ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LL ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ. ಯಾವ ವಿಕಾರದಿಂದ ದಿವ್ಯಸುಂದರಿಯು ವಿನಾಯಕನಿಗೆ ಯಾವದೊಂದು ಪ್ರಶ್ನೆ ಯನ್ನು ಮಾಡುತ್ತಿದ್ದಳೋ, ಅದೇ ವಿಕಾರದಿಂದ ವಿನಾಯಕನು ದಿವ್ಯಸುಂದರಿಗೆ ಉತ್ತರವನ್ನು ಕೊಡಹತ್ತಿದನು. ಈ ಸ್ಥಿತಿಯು ಪರಸ್ಪರರ ಲಕ್ಷದಲ್ಲಿ ಬಂದಕೂಡಲೆ ಇಬ್ಬರಲ್ಲಿಯೂ ಲಜ್ಞಾಯುಕ್ತ ಪ್ರೇಮವೂ, ಶಕ್ಕಾಶ ಕತೆಯ ವಿಚಾರವೂ ಉತ್ಪನ್ನ ವಾದವು, ಆ ವಿಚಾರದಿಂದ ಒಮ್ಮೆ ಇಬ್ಬರ ಮುಖಕಮಲಗಳು ನಿರಾಶೆಯಿಂದ ಬತ್ತಿ ದರೆ, ಮತ್ತೊಮ್ಮೆ ಆಶೆಯಿಂದ ವಿಕಾಸವಾಗುತ್ತಿದ್ದವು, ಮುಂಬಯಿಯಿಂದ ರಾಮ ಪುರಕ್ಕೆ ಬರುವಾಗ ವಿನಾಯಕನು ದಿವ್ಯಸುಂದರಿಗೆ ಹೋಗಿಬರುತ್ತೇನೆಂದು ಹೇಳಿ ದಾಗಂತೂ ಅವಳ ಕಣ್ಣುಗಳಲ್ಲಿ ಕಣ್ಣೀರುಗಳು ಚಮಕಿಸಿದವು, ಬಾಯಿಯಿಂದ ಶಬ್ದಗಳೇ ಹೊರಡದಂತಾದವು, ರಾಮಪುರಕ್ಕೆ ಬಂದ ಮೇಲೆ ವಿನಾಯಕನಿಗೂ ನಾಲೈದು ದಿವಸ ದಿವ್ಯಸುಂದರಿಯ ವಿಷಯವಾಗಿ ಹಳಹಳಿಯಾಯಿತು. ನಂತರ ಕಾರಖಾನೆಯ ಕೆಲಸದಲ್ಲಿ ಅವನ ಮನಸ್ಸು ಮಗ್ನವಾಗಲು ಅವನಿಗೆ ದಿವ್ಯಸುಂದರಿಯ ವಿಸ್ಕರಣವಾಯಿತು, ಅವನ ಸರ್ವ ಶಾರೀರಿಕ-ಮಾನಸಿಕ-ಸಾಮರ್ಥಗಳು ಕಾರಖಾ ನೆಯ ಕೆಲಸದಲ್ಲಿಯೇ ಖರ್ಚಾಗಹತ್ತಿದವು. ವಿನಾಯಕನ ಕಾರಖಾನೆಯು ರಾಮಪುರದಲ್ಲಿ ಸ್ಥಾಪಿತವಾಗಿ ಇಂದಿಗೆ ಒಂದೂ ವರಿ ವರ್ಷವಾಯಿತು. ಕಾರಖಾನೆಯು ಒಳ್ಳೆ ಭರಭರಾಟೆಯ ಸ್ಥಿತಿಗೆ ಬಂದಿತು. ಕೆಲವರು ಕೇವಲ ಸಾಂಪ ಕ ತೊಂದರೆಯಿಂದ ಈ ಕಾರಖಾನೆಗೆ ಪ್ರಚಂಡಸ್ವರೂ ಪವು ಬರಲಿಕ್ಕಿಲ್ಲೆಂಬ ಲೇಖವನ್ನೂ, ಕೆಲವರು ಸ್ವಲ್ಪ ಭಾಂಡವಲಿನಿಂದ ವಿನಾಯಕನು ತನ್ನ ಕಾರಖಾನೆಯನ್ನು ಎಷ್ಟು ಉತ್ಕೃಷ್ಟ ರೀತಿಯಿಂದ ನಡಿಸಿರುತ್ತಾನೆಂಬ ಯಥಾ ತಥ್ಯ ಲೇಖವನ್ನೂ ಪ್ರಸಿದ್ಧ ವರ್ತಮಾನಪತ್ರಗಳಲ್ಲಿ ಕೊಡಹತ್ತಿದರು. ಈ ಎರಡೂ ತರದ ವರ್ತಮಾನಪತ್ರಗಳನ್ನು ಚಿಂತಾಮಣಿರಾಯನು ಓದುತ್ತಿದ್ದದ್ದರಿಂದ ಅವನ ಮನಸ್ಸಿನಲ್ಲಿ ವಿನಾಯಕನ ವಿಷಯವಾಗಿ ಮೊದಲಿಗಿಂತ ಅಧಿಕವಾದ ಆದರವು ಉತ್ಪ ನೃವಾಯಿತು. ವಿನಾಯಕನಿಗೆ ಹೆಚ್ಚು ಹಣದ ಸಹಾಯ ಮಾಡಬೇಕೆಂದು ಅವನಿಗೆ ತೋರಹತ್ತಿತು, ಎರಡು ವರ್ಷವಾದ ಕೂಡಲೆ ಈ ಕಾರಖಾನೆಯು ಮತ್ತಿಷ್ಟು ಬೆಳ ವಣಿಗೆಯನ್ನು ಹೊಂದಿತು. ಈ ಕಾರಖಾನೆಯಲ್ಲಿ ಸಿದ್ಧವಾದ ಶುದ್ಧ ಕಬ್ಬಿಣ, ತಾಮ್ರ, ಹಿತ್ತಾಳಿಗಳು ಪೇಟೆಯಲ್ಲಿ ಮಾರಹತ್ತಿದವು, ಈ ಕಾರಖಾನೆಯ ವಿಷಯವಾಗಿ ಅನೇಕ ಸದಭಿಪ್ರಾಯಗಳು ಚಿಂತಾಮಣಿರಾಯನ ಕಿವಿಗೆ ಬೀಳಹತ್ತಿದ ಕೂಡಲೆ ಅವನು ಒಮ್ಮೆ ಸ್ವತಃ ವಿನಾಯಕನ ಕಾರಖಾನೆಯನ್ನು ನೋಡಬೇಕೆಂಬ ಉತ್ಸುಕತೆಯುಳ್ಳವ ನಾದನು ರಾಮರಾಯ-ದಿವ್ಯಸುಂದರಿ-ಮಧುರೆಯರಿಗೂ ಆ ಕಾರಖಾನೆಯನ್ನು ನೋಡ ಬೇಕೆಂಬ ಉತ್ಕಟಾಪೇಕ್ಷೆಯಿದ್ದಿತು. ಆಗ ಸರ್ವಾನುಮತಿಯಿಂದ ರಾಮಪುರಕ್ಕೆ ಹೋಗುವದು ನಿಶ್ಚಿತವಾಯಿತು. ಆ ಪ್ರಕಾರ ಎಲ್ಲ ಜನರು ಹೊರಟುಹೋಗಿ ಮೊದಲು ಹೈದರಾಬಾದವನ್ನು ಸೇರಿದರು, ಹೈದರಾಬಾದಕ್ಕೆ ಬಂದಮೇಲೆ ಚಿಂತಾಮಣಿರಾಯನ