ಪುಟ:ದಿವ್ಯ ಪ್ರೇಮ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಒಡಲಲ್ಲಿ ಅನಿರೀಕ್ಷಿತವಾಗಿ * ಅಲಗಿಕ್ಕಿ ತಿರುವಿ' ದಂತಾಯ್ತು! ಆ ಬಟ್ಟೆಗಳು ಹಿರಿಯ ಮಗಳು ಸಣಳಿದ್ದುಗೆ ಹೊಲೆ ಖಿಸಿದ ವು. ಇಲ್ಲಿಗೆ ಆ ಸಂಗತಿ ಹದಿನೈದು ಹದಿನಾರು ವರ್ಷಗಳ ಹಳಮಾತು. ಒಂದು ವರ್ಷದ ಕೂಸಿ ದ್ದಾಗ ನ್ಯೂಮೊನಿಯೂ ೨ ದ ಕ ಡಿಸತ್ತು ಹೋಗಿದ್ದಳು, ಹಿರಿಯ ಮಗಳು ತೀರಿಕೊಂಡ ದುಃಖವು ಕೃದಯದಲ್ಲಿ ಅದೆಷ್ಟೋ ನೆಲೆನಿಂತಿತ್ತು . ಜ್ಞಾಪಕಕ್ಕೆ ಬಂದಾಕ್ಷಣ ಅದು ಮರುಕಳಿಸುತ್ತಿತ್ತು. ದಿನಗಳೆಂದರೆ ದುಃಖದ ಒರತೆಯ ಕುಂದಿತ್ತು ಮೊದಲಿನಷ್ಟು ಮನಸ್ಸಿಗೆ ವೇದನೆಯಾಗುತ್ತಿರ ಲಿಲ್ಲ. ಹೀಗೆ ಎಷ್ಟೋ ಹೊತ್ತು ಕಮಲಾ ಕನಸಿನ ಸಾಮ್ರಾಜ್ಯದಲ್ಲಿ ಅಲೆ ದುಡುವಳು. ಈಗ ಆ ಹುಡಿಗೆ ಬದುಕಿದ್ದರೆ ನೆರೆಮನೆಯ ನಳಿನೆಯಷ್ಟು ದೊಡ್ಡದಾಗುತ್ತಿತ್ತಲ್ಲಾ! ಈಗಾಗಲೆ ಲಗ್ನ ಪೂರೈಸಿದ್ದರೆ ಒಂದು ವರ್ಷದ ಕೂಸಿಗೂ ತಾಯಿಯಾಗಬಹುದಿತ್ತು. ಕೂಸು ಒಂದು ವರ್ಷದ್ದಿದ್ದರೇನಾ ಯಿತ.? ಅದೆಷ್ಟು ಬಲಶಾಲಿಯಾಗಿ ಎರಡು ಮೂರು ವರ್ಷಗಳ ಕೂಸಿನಂತೆ ತೆರುತ್ತಿತ್ತಲ್ಲ! “ಅದಕ್ಕಿದ್ದ ಸೌ೦ದರ್ಯವೇ ಒಂದು ತೆರ; (ಆ ತು೦ಬು ಗಲ್ಲ ಗಳ , ಬೊಗಸೆಗಣ್ಣುಗಳು, ತೀಡಿಟ್ಟಂತಿದ್ದ ಮಗು ಆ ತುಟಿಗಳೆರಡರ ನಡುವೆ ಯಾವಾಗಲೂ ಸುಳಿದಾಡುತ್ತಿದ್ದ ಮೈದುನಗೆ.. , ” ಇತ್ಯಾದಿ ಆಕೆಯ ಕಣ್ಮುಂದೆ ಕಟ್ಟಿ ಒಂದು ಕ್ಷಣ ಆತ್ರಳ , ಬಟ್ಟೆಗಳಿಗೆಲ್ಲ ಮಡಿಕೆಹಾಕಿ ಕವಾಟಿನಲ್ಲಿಟ್ಟು ಅದರ ಬಾಗಿಲ ಮುಚ್ಚಿ ದಳು ಆದರ ಪಕ್ಕದಲ್ಲಿಯೇ ಸೀರೆಯ ಸೆರಗನ್ನೇ ನೆಲದಮೇಲೆ ಹಾಸಿ ಅಡ್ಡಾ ದಳು. ಆಕೆ ಮನಸ್ಸಿನಲ್ಲಿ ಅದೆಷ್ಟೋ ವಿಚಾರಿಸಿದಳು. ಎಷ್ಟೋ ಕನಸು ಕೆಂಡಳು. ಒಂದು ಕ್ಷಣ ಮಲಗಿದಲ್ಲಿಂದ ಕಣ್ಮರಳಿಸಿ ಮಲಗಿ ನಿದ್ರೆ ಹೋದ ಅಕ್ಕಿ ಚ೦ಪಿಯರನ್ನು ದಿಟ್ಟಿಸಿ ಎವೆಮುಚ್ಚಿದಳು, ಜಡೆ ಸಡಿಲಾಗಿ ತಲೆಯ ಕೂದಲು ಗಾಳಿಯಲ್ಲಿ ಹಾರಾಡ ತ ನೆಲಕ್ಕೆ ಹೊಂದಿಸಿದ ಪಾಟೀಕಲ್ಲುಗಳನ **ುಡಿಸುತ್ತಿದ್ದರೂ ಅದರ ಲಕ್ಷ ಆಕೆಗಿರುವದಿಲ್ಲ ಗಾಳಿ ಒಳಗೆ ನುಗ್ಗುವಾಗ ಆಕೆಯುಟ್ಟ ಹಸಿರಂಚಿನ ಸೀರೆಯ ಚುಂಗು ಗಾಳಿಯಲ್ಲಿ ಹಾರಾಡುವದು, ಆ ಗೆ ನಿದ್ರೆ ಬಂತು. ಕೈ ಸಾಲೆಯಲ್ಲಿಯ ಗಡಿಯಾರವು Cಟಿಕ್, ಟಿe” ಸಪ್ಪಳ ಮಾಡುತ್ತಿತ್ತು ಹೊತ್ತು ಮೌನವಾಗಿ ಸರಿಯುತ್ತಿತ್ತು. ಮನೆ ತುಂಬ ಮೌನವೇ ಮೌನ ಶಾಂತಿಯೇ ಶಾಂತಿ; ಕಮಲಾ ಆಗ ಸ್ವಪ್ನ ಅರಮನೆಯಲ್ಲಿ ಮಲಗಿದ ದೇವತೆ ಯಕತೆ ಕಂಗೊಳಿಸಿದಳು.