ಪುಟ:ದಿವ್ಯ ಪ್ರೇಮ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾಕುತಾಯಿ ನಿತ್ಯದಂತೆ ಏನೋದಿನಿ ಬೈಗಿನಲ್ಲಿ ತನಗೂ ಬೋಕಾನಿಗೂ ನೀವು ಊಟಕ್ಕೆ ಮಾಡೆಂದು ಅಡಿಗೆಯ ಆಳು ಹರನಾಥನಿಗೆ ಹೇಳಿದಳು, ಆಯಾ ಬೈಗಿನಲ್ಲಿ ಏಳುವರೆ ಘಂಟೆಗೆ ತನ್ನ ಮನೆಗೆ ಹೋಗುತ್ತಿದ್ದಳು ಅಷ್ಟರಲ್ಲಿ ಯೇ ವಿನೋದಿನಿ ರಾತ್ರಿಯೂಟ ತೀರಿಸಬೇಕಾಗಿತ್ತು ಇಲ್ಲವೆ ದರೆ ಆಕೆಗೆ ಅ೦ದು ಊಟಕ್ಕೆ ಕೂಡಲು ಸಮಯವೇ ಸಿಕ್ಕುತ್ತಿರಲಿಲ್ಲ ಅವಳ ಮನ ಕಾಟವೇ ಸಾಕಷ್ಟಿರುತ್ತಿತ್ತು, ಆಯಾ ಶೋಕಾನಿಗೆ ಉಣ್ಣಿಸಿ, ಮಲಗಿಸು ಮಗ್ಗುಲ ಕೂನೆಗೆ ಹೋದಳು, ಶೋಕಾ ಮಲಗಿದೊಡನೆಯೇ ಆಯಾ ಹೋಗಿಬಿಡುತ್ತಿದ್ದಳು. ಏನೋ ದಿನಿ ಊಟಮಾಡಿ ಬೋಕಾನ ಬಳಿಗೆ ಬಂದಾಗ ಆಯಾ ಇನ್ನೂ ಮನೆಯ ಲ್ಲಿಯೇ ಇದ್ದಳು. ಆಕೆ ಮೊಕಾನೊಂದಿಗೆ ಹರಿದ ಚಾಪೆಯ ಮೇಲೆ ಮಲ ಗಿದ್ದಳು. ವಿನೋದಿನಿ ಆಶ್ಚರ್ಯಚಕಿತಳಾಗಿ ಕೆಲವು ಸಮಯ ನಿಂತು ಕಡೆಗೆ ಆಯಳನ್ನು ಎಬ್ಬಿಸಿ, “ ನೀನು ಮನೆಗೆ ಹೋಗುವದಿಲ್ಲವೇ ? ” ಎಂದು ಕೇಳಿದಳು. * ಆಯಾ, ಆಕಳಿಸಿ ಎದ್ದು ಕುಳಿತಳು ಅಲ್ಲಿಯೇ ಇರುವದಾಗಿ ಆಕೆ ತಿಳಿಸಿದಳು ರಾತ್ರಿಯಲ್ಲಿ ಲೋಕಾನನು ಬಡಿಸಿಕೊಳ್ಳಲು ಬಿಡ ವದಿಲ್ಲ ಒಡೆಯ ಒಡತಿಯರು ಮಲಗಲಿ, ತಾನು ಮಗುವನ್ನು ಆಡಿಸುವೆ; ಒಡತಿಯರು ರಾತ್ರಿ ಊಟಕ್ಕೆಂದು ನಾಲ್ಕು ಕಾಸುಕೊಟ್ಟರೆ ರೊಟ್ಟಿ ಕೊಂಡು ತಿಂದು ಅಲ್ಲಿಯೇ ಇರುವುದು ತಿಳಿಸಿದ . " ಅ೦ದು ವಿನೋದಿನಿಗೆ ಆತ್ಯಾನಂದವಾಯಿತು, ಆಯಾಳಿಗೆ ನಾಲ್ಕು ಕಾಸಗಳಿಗೆ ಬದಲಾಗಿ ನಾಲ್ಕು ಆಣೆಗಳನ್ನು ಕೊಟ್ಟಳು. ನೃಪೇಶ ವಿನೋ ದಿನಿಯರಿಗೆ ಅಂದಿನಿಂದ ಶೋಕಾನು ರಾತ್ರಿಯಲ್ಲಿ ಕೊಡುವ ಕಿರುಕುಳ ತಪ್ಪಿ ದವು ಅವರ ಸ್ಥಾನ ಆಯಾ ಆಕ್ರಮಿಸಿದಳು. ರಾತ್ರಿ ಯ ಒತಳ ಭಾಗವನ್ನು ಆಕೆ ಆತನನ್ನು ಹೊತ್ತುಕೊಂಡೇ ತಿರುಗಾಡುವದರಲ್ಲಿ ಕಳೆಯುತ್ತಿದ್ದಳು, ಇಡಿಯ ಇರಳು ಕೂಸನ್ನು ಕೊಂಕುಳಲ್ಲಿಟ್ಟು ತಿರುಗಿದ್ದರೂ ಬೆಳಗಿನಲ್ಲಿ ಹುಪಿನಿಂದಲೇ ಇರುತ್ತಿದ್ದಳು. ಹಗಲಿನಲ್ಲಿ ಎಂದೂ ಸೋಮಾರಿ ತನದಿಂದ ಕಣ್ಣುಜ್ಜಿಕೊಳ್ಳುತ್ತಿರಲಿಲ್ಲ. ಮೊದಲಿನಂತೆಯೇ ಕೆಲಸ ಮಾಡುತ್ತಿದ್ದಳು' ವಿನೋದಿನಿಗೆ ಇದನ್ನು ಕಂಡು ಸ್ವಲ್ಪ ಮನಸ್ಸಿಗೆ ಕೆಡುಕೆನಿಸಿ ಸಂಬಳ ಹೆಚ್ಚಿ ಸುವದಾಗಿ ತಿಳಿಸಿದಳು, ಆಯ ಒಪ್ಪಲಿಲ್ಲ. ಈ ಜಗತ್ತಿನಲ್ಲಿ ತಾನೊಬ್ಬಳೇ ಆ ಹಣವನ್ನೇನು ಮಾಡಲಿ ಎಂದು ಹೇಳಿಬಿಡುತ್ತಿದ್ದಳು