ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ನೆಯ ಪ್ರಕರಣವನದೇವತೆ ! ೩೬ ೧೦೧ •, 17www+//// ದರೂ ಸಾಲುತ್ತಿದ್ದಿತೋ ಇಲ್ಲೋ ಶಂಕಾಸ್ಪದವಾಗಿದೆ. ಯಾವದೊಂದು ವ್ಯವ ಸಾಯದಲ್ಲಿ ಯಶಃಪ್ರಾಪ್ತಿಯಾಗುವದು, ವ್ಯವಸಾಯಕ್ಕಿಂತಲೂ ವ್ಯವಸಾಯ ಮಾಡುವವರನ್ನೇ ಸರ್ವ ಸ್ತ್ರೀ ಅವಲಂಬಿಸಿರುತ್ತದೆ. ತಮ್ಮ ಸರ್ವಶಕ್ತಿಯನ್ನೂ, ಸರ್ವ ಬುದ್ಧಿ ಸಾಮರ್ಥ್ಯವನ್ನೂ, ನಿಶ್ನ ಯದ ಸರ್ವಬಲವನ್ನೂ ಒಟ್ಟುಗೂಡಿಸಿ ಏಕನಿಷ್ಟೆಯಿಂದ ಉದ್ಯೋಗಮಾಡುವದು ವ್ಯವಸಾಯದ ಕೀರ್ತಿಗೆ ಗುರುದುರ್ಗ ನಾಗಿದೆ, ಪ್ರತಿಯೊಂದು ಕಾರ್ಯಕ್ಕೆ ತಪಶ್ಚರ್ಯವು ಅವಶ್ಯವಾಗಿ ಬೇಕೇಬೇಕು, ಮನಸ್ಸಿನ ಸರ್ವನ್ಯಾಪಾರಗಳನ್ನು ತಾನು ಹಿಡಿದ ಒಂದೇ ಕಾರ್ಯದಲ್ಲಿಯೇ ಮಗ್ನವಾಗುವಂತೆ ಎನಾಡಲಿಕ್ಕೆ ಬೇಕು. ಅದರ ವ್ಯತಿರಿಕ್ತವಾಗಿ ಎರಡನೇ ಯಾವ ವಿಷಯವನ್ನೂ ಮನಸ್ಸಿ ನಲ್ಲಿ ತರಬಾರದು, ಹೀಗೆ ನಿಶ್ಚಯದ ಬಲದಿಂದ ಯಾವದೊಂದು ಉದ್ಯೋಗವನ್ನು ಆರಂಭಿಸಿದರೆ ಅದರಲ್ಲಿ ಫಲವು ನಿಶ್ಚಯವಾಗಿ ಸಿಕ್ಕೇಸಿಗುವದು, ಯಾವದೊಂದು ಉದ್ಯೋಗದಲ್ಲಿ ತಾನು ಯಶ ಸ್ವಿಯಾಗುತ್ತೇನೆಂಬ ಮನೋಭಾವನೆಯಿದ್ದರೆ ಆ ಕಾರ್ಯದ ಫಲ ವನ್ನು ನೋಡಿ ಮನಸ್ಸು ಆಶ್ಚರ್ಯಯುಕ್ತವಾಗಿ ಹೋಗುತ್ತದೆ. ಯೌಗಿಕಬಲದಿಂದ ಯಾವದೊಂ ದು ಕೆಲಸ ಮಾಡಿದರೆ ಅದು ಸಿದ್ದಿಯಾಗಲಿಕ್ಕೇಬೇಕೆಂಬುವದು ಯೋಗದ ನಿಯಮವೇ ಆಗಿರು ತದೆ. ಇದೊಂದು ಕರ್ಮಯೋಗ ನಿರುತ್ತದೆ. ಫಲಾಖೆಯನ್ನು ತ್ಯಾಗಮಾಡಿ ಸರ್ವ ಮನೋವ್ಯಾ ಸಾರಗಳನ್ನೂ, ಸರ್ವಶಾರೀರಿಕ ಶಕ್ತಿಗಳನ್ನೂ ಹಿಡಿದ ಕಾರ್ಯದ ಸಲುವಾಗಿ ಖರ್ಚುಮಾಡಿದರೆ ಆ ಕೆಲಸವು ಜಯಪ್ರದವಾಗಲಿಕ್ಕೇ ಬೇಕು, ಪರಮೇಶ್ವರನು ಸರ್ವರಿಗೂ ಕಮತೆ, ತೇಜ, ವೀರ್ಯ ಮೊದಲಾದವುಗಳನ್ನು ಕೊಟ್ಟಿದ್ದರೂ ಅವುಗಳ ಜತೆಗೆ ದೃಢ ಸಂಕಲ್ಪವು ಬೇಕು, ನಾನು ಈ ಕೆಲಸವನ್ನು ಮಾಡಿಯೇ ತೀರುವೆನೆಂಬ ಮನೋಬಲವು ಬೇಕು! ಕೇವಲ ಈ ಮನೋಬಲದ ಅಭಾವದಿಂದಲೇ ಶಕ್ತಿ ಸಾಮರ್ಥ ಗಳಿದ್ದ ನಮ್ಮ ನೂರಾರು ಮಂದಿ ತರುಣರು ಚ ಕಲುಬಕ್ಕಲು ಹಾಕಿ ಕೊಂಡು ಕುಳಿತಿರುತ್ತಾರೆ, ನಮ್ಮ ಎಷ್ಟೋ ಜನರು ಸಂಘಶಕ್ತಿ ಯಿಂದ ಎಷ್ಟೋ ಉದ್ಯೋಗಗಳನ್ನು ಆರಂಭಿಸಿ, ಅಪಯಶಸ್ಸನ್ನು