ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ, ಎ ಸ್ಥಿತಿಯು ಯಾವದು? ಮೂರ್ಖಾ, ಕಣ್ಣು ತೆಗೆ ಇನ್ನಾದರೂ ಜಾಗರೂಕನಾಗು! ಈ ಕಲ್ಪವೃಕ್ಷದ ಉಪಾಸನೆಯನ್ನು ಮಾಡು, ಮನೆಯಲ್ಲಿದ್ದ ಕಾಮಧೇನುವಿನ ಸೇವೆ ಯನ್ನು ಮಾಡು, ನಿಜವಾದ ಸೌಖ್ಯ-ಶಾಂತಿಗಳಿಗೆ ನೀನು ಎರವಾಗಿರುವಿ, ಈಗ ನಿಶ್ಚಯ ಮಾಡಿ ಫಲಾಶೆಯನ್ನು ಮಾಡದೆ ಅವಿಶ್ರಾಂತ ಪರಿಶ್ರಮದಿಂದ ಈ ಕಾಮಧೇನು . ವಿನ ಸೇವೆಯನ್ನು ಮಾಡು, ನಿನ್ನ ದೇಶ, ನಿನ್ನ ಮಾಯಾಭೂಮಿ ಇವು ನಿನಗೆ ಬೇಕಾ ದದ್ದು ಕೊಡಲಿಕ್ಕೆ ಸಮರ್ಥವಾಗಿವೆ ! ಹುಚ್ಚಾ, ಜಗದೊಳಗಿನ ಸರ್ವ ಸ್ವಾಸ್ಥಕರ ವಾದ ಹವೆಯ ಮಿಶ್ರಣವು ನಿನ್ನ ಭೂಮಿಯಲ್ಲಿ ಇರುತ್ತದೆ. ಜಗದೊಳಗಿನ ಸರ್ವ ವನಸ್ಪತಿಗಳನ್ನು ಪ್ರಸವಣಮಾಡುವ ಸಾಮರ್ಥವು ನಿನ್ನ ಭೂಮಿಯಲ್ಲಿಯದೆ, ಪ್ರತಿ ಯೊಂದು ಧಾತುಗಳು ನಿನ್ನ ಜನ್ಮ ಭೂಮಿಯ ಗರ್ಭದಲ್ಲಿ ಸಮಾವೇಶವಾಗಿವೆ. ಹೀಗಿದ್ದು ನೀನು ದರಿದ್ರನಾಗಿರುವಿ, ಭಿಕ್ಷುಕನಾಗಿರುವಿ, ಎಲ್ಲ ಜಗತ್ತಿನಲ್ಲಿ ನಿನಗೆ ತಿರಸ್ಕಾರ ! ನಿನಗೆ ಧಿಕ್‌ಧಿಕ್ !! ಬೇಕಾದ ಧಾನ್ಯಗಳು ನಿನ್ನ ದೇಶದಲ್ಲಿ ಬೆಳೆಯುತ್ತಿರುವಾಗ ನಿನ್ನ ಹೊಟ್ಟೆಯು ಬರಿದಾದದ್ದಿರಬೇಕೇ ? ಹುಚ್ಚಾ, ಏಳು, ಎಚ್ಚರಾಗು, ಪ್ರಯತ್ನ ಮಾಡು; ಅಂದರೆ ಮರಳಿ ನೀನು ಉನ್ನ ತಾ ಶಿಖರವನ್ನೇರುವಿ, ಯಾರಾದರೂ ಬಂದು ನನಗೆ ಜಾಗೃತ ಮಾಡಿಯಾರು, ಯಾರಾದರೂ ನನಗೆ ಮಾರ್ಗವನ್ನು ತೋರಿಸಿಯಾರು; ಎಂಬ ಭ್ರಾಮಕ ಕಲ್ಪನೆಯಿಂದ ನೀನು ಮಲಗಬೇಡ, ನಿನ್ನ ಮಾರ್ಗವನ್ನು ನೀನೇ ಶೋಧಿಸಲಿಕ್ಕೆ ಬೇಕು, ಪ್ರಯತ್ನ ಮಾಡಿ ಫಲವನ್ನು ಹೊಂದು, ಬೇಕಾದರೆ ಆ ಮೇಲೆ ಆತ್ಮ ತ್ಯಾಗಮಾಡು, ಮಾತ್ರ ನಿರುದ್ಯೋಗಿಯೂ, ಅಲಸ್ಕಿಯೂ ಆಗಿ ಆತ್ಮನಾಶವನ್ನು ಮಾಡಿಕೊಳ್ಳಬೇಡ ! ” ಎಂದನು. ಆ ವೇಳೆಯಲ್ಲಿ ವಿನಾಯಕನು ಪರ್ವತದ ಮೇಲೆ ಹೋಗಿ ಕುಳಿತಿದ್ದುದರಿಂದ ಅವನಿಗೆ ತನ್ನ ಮಾತೃಭ ಮಿಯ ಅನಂತಸ್ವರೂಪವು ಕಂಡಹಾಗೆ ಅವನ ಅಂತಃಕರಣದಲ್ಲಿ ಅವಳ ವಿಷಯವಾಗಿ ಅನಂತ ವಿಚಾರಗಳು ಬರಹತ್ತಿದವು. ಮೇಲಿಂದ ಮನೋಹರವಾಗಿ ಕಾಣಿಸತಕ್ಕ ಭೂಮಿಯನ್ನು ನೋಡಿ ಅವನ ಹೃದಯವು ಒಮ್ಮೆ ದುಃಖದಿಂದ ತುಂಬಿಬರುತ್ತಿದ್ದಿತು; ಒಮ್ಮೆ ಕಣ್ಣುಗಳಿಂದ ಅಶ್ರು ಬಿಂದುಗಳು ದಳ ದಳ ಸುರಿಯುತ್ತಿದ್ದವು, ವಿನಾಯಕನು ಕಳಿತ ಆ ವೇಳೆಯು ಬಹಳೇ ಚಿತ್ತಾಕರ್ಷಕವಾಗಿದ್ದಿತು, ಭಗವಾನ್ ಸೂರ್ಯನಾರಾಯಣನು ಪಶ್ಚಿ ಮಾಂಬುಧಿಯಲ್ಲಿ ಧುಮುಕುವ ವೇಳೆಯಾದದ್ದರಿಂದ ಅವನು ಒಂದು ಅರಣ್ಯದ ಹಿಂದಿನ ಭಾಗದಿಂದ ಅಸ್ತಾಚಲದ ಕಡೆಗೆ ಸಾಗಿದ್ದನು, ಪರ್ವತದ ಮೇಲೆ ವಿಸ್ತಾರಗೊಂಡ ಸೂರ್ಯಕಿರಣಗಳಿಂದ ಪರ್ವತಕ್ಕೆ ಒಂದು ತರದ ಭವ್ಯ ಸ್ವರೂಪವು ಪ್ರಾಪ್ತವಾಗಿದ್ದಿತು. ಮೇಯುವದಕ್ಕಾಗಿ ಮೇಲಕ್ಕೆ ಹೋಗಿದ್ದ ದನಗಳ ಹಿಂಡು ಮೆಲ್ಲಮೆಲ್ಲನೆ ಕೆಳಗಿಳಿಯ ತಿದ್ದಿತು, ಆ ಹಿಂಡಿನ ಹಿಂದೆ ದನಕಾಯುವವರು ಲಾವಣೀ ಪದಗಳನ್ನು ಹೇಳುತ್ತ ನಡೆದಿದ್ದರು. ಕಾಕುಳ್ಳನ್ನು ಆರಿಸಲಿಕ್ಕೆ ಬಂದ ಬಡ ಒಕ್ಕಲಿಗರ ಹೆಂಗಸರು ತಲೆಯ ಮೇಲೆ ಕುಳ್ಳಿನ ಬುಟ್ಟಿಯನ್ನು ಹೊತ್ತು ಕೊಂಡು ಮೆಲ್ಲಮೆಲ್ಲನೆ ಇಳಿಯುತ್ತಿದ್ದರು. ದೂರ