ಪುಟ:ದೀಕ್ಷೆ.pdf/೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 330 ಕನಸು

ಹಲ್ಲು ಮುರಿದುಕೊಳ್ಳುವುದರಲ್ಲಿ ಯಾವ ಅರ್ಥವೂ ಇರಲಿಲ್ಲ.

     ಮತ್ತೆ ಮಳೆ ಹನಿಯಿತು. ಗುಡುಗಿತು ಆಕಾಶ.
     ಮುರಲೀಧರ ಬೇಗಬೇಗನೆ ಹೆಜ್ಜೆ ಹಾಕಿದ.
     ಅಲ್ಲಿಯೇ ಇತ್ತು ಆತ ವಾಸವಾಗಿದ್ದ ಕೊಠಡಿ.
     ... ಕೊಠಡಿ ಸೇರುವುದಕ್ಕೂ ಮಳೆಸುರಿಯುವುದಕ್ಕೂ ಸರಿಹೋಯಿತು. ಸಾలు ಕೊಠಡಿಗಳಲ್ಲಿ ಒಂದೆರಡು ಕಡೆ ಮಾತ್ರ ದೀಪವಿತ್ತು. ಬಲ ಮಗ್ಗುಲಿನವನು ಬಂದೇ  ಇರಲಿಲ್ಲ. ತನ್ನದರ ಬೀಗ ತೆಗೆದು ದೀಪ ಹಾಕುತ್ತ ಮುರಲೀಧರ ಸಮಾಧಾನದ       ನಿಟ್ಟುಸಿರು ಬಿಟ್ಟು:
      'ಬದುಕಿದೆ!'
     ಹೊಸ್ತಿಲಲ್ಲಿ ನಿಂತು, ಕತ್ತಲೆಯನ್ನು ಇರಿದು, ತಾನು ಬ್ಬಿಟ್ಟು ಬಂದಿದ್ದ ಭೋజನ ಶಾಲೆಯ ಕಡೆಗೊಮ್ಮೆ ಆತ ನೋಡಿದ. ಅಲ್ಲಿ ಹೊರಜಗಲಿಯ ದೀಪ ಉರಿಯುತ್ತಿತ್ತು. ತನಗಿಂತಲೂ ತಡವಾಗಿ ಊಟ ಮುಗಿಸಿದ ಮೂವರು ನಾಲ್ವರು ಬೀದಿಗಳಿಯಲಾರದೆ ಸಂಕಟಪಡುತ್ತ ಬಾಗಿಲಲ್ಲಿ నింತಿದ್ದರು.
     [ಬೇಗನೆ ಹೊರಟು ತಾನು ಒಳ್ಳೆಯ ಕೆಲಸ ಮಾಡಿದೆ...ಇಲ್ಲದಿದ್ದರೆ ರಾತ್ರೆ      ಯೆల్ల ಅల్లిಯೇ ಕೋಳೆಯಬೇಕಾಗುತ್ತಿತ್ತು. ಕಳೆದ తింగళు ఒంದು ರಾತ್ರೆ ಪಟ್ಟ      ಪಾಡು. ಬಹಳ ಹೊತ್ತು ಕಾದ ಬಳಿಕ, 'ಹತ್ತೇ ಮಾರು ದೂರ, ಹೊರಟು ಬಿಡು      ವುದೇ ಸರಿ'-ಎಂದು ಆತ ಹೊರಕ್ಕೆ ಧುಮುಕಿದ್ದ. ಆದರೆ, ಕೊಠಡಿ ಸೇರುವುದ       ರೊಳಗೆ, ಆ ಎರಡೇ ನಿಮಿಷಗಳಲ್ಲಿ, ಸಂಪೂರ್ಣ ತೋಯ್ದು ಹೋಗಿದ್ದ. ಆಗ       ಹಿಡಿದ ನಡುಕ, ಬೆಳಕು ಹರಿದು ಸೂರ್ಯನ ಮುಖದರ್ಶನವಾಗುವವರೆಗೂ ಬಿಟ್ಟು ಹೋಗಿರಲಿಲ್ಲ. ಅಂತಹ ಮಳೆ ಅದು! ಆ అನುಭವವನ್ನು ಸ್ಮರಿಸಿಕೊಂಡರೂ ಸಾಕು,    ಮೈ ಮುಳ್ಳಾಗುತ್ತಿತ್ತು, ಅಬ್ಬ!]
      ఒಮ್ಮೆಲೆ ಗಾಳಿ ಬೀసిತು. ಸುರಿಯುತಿದ್ದ ಮಳೆ, ತೆರೆದ ಕಿಟಿಕಿಯ ಎಡೆಯಿಂದ ಬಿಂದಿಗೆ ಬಿಂದಿಗೆಯಷ್ಟು ನೀರನ್ನು ಕೊಠಡಿಯೊಳಕ್ಕೆ ಚೆಲ್ಲಿತು.
      ಆತ ತೋಯದೆ ఇದ್ದರು ಪುಸ್ತಕಗಳಿಗೆ ಜಲಸೇಚನವಾಯಿತು.
      ಮೂರಲೀಧರ ಕಿಟಿಕಿ ಮುಚ್ಚಿದ. ಅಲ್ಲಿಯೇ ಹಗ್ಗ ದ ಮೇಲೆ ಒಣಗುತ್ತಿದ್ದ ಅಂಗವನ್ನಸ್ತ್ರ ತೆಗೆದು, ಒದ್ದೆಯಾಗಿದ್ದ ಪುಸ್ತಕಗಳನ್ನು ఒರೆಸಿದ.
      ಪುನಃ ಬಾగిల బళి నింತು, ಎದುರುಗಡೆಯಲ್ಲೆ  ఆಭಿಷೇಕ ಮಾಡಿಸಿಕೊಳ್ಳು   ತ್ತಿದ್ದ ವಿದ್ಯುತ್ ಕಂಬವನ್ನು ಆತ ದಿಟ್ಟಿಸಿದ.
      ಗುಡುಗು, ಮಿಂಚು, ಮಳೆ. ಎಲ್ಲವೂ ಸಮ್ಮಿಲಿತವಾಗಿದ್ದ ರಣ ಕೋಲಾಹಲ.
      ಮುದ್ದಣನ ಸಾಲುಗಳು ಮುರಲೀಧರನ ನೆನಪಿಗೆ ಬಂದುವು.
     'ಕಾಲಪುರುಷಂಗೆ ಗುಣಮಣಮಿಲ್ಲಂಗಡ'
      ಬಳಿಕ?