ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ನಯ ಪ್ರಕರಣವನದೇವತೆ! L ಒmmmmmmmmmmmmwara wwmmmwwwadarMewwwmmmwwwmmmMMwwwಜwww ನಾನು ನನ್ನನ್ನು ಸ್ವೀಕರಿಸಿರೆಂದು ನಿಮಗೆ ವಿನಂತಿಯನ್ನು ಮಾಡಿಕೊಂಡಿಲ್ಲ. ವಿನಾಯ ಕರಾಯ, ನೀವು ಇಂದಿರೆಯನ್ನು ಸ್ವೀಕಾರ ಮಾಡದಿದ್ದರೂ, ಈ ಇಂದಿರೆಯು ನಿಮ್ಮ ವಳೇ ಇದ್ದಾಳೆಂಬುವದನ್ನು ಮಾತ್ರ ಪೂರ್ಣ ಧ್ಯಾನದಲ್ಲಿಡಿರಿ, ಇಂದಿರೆಯ ಪ್ರತಿ ಯೊಂದು ಶ್ವಾಸೋಚ್ಚಾಸಗಳು ನಿನ್ನ ಮಂಗಲಕಾಮನದ ಸಲುವಾಗಿಯೇ ಬಿಡು ಇವೆ. ನಿಮ್ಮ ವಿಷಯವಾಗಿಯೇ ಮನಸ್ಸಿನಲ್ಲಿ ವಿಚಾರತರಂಗಗಳು ಹುಟ್ಟುವವು. ಪ್ರತ್ಯಕ್ಷವಾಗಿಯೂ, ಅಪ್ರತ್ಯಕ್ಷವಾಗಿಯೂ ನಿಮ್ಮ ಸೇವೆಯನ್ನೇ ಮಾಡುವದು | ಎರಡು ಶರೀರಗಳು ಕೆಲವು ಧರ್ಮಬಂಧನಗಳಿಂದ ಏಕತ್ರವಾದರೆ ವಿವಾಹವಾಗುತ್ತ ದೆಂಬುವದು ನಿಜವಿದ್ದರೂ, ಎರಡು ಶರೀರಗಳಲ್ಲಿ ಎಷ್ಟೋ ಹರದಾರಿ ದೂರವಿದ್ದರೂ ವಿವಾಹವಾಗುತ್ತದೆಂಬ ಇಂದಿರೆಯ ತಿಳುವಳಿಕೆಯನ್ನು ಇಂದಿರೆಯು ಸ್ಪಷ್ಟ ಮಾಡಿ ತೋರಿಸುವಳು. ಭಕ್ತವತ್ಸಲನಾದ ಶಂಕರಾ, ನನ್ನಿ ಸಂಕಲ್ಪದ ಸಲುವಾಗಿ ನನಗೆ ಮನೋಬಲವನ್ನು ಕೊಡು, ಇಷ್ಟೇ ಈ ದಾಸಿಯು ನಿನಗೆ ವಿನಂತಿಯನ್ನು ಮಾಡು ವಳು, ” ಎಂಬದಾಗಿ ಅನ್ನುತ್ತ ಭಗವಂತನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಮಂದ ಗತಿಯಿಂದ ಆ ಪರ್ವತಪ್ರದೇಶದಿಂದ ಯಾವ ಕಡೆಗೋ ಹೊರಟುಹೋದಳು. ಮತ್ತೆ ನಾಲ್ಕು ತಿಂಗಳು ಹೋದ ಮೇಲೆ ವಿನಾಯಕನ ಕಾರಖಾನೆಯು ವಿಶೇಷ ಉನ್ನತಾವಸ್ಥೆಗೆ ಬಂದಿತು, ಅವನ ಕಾರಖಾನೆಯು ಒಳ್ಳೇ ರೀತಿಯಿಂದ ನಡೆಯುತ್ತ ದೆಂದು ತಿಳಿದ ಕೂಡಲೆ ಅವನ ಮಿತ್ರ ಮೊದಲಾದವರು ಕಾರಖಾನೆಯನ್ನು ನೋಡ ಲಿಕ್ಕೆ ಬರಹತ್ತಿದರು. ನಡುವೆ ಎರಡು ಸಾರೆ ಯಮುನಾ-ಕೃಷ್ಣರಾಯರು ವಿನಾಯಕ ನಿಗೆ ಭೆಟ್ಟಿಯಾಗಿ ಹೋಗಿದ್ದರು. ಹಾಗೆಯೇ ವಿನಾಯಕನು ಒಂದು ಸಾರೆ ಕೆಲವು ಯಂತ್ರ ಸಾಮಗ್ರಿಗಳನ್ನು ಒಯ್ಯುವದಕ್ಕಾಗಿ ಮುಂಬಯಿಗೆ ಬಂದನು. ವಿನಾಯಕನು ತನ್ನ ಕಾರಖಾನೆಯಲ್ಲಿ ಯಶಸ್ವಿಯಾಗುತ್ತ ಹೋದದ್ದನ್ನು ಕೇಳಿ ಚಿಂತಾಮಣಿ ರಾಯನು ಆಗ ವಿನಾಯಕನಿಗೆ ವಿಶೇಷ ಆದರಸತ್ಕಾರ ಮಾಡಿದನು. ವಿನಾಯಕನ ದರ್ಶನದಿಂದ ದಿವ್ಯಸುಂದರಿಗೆ ಬ್ರಹ್ಮಾನಂದವಾಯಿತು. ವಿನಾಯಕನು ಬಂದ ಕೂಡಲೆ ಅವನೊಡನೆ ಏನೇನು ಮಾತಾಡಬೇಕೆಂಬುವದನ್ನು ಅವಳು ಮೊದಲೇ ಆಲೋಚಿಸಿ ಇಟ್ಟಿದ್ದಳು. ಆದರೆ ಪ್ರತ್ಯಕ್ಷ ವಿನಾಯಕನ ಭೆಟ್ಟಿಯಾದ ಕೂಡಲೆ ಅವಳಿಗೆ ಮಿತಿ ಮೀರಿ ನಾಚಿಕೆಯಾಯಿತು. ಅವಳ ಬಾಯಿಯಿಂದ ಒಂದು ಶಬ್ದವಾದರೂ ಹೊರಡ ಲಿಲ್ಲ. ಈ ಪೂರ್ವದಲ್ಲಿ ಅವಳು ವಿನಾಯಕನ ಕೂಡ ನಿರ್ಲಜ್ಞೆಯಿಂದ ಮಾತಾಡುತ್ತಿ ದ್ದಳು; ಆದರೆ ಈಗ ಅವಳಿಗೆ ಹಾಗೆ ಮಾತಾಡಲಿಕ್ಕೆ ಬರಲಿಲ್ಲ. ನಾಚುತ್ತ ನಾಚುತ್ತ ಮಾತಾಡುವದೂ, ಕದ್ದು ಕದ್ದು ನೋಡುವದೂ ವಿನಾಯಕನ ಲಕ್ಷದಲ್ಲಿ ಕೂಡಲೆ ಬಂದಿತು.: ದಿವ್ಯಸುಂದರಿಯ ವಿಷಯವಾಗಿ ವಿನಾಯಕನು ಇಲ್ಲಿಯವರೆಗೆ ನಿರ್ವಿಕಾರ ನಾಗಿದ್ದನು. ಆದರೆ ಈಗಿನ ಅವಳ ವರ್ತನವು ಅವನಿಗೆ ವಿಲಕ್ಷಣವಾಗಿ ತೋರಿತು. ಮತ್ತು ಅವನ ಅಂತಃಕರಣದಲ್ಲಿ ದಿವ್ಯಸುಂದರಿಯಂಥ ವಿಕಾರಗಳೇ ಉತ್ಪನ್ನ ವಾದವ,