ಪುಟ:ದಿವ್ಯ ಪ್ರೇಮ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಎಂಥದೇ ಪರಿಸ್ಥಿತಿಗಾದರೂ ಪ್ರತಿಯೊಬ್ಬನು ಕೆಲದಿನಗಳಲ್ಲಿ ಹೊಂದಿ ಕೂಳ್ಳುತ್ತಾನೆ. ಕ್ರಮೇಣ ಆಯಳಿಗೆ ಮಾರ್ಗ, ಬೀದಿಗಳೆಲ್ಲವೂ ಪರಿಚಿತ ವಾದವು. ಕೆಲವು ಅಂಗಡಿಕಾರರ ಪರಿಚಯ ವೂ ಆಯಿತು; ಎಲ್ಲಿ ಸಾಮಾನು ಕಡಿಮೆ ಬೆಲೆಗೆ ಸಿಕ್ಕುವದು, ಎಲ್ಲಿ ಹೆಚ್ಚ ಭತಿಗೆ ಸಿಕ್ಕುವದು ಎಂಬುದರ ಎಲ್ಲ ಅನುಭವವಾಗಿತ್ತು. ನೆರೆಹೊರೆಯವರ, ಆಯ ಳಗೆ ಬಂಗಾಲಿ ನುಡಿ ಬಾರದಿದ್ದರೂ, ಕೈ ಬಾಯ ಸನ್ನೆಗಳಿಂದ ಮಾತನಾಡಿಸುತ್ತ ಸಂಗಡಿಗರಾ ದರು. ಕಲವು ದಿನಗಳಲ್ಲಿ ಎಲ್ಲವೂ ಸರಿಹೋಯಿತು. ಏತರ ವಿಷಯಕ್ಕೂ ಆಕೆಗೆ ಕೂರತ ಬರಲಿಲ್ಲ. ತನ್ನ ದೈವದಲ್ಲಿ ಇಲ್ಲಿಯೂ ಇರಬೇಕಾಗಿ ಬರೆ ದಿತ್ತು. ಅದು ಹೇಗೆ ತಪ್ಪುತ್ತದೆಯೆಂದು ಸಮಾಧಾನ ಹಚ್ಚಿಕೊಂಡಳು. ಆದರೆ ಮನೆಯಲ್ಲಿ ದ :ಖದ ಕರ್ಮೋಡಗಳ, ಕವಿದವು. ಸ್ವಲ್ಪ ದಿನ ಬ್ ನೆ ಬಿದ್ದ ವಿನೋದಿನಿಯು, ಚೊಕ್ಕಟವಾದ ಸಂಸಾರ, ಪ್ರೇಮದ ಪತಿ, ವ ಮತೆಯ ಮಗು ಎಲ್ಲವನ್ನೂ ಬಿಟ್ಟು ಹೊರಟುಹೋದಳು, ಮಗು ತಬ್ಬುಲಿ ಯಾಯಿತು. ಇದರಿಂದ ನೃಪೇಶನಿಗೆ ಎದೆಯೊಡೆದಂತಾಗಿ ಒಂದೆರಡು ವಾರ ಜಗತ್ತಿಗೆ ಮುಖ ತೋರಿಸುವದಾಗಲಿಲ್ಲ ಆತನು ಒಂದು ಕೆಲಸದಮೇಲಿದ್ದ ನು. ನಿಯ ಇನಿಯಳ ವಿರಹ ದಿಂದ ಕೆಲವು ದಿವಸ ನೃವೇಶ ಕಲಸಕ್ಕಾಗಿ ಉದಾಸೀನನಾದ; ಅದರಿಂದ ಅವನಿಗೆ ಭಯಂಕರ ಹಾನಿತಟ್ಟಿತು. ಕೆಲವು ದಿನಗಳಲ್ಲಿ ಸಾಲವೂ ಆಯಿತು. ಮನುಷ್ಯನ ಹೃದಯ ಭಗ್ನವಾಗಿದ್ದರೂ, ಅದರ ಯಾತನೆ ಎಷ್ಟೇ ಇದ್ದರೂ ಅವನು ತನ್ನ ಅನ್ನಕ್ಕಾಗಿ ಹೆಣಗಲೇ ಬೇಕಾಗುವದು. ಅವನು ಒಬ್ಬನೇ ಆಗಿದ್ದರೆ ಹಾಗೆಯೇ ಕೆಲವು ದಿವಸ ದುಃಖಿಸುತ್ತ ಉಪವಾಸದಿಂದಿ ರಲು ಬರುತ್ತಿತ್ತು. ಆದರೆ ತನ್ನ ನ್ನೇ ನಂಬಿ ಮತ್ತೆರಡು ಹೊಟ್ಟೆಗಳು ಕುಳಿ ತಿದ್ದವು. ಆದ್ದರಿಂದ ನೃಪೇಶನಿಗೆ ಹೆಂಡತಿಗೆ ಗಿ ಶೋಕಿಸುತ್ತ ಕೂಡಲು ಸಮಯವಿರಲಿಲ್ಲ. ತನ್ನ ಮಗನ ಉಪಜೀವನಕ್ಕಾದರೂ ಅವನು ಕೆಲಸವನ್ನು ಅರಸಲಿಕ್ಕೆ ಹೋಗಬೇಕಾಯಿತು ಕಲಕತ್ತೆಯಲ್ಲಿ ಕೇಳಿದಾಕ್ಷಣ ಕೆಲಸ ಸಿಬಿಡುವದಿಲ್ಲ. ಅವು ಸಿಗುವದು ಎಷ್ಮ 'ಷ್ಟವೆಂ ಒಂದು ಅವಕ್ಕಾಗಿ ಅರಸುವ ಉಮೇದವಾರರಿಗೇ ಗೊತ್ತು, ಅದೃಷ್ಟವೂ ನೃಪೇಶಸಿಗೆ ಅನಿ ಕೂಲವಾಗಿರಬೇಕು. ಒಂದು ಕೆಲಸ ಸಿಕ್ಕಿತು, ಅದೇನೂ ಅಷ್ಟು ಚೆನ್ನಾಗಿ cಲಿಲ್ಲ. ಆದರೂ ಅವನ ಇಂದಿನ ಸ್ಥಿತಿಗೆ ಅದೇ ಹೊಂದಿಕೆಯಾಗುವ೦ತಿತ್ತು,