ಪುಟ:ದಿವ್ಯ ಪ್ರೇಮ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತನ್ನ ಹಳಿ ಮನೆ ಬಿಟ್ಟು ಊರ ಮಧ್ಯದಲ್ಲಿ ಒಂದು ಹೊಲಸಾದ ಓಣಿಯಲ್ಲಿ ಕತ್ತಲೆಯಿಂದ ತುಂಬಿದ ಒಂದು ಸಣ್ಣ ಮನೆಯನ್ನು ಭಾಡಿಗೆ ಹಿಡಿದ. ಇನ್ನು ಉಳಿದವರಿಗಾಗಿ ಸಂಕಟಕ್ಕಿಟ್ಟು ಕೊಂಡಿತು, ಈಗ ಇಬ್ಬರನ್ನೂ ಇಟ್ಟು ಕೊಳ್ಳುವದಕ್ಕೆ ಸಾಧ್ಯವಿಲ್ಲ ಸದ್ಯದ ಸಂಬಳದ ಹಣವು ಇಬ್ಬರಿಗೂ ಕೂಡುವದಕ್ಕೆ ಸಾಕಾಗುತ್ತಿರಲಿಲ್ಲ, ಹೆಂಡತಿ ಬದುಕಿದ್ದಾಗಲೇ ಇಬ್ಬರು ಆಳುಗಳ ಅವಶ್ಯಕತೆಯಿತ್ತು. ಆದ್ದರಿಂದ ಈಗ ಅವರಲ್ಲಿ ಒಬ್ಬರನ್ನು ಕಡಿಮೆ ಮಾಡಲೂ ಬರುವಂತಿಲ್ಲ. ಆದರೂ ಆರ್ಧಿಕ ಪರಿಸ್ಥಿತಿಯ ಕಡೆಗೂ ಸ್ವಲ್ಪ ಲಕ್ಷಕೊಡಬೇಕಾಗುವದು. " ನೃಪ'ಶನು ಅವರಲ್ಲಿ ಅಡಿಗೆಯವನಾದ ಹರನಾಥನನ್ನು ಬಿಡಲು ನಿಶ್ಚ ಯಿಸಿದ, ಆಯಳೇ ಅಡಿಗೆ ಮಾಡಿ ಕೊಂಡು ಹೋಗುವಳು. ಮೊದಮೊದಲು ಆಕೆ ಚೆನ್ನಾಗಿ ಮಾಡಲಾರಳು ಕೆಲವು ದಿನ ಸೈರಿಸಬೇಕೆಂದು ನೃತೇಶ ನಿಶ್ಚಯಿಸಿದ.ಆಯಳನ್ನೇ ಬಿಟ್ಟುಬಿಡಲು ಅವನಿಗೆ ಒಮ್ಮೆಯೂ ವಿಚಾರಹೊಳೆ ಯಲಿಲ್ಲ. ಆಕೆ ಎಷ್ಟೆಂದರೂ ಹೆಂಗಸು. ತನ್ನ ಮನೆ ಆಫ್ರಿಷ್ಟರನ್ನೂ ಬಿಟ್ಟು ಇನ್ನು ದೂರದವರೆಗೆ ಬಂದಿದ್ದಾಳೆ. ಆಯಳನ್ನು ಷ್ಟು ಅಗಲಿಸಿ ಬಿಟ್ಟರೆ ತೀರಿಯೇ ಹೋಯಿತು ಮಗುವಿನ ಗತಿ, ಆದ್ದರಿಂದ ಹರನಾಥನನ್ನೆ ಬಿಡೆ ಬೇಕಾಯಿತು. ನೃಪೇಶ ಅವನಿಗಾಗಿ ಗೆಳೆಯರ ಮನೆಯಲ್ಲಿ ವ್ಯವಸ್ಥೆ ಮಾಡಿ ಅಲ್ಲಿಗೆ ಕಳಿಸಿದ. ಶೋಕಾನನ್ನು ಬಗಲಿನಲ್ಲಿಟ್ಟು ಕೊಂಡು ಆಯ ಅಡಿಗೆ ಮಾಡಲು ಮೊದಲು ಮಾಡಿದಳು, ಆಯ ಮಾಡಿದ ಆಡಿಗೆಗೆ ಹುಣಿ ನ ಹುಳಿ ಮತ್ತು ಮೆಣಸಿನ ಖಾರ ಕ್ರಮದಪ್ಪಿ ಬಿದ್ದಿದ್ದ ವ್ಯ, ನೃಪೇಶನಿಗೆ ಮುಂಜಾನೆ ಊಟಕ್ಕೆ ಬಡಿಸಿದಳು ಮೊದಲನೆಯ ತುಲ್ಲಗೇ ನೃಪೇಶ ಪೂರಾ ಇಳಿದುಬಿಟ್ಟ, ಆಯಳ ಮನಸ್ಸನ್ನು ನೋಯಿಸಬಾರದೆಂದು ಅದನ್ನೇ ಗಟ್ಟಿ ಮನಸ್ಸು ಮಾಡಿ ತಿಂದು ಮುಗಿಸಿದನು. ಆಕೆಗೂ ಬುದ್ದಿ ಕಡಿಮೆಯಾಗಿ ರಲಿಲ್ಲ, ಊಹಿಸಿದಳು. ಆಕೆಯ ಕಂಗಳಿಂದ ನೀರು ಧಾರೆಯಾಗಿ ಸುರಿಯಿತು. ಮರುದಿವಸ ನೃಪೇಶ ಹರನಾಥನನ್ನು ಮರಳಿ ಕರೆತರಲು ಹೋಗಿ ಕರೆದುಕೊಂಡೇ ಬಂದ. ಈ ಸಲ ಆಯ ತಾನೇ ಸ್ವಂತಃ ಬಿಡಲು ನಿಶ್ಚಯಿ ಸಿ ವಳ, ಬಾಬುಗಳು ಇಬ್ಬರು ಸೇವಕರಿಗೆ ಕೊಟ್ಟು ಪೂರೈಸುವದಕ್ಕೆ ಸಮರ್ಥರಾಗಿಲ್ಲವೆಂದು ಆಕೆಗೆ ಪೂರಾ ಗೊತ್ತು, ತನ್ನೊ ಬ್ಬಳಿಗೇ ಕೆಲಸ ಸಾಗಿಸಿಕೊಂಡು ಹೋಗುವದೂ ಸಾಧ್ಯವಿಲ್ಲ. ಅಂತೆಯೇ ಕಲಸಬಿಟ್ಟು