ಪುಟ:ದಿವ್ಯ ಪ್ರೇಮ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

< ಎಷ್ಟ ಹೊತ್ತಾಗಿ ಬೆಂಕಿ ಮಾಡುವದು ? ಅವರು ಬರುವ ಹೊತ್ತಾ, ಯಿತು.?' ಆಕೆ ಪತಿಯು ಬರುವದರೊಳಗಾಗಿ ಸ್ನಾನಮಾಡಲೇಬೇಕು. ಅ ಕರೆದಳು. ಬಾರೇ ಕಮಲಾ ಇಲ್ಲೆ, ನಿನ್ನ ಕೂದಲು ಕಟ್ಟುವೆ' ಬೇಡ ನಾನೇ ಕಟ್ಟ ಕೊಳ್ಳುವೆ ” ಎಂದು ಕಮಲಾ ಕನ್ನಡಿ ತಕೊಂಡಳು. ಚಂಪು ಮಧ್ಯದಲ್ಲಿ ಬಂದು ಅವರಲ್ಲಿ ಇಣಿಕಿ ಹಾಕಲಿಕ್ಕೆ ಪ್ರಾರಂಭಿಸಿದಳು, ತನ್ನ ಪಡಿ ರೂಪ ಕಂಡು, ತನ್ನಲ್ಲಿಯೇ ಮುಗುಳುನಗೆ ನಕ್ಕಳು, ಅದರ ಆನಿಕ ಹಿಡಿದು ಜಗ್ಗಿದಳು. ಕನ್ನಡಿ ಹಿಂದಕ್ಕೆ ಬಿತ್ತು ಕಮಲಳಿಗೆ ತಡ ವೆನಿಸಿತು,

  • C ಚಂಪಾ ನೀನು ತುಂಟ ಕಾಣೆ........' ಎಂದೆನ್ನುತ್ತ ಕನ್ನಡಿಯನ್ನು ಪುನಃ ಸರಿಯಾಗಿರಿಸಿಕೊಂಡು, ತನ್ನ ಪ್ರತಿಬಿಂಬವನ್ನೇ ಕಂಡು ಒಂದು ಕ್ಷಣ ಅದನ್ನು ದಿಟ್ಟ ಸುಪಢರಲ್ಲಿಯೇ ಲೀನಳಾಗಿ, ಮಗ್ನಳಾದಳು

ಅವಳ ಅತ್ತೆ ಆಕೆಯ ಕೂದಲನ್ನು ನಿತ್ಯ ಹಿಕ್ಕಿ ಕಟ್ಟುವೆನೆಂದು ಕರೆಯು ತಾಳೆ, ಆಕೆ ತಾನೇ ಹಿಕ್ಕಿ ಕಟ್ಟಿ ಕೊಳ್ಳುವಳು, ತಲೆ ಹಿಕ್ಕಿ ಕೊಂಡನಂತರವೂ ಆಕೆಯ ಮುಖದ ವೆಲಿನ ಕುಂಕುಮ ಅಳಿಸಿರಲಿಲ್ಲ. ಅದನ್ನು ಗುರುತಿಸಿದ ಅತ್ತೆ “ ನೀನು ಚಿರಮುದಮ್ಮಾ, ನನ್ನ ೦ಕಿ ಮುಂಡೆಯಾಗುವದಿಲ್ಲ ) ಎಂದು ಹರಸಿದಳು. ಕಮಲಾ ಪಾದಮುಟ್ಟಿ ಆಕೆಯನ್ನು ನಮಸ್ಕರಿಸಿ ಸ್ನಾನಕ್ಕೆ ಹೋದಳು. ಸ್ನಾನದ ನಂತರ ಮಧ್ಯಾಹ್ನ ಒಣಗಲಿಕ್ಕೆ ಹಾಕಿದ ಬಟ್ಟೆಗಳನ್ನು ಮಡಿಚಿ, ಕೋಣೆಯನ್ನು ಸ್ವಚ್ಛ ಮಾಡಿ ಪತಿಗಾಗಿ ಹಣ್ಣು, ತಿನಸುಗಳನ್ನು ಒಂದು ತಟ್ಟೆಯಲ್ಲಿ ಸಿದ್ದ ಪಡಿಸಿದಳು. ಏನೇ ಮಾಡಿದರೂ ಆಕ ನೀಟಾಗಿ ಕಾಣುವಂತೆ ಸ್ವಚ್ಛವಾಗಿ ಮಾಡುತ್ತಾಳೆ, ಪತಿದೇವನು ಬಂದನು, ತನಗಾಗಿ ಸಿದ್ಧಪಡಿಸಿದ ಫಲಹಾರವನ್ನು ಕಂಡು ಹರ್ಷಕ್ಕಿಬರುವದು. ಬಂದವನೇ ಕಮಲಳ ಕನ್ನಡಿಯಂಥ ಗಲ್ಲಕ್ಕೆ ಮುತ್ತು ಕೊಡುವನು. ಕಮಲಾ ನಾಚಿಕೆಯಿಂದ ಅಲ್ಲಿಂದ ಪಲಾಯನ ಮಾಡುವಳು. ಆತನು ಸಾವಕಾಶವಾಗಿ ತಿಂಡಿಯನ್ನು ತಿನ್ನುತ್ತ ಆಕೆಯನ್ನು ಕೂಗಿದನು, “ ಏ, ಕಮಲಾ ಹಹವನ್ನು ಹಾಕಿಕೊಡುವದಿಲ್ಲವೆನೇ ? ” ಕಮಲಾ ಬಂದಳು. ಚಹವನ್ನು ಕಪ್ಪಿಗೆ ಬಾಗಿಸಿಕೊಟ್ಟು, ಆತನ ಹತ್ತಿರ ವಿದ್ದ ಒಂದು ಕಾಗದದಿಂದ ಮಡಿಚಿದ .ಒಂದು ಪುಢಿಕೆಯನ್ನು ನೋಡಿದಳು.