಲವೆಗಳನ್ನು ಹಚ್ಚಿದ್ದರೆ ಈ ಜನರೆಲ್ಲ ಸುಖದಿಂದಿರುತ್ತಿದ್ದರು, ಮತ್ತು ತನಗೂ ಸುಖವಾಗುತ್ತಿದ್ದಿತು. ಇತ್ಯಾದಿ ಅನೇಕ ವಿಚಾರಗಳು ಆ ವೇಳೆಯಲ್ಲಿ ವಿನಾಯಕನ ಮನಸ್ಸಿನಲ್ಲಿ ಬಂದವು. ವಿನಾಯಕನು ಅಲ್ಲಿಗೆ ಹೋದಮೇಲೆ ಮನೆಮನೆಗೆ ಹೋಗಿ ವಿಚಾರಿಸಿ, ಅವರ ಬಡ ತನದ ಸಂಬಂಧವಾಗಿ ಸಹಾನುಭೂತಿಯನ್ನು ವ್ಯಕ್ತ ಮಾಡಿದನು, ಮತ್ತು ತಾನು ಬಂದ ಉದ್ದೇಶವನ್ನು ಹೇಳಿ ಅವನು ಆ ಒಕ್ಕಲಿಗರಲ್ಲಿ ಎಷ್ಟೋ ಸದುದ್ಯೋಗಶೀಲರಿಗೆ ತನ್ನ ಕಾರಖಾನೆಯಲ್ಲಿ ನವಕರಿ ಕೊಡುವದಾಗಿ ಆಶ್ವಾಸನ ಕೊಟ್ಟನು. ರಾಮಪುರದಿಂದ ಐದು ಮೈಲಿನ ಮೇಲಿದ್ದ ಒಂದು ಪರ್ವತದ ನೆರೆಯಲ್ಲಿ ವಿನಾ ಯಕನು ತನ್ನ ಕಾರಖಾನೆಯನ್ನು ಪ್ರಾರಂಭಿಸಿದ್ದನು. ಆ ಕಾರಖಾನೆಯ ಸಮೀಪದಲ್ಲಿ ಹರಿಯುತ್ತಿದ್ದ ನದಿಯಿಂದ ಒಂದು ಕಾಲವೆಯನ್ನು ತೆಗೆದು ಕಾರಖಾನೆಗೆ ನೀರು ಬರು