ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ನೆಯ ಪ್ರಕರಣ- ವನದೇವತೆ ! svvvvv 'sysvv •vVVy14 0 ಮಾಡಬೇಕು, ಎಂಬದಾಗಿ ಆಲೋಚಿಸಿ ಹೆಂಗಸಿನಂತೆ ಅಳುತ್ತ ಕೂಡ್ರುವದು ಅವನಿಗೆ ಗೊತ್ತೇ ಇದ್ದಿಲ್ಲ, ಹಿಡಿದ ಕಾರ್ಯವನ್ನು ಮಾಡಿಯೇ ತೀರುತ್ತೇನೆಂಬದಾಗಿ ಅವನಿಗೆ ಆತ್ಮವಿಶ್ವಾಸವಿದ್ದಿತು, ಅವನ ಸಹಾಧ್ಯಾಯಿಗಳೂ, ಅವನ ಸಂಗಡ ಬಂದ ವಿದ್ಯಾರ್ಥಿ ಗಳೂ ಅವನಂತೆಯೇ ಸದುದ್ಯಮಶೀಲರಾಗಿದ್ದುದರಿಂದ ಕಾರಖಾನೆಗೆ ಆರು ತಿಂಗಳೊ ಳಗೇ ಮೂರ್ತಸ್ವರೂಪವು ಪ್ರಾಪ್ತವಾಯಿತು. ಪರಮೇಶ್ವರನು ಮನುಷ್ಯನಿಗೆ ಪ್ರತಿ ಯೊಂದು ಕೆಲಸದಲ್ಲಿ ಸುಫಲವನ್ನುಂಟುಮಾಡಿಕೊಳ್ಳುವಂಥ ಶಕ್ತಿಯನ್ನು ಕೊಟ್ಟಿದ್ದಾನೆ; ಆದರೆ ಈ ಸುಫಲವು ಈಶ್ವರೀದತ್ತ ಶಕ್ತಿಯು ಜಾಗರೂಕವಾಗಿದ್ದರೇ ಸಿಗುವದು, ಶಕ್ತಿ ಯು ನಿದ್ರಿತಾವಸ್ಥೆಯಲ್ಲಿದ್ದರೆ ಫಲವು ಸಿಗುವದಿಲ್ಲ. ಈ ಶಕ್ತಿಯನ್ನು ಜಾಗೃತಾವಸ್ಥೆ ಯಲ್ಲಿಡುವದೂ ನಿದ್ರಿತಾವಸ್ಥೆಯಲ್ಲಿಡುವದೂ ಕೇವಲ ಮಾನವೀ ಸ್ವಾಧೀನವಾಗಿದೆ, ಆ ಜವಾಬದಾರಿಯನ್ನು ಈಶ್ವರನು ತಕ್ಕೊಂಡಿಲ್ಲ. ವಿನಾಯಕನು ತನ್ನ ಸರ್ವ ಶಕ್ತಿಯನ್ನು ಜಾಗರೂಕವಾಗಿಟ್ಟಿದ್ದರಿಂದಲೇ ಅವನ ಅ೦ಕುರರೂಪವಾದ ಕಾರಖಾನೆಯು ಸ್ವಲ್ಪ ದಿವಸಗಳಲ್ಲಿ ವೃಕ್ಷರೂಪ ಧಾರಣಮಾಡಿತು. ಕಾರಖಾನೆಯಿಂದ ಸ್ವಲ್ಪ ಅಂತರದ ಮೇಲೆ ಹರಿಯುತ್ತಿದ್ದ ಒಂದು ಸಣ ಹಳ್ಳದ ನೀರಿನ ಮೇಲಿಂದ ಅದರ ಉಗಮಸ್ಥಾನದಲ್ಲಿ ತಾಮ್ರವಿರಬೇಕಾಗಿ ವಿನಾಯಕ ನಿಗೆ ಸಂಶಯವು ಬಂದಿತು. ಆ ನೀರಿನ ಪ್ರಯೋಗಮಾಡಿ ನೋಡಿದ ಮೇಲೆ ಅದರಲ್ಲಿ ಸ್ವಲ್ಪ ತಾವವು ಅವನಿಗೆ ಸಿಕ್ಕಿತು. ತಾಮ್ರವು ದೃಷ್ಟಿಗೆ ಬಿದ್ದ ಕೂಡಲೆ ವಿನಾಯಕನು ಒಂದು ದಿವಸ ಸಂಧ್ಯಾಕಾಲದಲ್ಲಿ ಹಳ್ಳದ ಉಗಮಸ್ಥಾನಕ್ಕೆ ಹೋಗಬೇಕೆಂದು ನಿಶ್ಚ ಯಿಸಿ, ಆ ಪ್ರಕಾರ ಅವನೊಬ್ಬರ್ನೆ ಹತ್ತರವೇ ಕಾಣಿಸುತ್ತಿದ್ದ ಪರ್ವತದ ಮೇಲೆ ಏರಿ ಹೋಗಿ ಉಗಮಸ್ಥಾನದ ಹತ್ತಿರ ನಿಂತನು. ಅಲ್ಲಿಯ ಎಷ್ಟೋ ಕಲ್ಲುಗಳನ್ನು ನೋಡಿದ ಮೇಲೆ ವಿನಾಯಕನಿಗೆ ಒಳ್ಳೆ ಆಶ್ಚರ್ಯವಾಯಿತು, ಅವನ ಹೃದಯವು ದುಃಖ ದಿಂದ ದ್ರವಿಸಲು ಕಣ್ಣುಗಳಿಂದ ಕಣ್ಣೀರುಗಳು ಕೆಳಗೆ ಬಿದ್ದವು, ಅವನು:-( ಜಗ ದ್ವಂದ್ಯ ಆರ್ಯಾವರ್ತಾ, ನಿನ್ನ ಹೊಟ್ಟೆಯಲ್ಲಿ ಈ ಪ್ರಕಾರ ಅಗಣಿತಸಂಪತ್ತು ಅಡ ಗಿದ್ದರೂ, ನಿನ್ನ ಪುತ್ರರಾದ ನಾವು ಕೇವಲ ಆಲಸ್ಯ, ಮತ್ಸರ, ದ್ವೇಶ, ಸ್ವಾರ್ಥ, ವೃಥಾಕಲಹ ಮೊದಲಾದವುಗಳಿಂದ ಕಾಲಕ್ಷೇಪಮಾಡಿ ನಿಷ್ಕಾರಣ ಉಪವಾಸಬಿದ್ದು ಸಾಯುತ್ತೇವೆ, ನಿರ್ಲಜ್ಜಿ ಭಾರತವಾಸೀ, ನಿನ್ನ ಬಾಗಿಲಲ್ಲಿ ಕಲ್ಪವೃಕ್ಷವಿರುತ್ತದೆ, ನೀನು ಪ್ರಯತ್ನ ಮಾಡಿದರೆ ಅದು ನಿನಗೆ ಇಷ್ಟವಾದದ್ದನ್ನು ಕೊಡಲಿಕ್ಕೆ ಸಿದ್ಧವಿರು ತದೆ; ಆದರೆ ಸ್ವಾರ್ಥಲೋಲುಪನಾದ ಅಲಸ್ಕಾ, ನೀನು ಈ ಕಲ್ಪವೃಕ್ಷದ ಅವಹೇಲನ ಮಾಡಿ ಎರಡನೆಯವರ ಮನೆಮನೆಯನ್ನು ತಿರುಗಿ ಬಿಕ್ಕೆಬೇಡುತ್ತಿರುವಿ, ಧಿಃಕಾರ! ಧಿಕಾರವಿರಲಿ ನಿನಗೆ !! ನಿನಗೆ ಜಗತ್ತಿನಲ್ಲಿ ಎಷ್ಟೂ ಮಾನವಿಲ್ಲ. ನಿನಗೆ ಎರಡನೇ ದೇಶದಲ್ಲಿ ಕೇವಲ ವರ್ಣಭೇದದ ಸಲುವಾಗಿ ಯಾರೂ ಬರಗೊಡುವದಿಲ್ಲ. ನಿನ್ನ ಸ್ವಂತದೇಶದಲ್ಲಿಯೇ ನಿನಗೆ ಬೆಲೆಯಿಲ್ಲ! ಇದಕ್ಕಿಂತಲೂ ನಿನ್ನ ಹೆಚ್ಚಿನ ಶೋಚನೀಯ