ಪುಟ:ದಿವ್ಯ ಪ್ರೇಮ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಾಕಿ ನಗುತ್ತಿದ್ದಳು. ಆಗ ಕಮಲಾ ಹಚ3 ಕೆಟ್ಟ ಹುಡುಗಿ, ಏ, ನೀತಿ ಗದ್ದಲ ಮಾಡಿ ನಿಮ್ಮ ತಂದೆಯನ್ನೆಬ್ಬಿಸಿಯೇ... ” ಎಂದು ಕಿರುದನಿಯಲ್ಲಿ ಕಿರುಚಿದಳು. ಆದರೆ ಚಂಪುವಿಗೆ ಅದರ ಕಿರುನೆಲ್ಲಿ ? ಮೊಗ್ಗು ವಿನ೦ತಿದ್ದ ಕಣ್ಣುಗಳನ್ನು ಪಿಳುಕಿಸುತ್ತ ಚಲ್ಲಾಟವಾಡುತ್ತಿದ್ದಳು. ಆಕೆಯ ಸ್ವಾಮಿ ಮಲಗುದು ಮಂಚದ ಮೇಲೆ; ಅದರ ಪಕ್ಕದ ಲ್ಲಿಯೇ ಕೋಣೆತುಂಬ ಹಾಸಿಗೆ ಹಾಸಿರುತ್ತಿತ್ತು. ಮಂಚದ ಕೆಲಬಲ್ಲಿ ಕಮಲ ಚ೦ವುವಿನೊಂದಿಗೆ ಮಲಗುತ್ತಾಳೆ. ನಂತರ ಕ್ರಮವಾಗಿ ಲಕ್ಕಿ, ರಾಣು, ಮೋನ್ಯಾ, ಶೋಭಾ ಮಲಗುವರು, ಅವರಲ್ಲಿ ಚಂಪಾ ತೀರ ಚಿಕ್ಕವಳು; ಶೋಭಾ ಹಿರಿಯಳು ವಯಸ್ಸು ಹೆಚ್ಚಾದಂತೆಲ್ಲ ತಾಯಿಯಿಂದ ಹೆಚ್ಚೆಚ್ಚು ದೂರದಲ್ಲಿ ಮಲಗಬೇಕು. ಮಲಗಿಕೊಳ್ಳುವಾಗ ಪ್ರತಿಯೊಬ್ಬರೂ ತಮ್ಮ ತಮ್ಮ ಹಾಸಿಗೆಗಳ ಗಡಿಗಳನ್ನು ಅರಸರು ತಮ್ಮ ನಾಡುಗಳ ಗಡಿಗಳನ್ನು ನಿಶ್ಚಯಿಸಿಕೊಳ್ಳುವದಕ್ಕಿಂತ ಹೆಚ್ಚಾದ ದಕ್ಷತೆವಹಿಸಿ ನಿಶ್ಚಯಿಸಿಕೊಳ್ಳುವರು. ಅಕ್ಕಿಗೆ ನಾಲ್ಕು ವರ್ಷಗಳು, ಆತನಿಗೆ ತಲೆ ಯ ಕಡೆಗೆ ಎರಡು, ಕಾಲಿನ ಕಡೆಗೆ ಎರಡು ಹೀಗೆ ನಾ ದಿಂಬುಗಳು ರ್ಬೆಕು ರಾಣಸ ಕ ತ ದೇವಿ ಸ್ವರೂಪದವಳು. ಆಕೆಗೆ ಆರು ವರ್ಷ ಗಳು, ತನಗೆಂದೂ ದಿಂಬು ಬೇಡ ಎಂದು ಹೇಳುತ್ತಿದ್ದಳು, " ಅವ್ವಾ, ಇನ್ನೂ ತಲೆಯ ಕಡೆಗೆ ಎರಡು, ಕಾಲ ಕಡೆಗೆರಡು ದಿಂಬು ಇಟ್ಟು ಕೊಂಡು ಮಲಗಲಿಕ್ಕೆ ನಾನೇನೂ ಲಕನನ್ನು ಸವಳಲ್ಲ; ನಾನೆಂದೂ ಉರುಳಿ ನೆಲದ ಮೇಲೆ ಹೋಗುವದಿಲ್ಲ. ಆ ದಿಂಬು ಗಳೆಲ್ಲವೂ ಅವನಿಗೇ ಇರಲಿ ” ಆಕೆಯ ಹೇಳಿಕೆ, ಎಲ್ಲರಲ್ಲಿಯೂ ಉಡಾಳನೆಂದರೆ ಮೋನಾ (ಮೋಹನ).ನಿದ್ರೆಯಲ್ಲಿರುವಾಗ ಬಡಪಾಯಿ ಶೋಭಾಳನ್ನು ಒದೆ ಯ ಬಂಡಿಗಾಲಿ ಉರುಳುವಂತೆ ಆಕೆಯ ಮೇಲೆ ಉರುಳುವನು. ಶೋಭಾ ಎಷ್ಟೆಂದರೂ ಹಿರಿಯ ಮಗಳು; ಸ್ವಲ್ಪವಾದರೂ ತಕರಾರು ಮಾಡಿದರೆ ಎಲ್ಲಿ ತನ್ನ ಹಿರಿಯತನಕ್ಕೆ ಕೊರತೆ ಬರುವದೊ ಎಂದುಕೊಂಡು ಸುಮ್ಮನಿರುತ್ತಿ ದ್ದಳು, ತಮ್ಮನು ನಿದ್ರೆಯಲ್ಲಿ ಒದೆದರೆ ಯಾರೇನು ಮಾಡಬೇಕು? ಆದರೂ ಒಂದೊಂದು ಸಲ “ ಅವ್ಯಾ, ಆತನ ಪಕ್ಕದಲ್ಲಿ ನಾನು ಇನ್ನು ಮಲಗಲಾರೆ, ಬಂಡಿಗಾಲಿಯ ಳಿದ ತತೆ ಮೈ ಮೇಲೆಯುರುಳುತ್ತಾನೆ ” ಎಂದು ತಾಯಿಯಲ್ಲಿ ಹೇಳಿಕೊಳ್ಳುವಳು. ಆದರೂ ರಾತ್ರಿಯಲ್ಲಿ ಆಕೆಗಾಗಿ ಬೇರೆ ಹಾಸಿಗೆ ಮಾಡ ಬೇಕ೦ದಾಗ ಹಾಗೆ ಮಾಡಗೊಡದ ಪುನಃ ಮೊದಲಿನ ಸ್ಥಾನದಲ್ಲಿಯೇ ಮಲ