ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೨ Mynow ದಿವ್ಯಸುಂದರಿ ಅಥವಾ ದೀರ್ಘ ಪ್ರಯತ್ನ. ನಾಚಿಕೆಯೆನಿಸಿದ್ದರಿಂದ ಅವನ ಬದಲು ನಾನೊಬ್ಬಳೇ ಭೆಟ್ಟಗೆ ಬರಬೇಕೆಂದು ನಿಶ್ಚಯ ವಾಯಿತು, ಇಂದು ನಾಲ್ಕು ಹೊಡೆಯುವ ಸುಮಾರಕ್ಕೆ ನಾನು ತಮ್ಮ ಕಾರಖಾನೆಯ ಕಡೆಗೆ ಹೋಗುತ್ತಿದ್ದೆನು; ಆದರೆ ದೂರದಿಂದಲೇ ತಾವು ಪರ್ವತದ ಮೇಲೆ ಏರಿ ಹೋಗುವದು ಕಾಣಿಸಿದ್ದರಿಂದ ನಾನು ಕಾರಖಾನೆಗೆ ಹೋಗುವ ದಾರಿಯನ್ನು ಬಿಟ್ಟು, ಪರ್ವತದ ಮಾರ್ಗವನ್ನು ಹಿಡಿದು ಬಂದು ತಮ್ಮ ಭೆಟ್ಟಿಯನ್ನು ತಕ್ಕೊಂಡೆನು. " ಎಂದಳು. ಆಗ ವಿನಾಯಕನು ಸ್ವಲ್ಪ ಹೊತ್ತು ಸುಮ್ಮನಿದ್ದು:- ನಾನು ಕೂಡಲೆ ಫಿರ್ಯಾದಿಯನ್ನು ತೆಗೆದುಹಾಕುವ ಪ್ರಯತ್ನ ಮಾಡುತ್ತೇನೆ ಆದರೆ ನಿಮ್ಮ ತಂದೆಯು ಬಹಳ ಕೆಟ್ಟ ಕೆಲಸ ಮಾಡಿರುವನೆಂದು ಪೋಲೀಸರಿಗೆ ಗೊತ್ತಿರುವದರಿಂದ ನಾನು ಫಿರ್ಯಾದಿಯನ್ನು ಹಿಂದಕ್ಕೆ ತಕ್ಕೊಂಡರೂ ಪೋಲೀಸರಿಗೆ ನಿಮ್ಮ ತಂದೆಯ ಸಂಬಂಧ ವಾದ ಸಿಟ್ಟು ಕಡಿಮೆಯಾಗಲಿಕ್ಕಿಲ್ಲ. ಏನೇ ಆಗಲಿ, ನಾನು ಫಿರ್ಯಾದಿಯನ್ನು ತೆಗೆದು ಹಾಕುವ ಪ್ರಯತ್ನ ಮಾಡುತ್ತೇನೆ; ಆದರೆ ಇಂಥ ಕೆಲಸವನ್ನು ಇನ್ನೆಂದೂ ಮಾಡುವ ದಿಲ್ಲೆಂದು ಅವರು ಒಪ್ಪಿರುವರೇ ? ? ಇಂದಿರೆಯು ಸ್ವಲ್ಪ ಹೊತ್ತು ಸುಮ್ಮನಿದ್ದು: ಒಪ್ಪಿಗೆಯ ಬಗ್ಗೆ ಆತನು ನನಗೆ ಹೇಳಿಲ್ಲ, ಅವರು ನಿಜವಾಗಿ ನುಡಿದಂತೆ ನಡೆದರೆಂದು ನನಗೆ ತೋರುವದಿಲ್ಲ. ಮನುಷ್ಯನ ಪ್ರತ್ಯೇಕ ರೋಗಕ್ಕೆ ಔಷಧವಿರುತ್ತದೆ, ಆದರೆ ಸ್ವಭಾವಕ್ಕೆ ಔಷಧವಿರುವ ದಿಲ್ಲ, ಅದಕ್ಕಾಗಿಯೇ ಕ್ಷಮೆ ಬೇಡಲಿಕ್ಕೆ ಬರುವದು ಅತ್ಯಂತ ಲಜ್ಞಾ ರ್ಹ ವಿಷಯ ವಾಗಿದೆ; ಆದರೆ ಏನು ಮಾಡಬೇಕು, ಎಷ್ಟೆಂದರೂ ಆತನು ನನ್ನ ಜನ್ನದಾತ ತಂದೆಯು, ಅದರಿಂದ ಮನಸ್ಸು ಕಳವಳಗೊಳ್ಳುತ್ತದೆ.” ವಿನಾಯಕ:- “ ನೀವು ನಿಮ್ಮ ತಂದೆಯಸಲುವಾಗಿ ಕ್ಷಮೆ ಬೇಡಲಿಕ್ಕೆ ಬಂದದ್ದು ಅನುಚಿತವಿಷಯವಲ್ಲ. ಅಂತಃಕರಣದಲ್ಲಿ ಅನುತಾಪವು ಹುಟ್ಟಿದ ಹೊರ್ತು ಕ್ಷಮೆ ಬೇಡುವ ಇಚ್ಛೆಯಾಗುವದಿಲ್ಲ. ಇದರ ಮೇಲಿಂದ ಶಾಮರಾಯನು ಮುಂದೆ ಒಳ್ಳೆ ರೀತಿಯಿಂದ ನಡೆದಾನೆಂದು ಊಹಿಸಲಿಕ್ಕೆ ಬರುತ್ತದೆ. ಅದು ಹೇಗೇ ಇರಲಿ. ನಿಮ್ಮ ಸಲುವಾಗಿ ನನ್ನದೊಂದು ವಿನಂತಿಯದೆ, ಅದನ್ನು ನೀವು ಪಾಲಿಸಲಿಕ್ಕೆ ಬೇಕು. ಒಳಗಡೆ ನನಗೆ, ನೀವು ಒಬ್ಬ ಸದ್ದುಣಸಂಪನ್ನ ತರುಣನೊಡನೆ ಲಗ್ನ ವಾಗುತ್ತೇನೆಂದು ಹೇಳಿದ್ದಿರಿ, ಈಗಲೂ ಅವನ ಸಂಗಡ ಲಗ್ನ ವಾಗದಿದ್ದರೆ ಆಬಗ್ಗೆ ಈಗ ಹೆಚ್ಚು ಪ್ರಯತ್ನ ಮಾಡಲಿಕ್ಕೆ ಬೇಕು, ಹೆಸರು ಹೇಳಿದರೆ ಆಬಗ್ಗೆ ನಾನೂ ಪ್ರಯತ್ನ ಮಾಡುವೆನು.” ಇಂದಿರೆ:- ( ವಿನಾಯಕನನ್ನು ಒಂದು ಬಾರೆ ಕಡೆಗಣ್ಣಿನಿಂದ ನೋಡಿ ) ನಾನೂ ಅದೇ ಪ್ರಯತ್ನದಲ್ಲಿದ್ದೇನೆ, ಆದರೆ ಕಾರ್ಯವಾದಾಗಲೇ ಖರೆ. ಒಳ್ಳೇದು, ನಾನು ಹೋಗುತ್ತೇನೆ.”