ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬1 Mwww+/wwwvvvvvvvvvv+++++ 44, //- Morwx ೫ನೆಯು ಪ್ರಕರಣವನದೇವತೆ ! MM೦ - ಹೀಗನ್ನುತ್ತ ಮತ್ತೊಮ್ಮೆ ವಿನಾಯಕನನ್ನು ನೋಡಿ ಹಿಂದಕ್ಕೆ ತಿರುಗಿದಳು. ಆಗ ವಿನಾಯಕನು 11 ನಿಲ್ಲಿರಿ. ಇಂಥ ಸಂಜೆಯ ವೇಳೆಯಲ್ಲಿ ನೀವು ಈ ಅಡವಿಯಲ್ಲಿ ಎತ್ತ ಹೋಗುವಿರಿ? ಕೆಳಗೆ ಕಾರಖಾನೆಗೆ ನಡೆಯಿರಿ, ಊಟಮಾಡಿ ರಾತ್ರಿ ಅಲ್ಲಿಯೇ ಇದ್ದು ಪ್ರಾತಃಕಾಲದಲ್ಲಿ ಹೋದರಾಯಿತು. ಹೇಗೂ ಶಾಮರಾಯನು ಇಲ್ಲಿಯೇ ಹತ್ತರದಲ್ಲಿ ಇರುತ್ತಾನೆಂದು ನೀವು ಹೇಳಿದಿರಿ, ಆತನನ್ನು ಕರಕೊಂಡು ಬರುವದರ ಸಲುವಾಗಿ ಮನುಷ್ಯನನ್ನು ಕಳಿಸುತ್ತೇನೆ. ನೀವು ಆಬಗ್ಗೆ ಸ್ವಲ್ಪಾದರೂ ಚಿಂತೆಮಾಡ ಕೂಡದು.” ಎಂದನು. ವಿನಾಯಕನ ಈ ಮಧುರವಚನಗಳನ್ನು ಕೇಳಿ ಇಂದಿರೆಗೆ ಸ್ವಲ್ಪ ಮೋಹವು ಉತ್ಪನ್ನವಾಯಿತು. ವಿನಾಯಕನ ಆಜ್ಞೆಯನ್ನು ಮುರಿಯಬಾರದೆಂದು ಅವಳಿಗೆ ತೋರಹತ್ತಿತು; ಆದರೆ ಅಷ್ಟರಲ್ಲಿ ಮತ್ತೆ ಅವಳ ಮನಸ್ಸು ವಿಪರೀತವಾಯಿತು. ಅಂತಃಕರಣದಲ್ಲಿ ಉತ್ಪನ್ನ ವಾದ ಮೋಹವನ್ನು ದೂರ ಚಲ್ಲಿಕೊಟ್ಟು ತಿರುಗಿ ಹೋಗು ವದಕ್ಕೆ ಅವಳು ನಿಶ್ಚಯಿಸಿ ನಗುತ್ತ.:-( ನನಗೇನೂ ಅಷ್ಟು ಭೀತಿಯಾಗುವದಿಲ್ಲ. ನನ್ನ ತಂದೆಯ ಸಮೀಪದಲ್ಲಿರುತ್ತಾನೆ, ಕಾರಣ ನಾನು ನನ್ನ ತಂದೆಯ ಕಡೆಗೆ ಹೋಗುತ್ತೇನೆ. ” ಎಂದನ್ನುತ್ತ ಝಪಝಸ ಹೆಜ್ಜೆ ಹಾಕುತ್ತ ಗಿಡದ ಗುಂಪಿನಲ್ಲಿ ಹೊರಟುಹೋಗಿ ಕಾಣದಂತಾದಳು, ಈ ವೇಳೆಯಲ್ಲಿ ವಿನಾಯಕನ ಅಂತಃಕರಣ ದಲ್ಲಿ ಅನಂತವಿಚಾರಗಳ ತುಮುಲಯುದ್ಧವು ನಡೆದಿದ್ದಿತು. ಇಂದಿರೆಯ ಅದ್ಭುತಚರಿ ತ್ರದ ವಿಚಾರಮಾಡುತ್ತ ಮಾಡುತ್ತ ಅವನು ಮೆಲ್ಲಮೆಲ್ಲನೆ ಒಂದೊಂದು ಹೆಜ್ಜೆ ಕಿತ್ತು ಹಾಕುತ್ಯ ಆ ಪರ್ವತದ ಇಳುಕಲನ್ನು ಇಳಿಯಹತ್ತಿದನು. ಇಂಥ ಸುಂದರ-ಸದ್ದು ಏಣಿಯ ಜನ್ಮವು ನರರಾಕ್ಷಸನ ಮನೆಯಲ್ಲಿ ಆದದ್ದಕ್ಕೆ ಅವನಿಗೆ ಬಹ: ಖೇದವೆನಿಸಿತು. ಮತ್ತು ಅವನಿಗೆ ಅವಳ ವಿಷಯವಾಗಿ ಸಹಾನುಭೂತಿಯು ತೋರಹತ್ತಿತು, ಯಾವ ತರುಣನೊಡನೆ ಲಗ್ನವು ನಿಶ್ಚಿತವಾಗಿದೆಯೆಂಬುವದನ್ನು ಮೂರು ನಾಲ್ಕು ಸಾರೆ ವಿಚಾ ರಿಸಿದರೂ, ಅವಳು ಯಾಕೆ ಹೇಳಲಿಕ್ಕೆ ಹಿಂಜರಿದಿದ್ದಾಳೆಂಬ ಬಗ್ಗೆ ಅವನಿಗೆ ಒಳ್ಳೆ ದಿಗಿಲು ಬಿದ್ದಿತು. ಆ ವಿಚಾರದಲ್ಲಿಯೇ ಅವನು ತನ್ನ ಕಾರಖಾನೆಯ ಕಡೆಗೆ ಹೋಗ ಹತ್ತಿದನು. ವಾಚಕರೇ, ಇಂದಿರೆಯು ಝಪಝಸ ಹೆಜ್ಜೆಗಳನ್ನು ಹಾಕುತ್ತ ನಿಜವಾಗಿ ಪರ್ವ ತದಿಂದ ಹೊರಟು ಹೋಗಿರಬಹುದೇ ? ಇಲ್ಲ. ಅಲ್ಲಿಂದ ಅವಳು ಕಾಣದಂತಾದಳೆಂಬು ವದು ನಿಜ, ಆದರೆ ಅವಳು ಬಹಳ ದೂರ ಹೋಗಿದ್ದಿಲ್ಲ. ಗಿಡದ ಮರೆಗೆ ಹೋಗು ಹೋಗುತ್ತ ಒಂದು ದೊಡ್ಡ ಮರದ ಮರೆಗೆ ನಿಂತುಕೊಂಡು, ಅಲ್ಲಿಂದ ವಿನಾಯಕನ ಕಡೆಗೆ ಏಕಾಗ್ರದೃಷ್ಟಿಯಿಂದ ನೋಡುತ್ತಿದ್ದಳು. ವಿನಾಯಕನು ಎದ್ದು ಪರ್ವತದಿಂದ ಇಳಿಯಹತ್ತಿದ ಕೂಡಲೆ ಇಂದಿರೆಯು ಗಿಡದ ಮರೆಗೆ ಮೆಲ್ಲಮೆಲ್ಲನೆ ಮುಂದಕ್ಕೆ ಸರಿದು ನೀಟವಾಗಿ ನಿಂತು ಅವನನ್ನು ನೋಡಹತ್ತಿದಳು. ನೋಡುನೋಡುತ್ತ ಅವಳು ಒಂದು ಗಿಡಕ್ಕೆ ಆತುಕೊಂಡು ನಿಂತಳು. ಅವಳು ಸುವಾಸಿಕ ಭ್ರಷ್ಟಗಳನ್ನು