ಪ್ರವಚನಗಳಿಗೆ ಮುನ್ನ ಬರಿಯ ಮುಗುಳುನಗೆ. ಪಾಠಗಳು ನಡೆಯುತ್ತಿದ್ದಾಗ ಒಬ್ಬರನ್ನೊಬ್ಬರು ಕದ್ದು ನೋಡಿದ ಕಣ್ಣನೋಟ. ವಿರಾಮದ ವೇಳೆಯಲ್ಲಿ ಸಂಭಾಷಣೆ.
ಮುರಲೀಧರನೇ ಆರಂಭಿಸಿದ:
"ನಿಮ್ಮನ್ನು ನೋಡಿ ಒಂದು ಯುಗವಾಯ್ತು ಅನಿಸುತ್ತೆ. ಮೈಗೆ ಹುಷಾರಿಲ್ಲಿಲ್ವೆ?"
ಪ್ರಶ್ನೆಗಳನ್ನು ಕೇಳುತ್ತಿದ್ದ೦ತೆ, ಗೆಳೆಯನ ಮುಖಲಕ್ಷಣಗಳನ್ನು ಸೂಕ್ಷ್ಮವಾಗಿ ದ್ದಿಟ್ಟಿಸಿ ನೋಡುತ್ತ ಉತ್ತರವನ್ನೂ ಮುರಲೀಧರ ಹುಡಿಕಿದ.
ಎಂದಿನಂತೆಯೇ ಇತ್ತು ನಾರಣಪ್ಪನ ಆರೋಗ್ಯ.
"ನಾನು ಚೆನಾಗಿದೀನಿ ಮುರಲೀಧರ್. ನಮ್ಮ ಅಣ್ಣನನ್ನ ಅರೆಸ್ಟ್ ಮಾಡಿದ್ರು. ಹೀಗಾಗಿ__..."
ಅದೇ ಮೆಲುದನಿ, ಮಿತವಾದ ಮಾತು. బంಧನವೆ೦ದು ಉದ್ವೇಗವಿರಲಿಲ್ಲ.
'ಊಟ ತಡವಾಯ್ತು. ಹೀಗಾಗಿ___' ಎ೦ದ ಹಾಗೆ,
ಆದರೆ ಮುರಲೀಧರನ ಪಾಲಿಗೆ ಆ ಸುದ್ದಿ ಕಠೋರವೆನಿಸಿತು. ಧ್ವನಿ ಕಾತರ ಪೂರ್ನವಾಯಿತು.
"ಹೌದೆ? ನನಗೆ ಗೊತ್ತೇ ಇದ್ದಿಲ್ಲ, ಯಾವತ್ತು ಅರೆಸ್ಟಾಯ್ತು? ಪತ್ರಿಕೇಲಿ ಎನೂ ಬ೦ದೇ ಇಲ್ಲಲ್ಲಾ ...!"
"ಮೊನ್ನೆನೇ ಆಯ್ತು, ಪತ್ರಿಕೇಲಿ ಯಾಕೆ ಬರುತ್ತೆ ಹೇಳಿ? ನಮ್ಮಣ್ಣನೇನು ಪುಡಾರಿಯೆ?"
ನಮ್ಮಣ್ಣ ಎಂದಾಗಲೆಲ್ಲ ನಾರಾಣಪ್ಪನ ಸ್ವರ ತುಂಬಿಬರುತ್ತಿತ್ತು. ಒಡಹುಟ್ಟಿ ದವನ ವಿಷಯದಲ್ಲಿ ಎಷ್ಟೊಂದು ಗೌರವವಿತ್ತು ಆತನಿಗೆ...
ದಸ್ತಗಿರಿ ಎಂಬ ಪದ, ಮುರಲೀಧರನಿಗೆ ರಾಮಚಂದ್ರಯ್ಯನ ನೆನಪು ಮಾಡಿ ಕೊಟ್ಟಿತು. ಪೋಲಿಸರು ಕರಿಯ ಮೋಟಾರು ಬ೦ಡಿ. ಬ೦ದೂಕು, ಕೈಕೋಳ. ನಾರಣಪ್ಪನ ಅಣ್ಣ ಆ ಆವರಣದಲ್ಲಿ, ನೋಡಲು ಹೇಗಿರುವನೊ ಆತ? ನಾರಣಪ್ಪ ನ೦ತೆಯೇ...
"ನೀವು ನಿಮ್ಮಣ್ಣನ ಹೆಸರು ಹೇಳೇ ಇಲ್ಲ."
"ಮಲ್ಲೇಶಪ್ಪ ಅಂತ. ಆತನ ಹೆಸರು ಯಾರೂ ಕೇಳಿರೋದಿಲ್ಲ-ನನಗೆ ಗೊತ್ತು."
ಮನಸಿನೊಳಗೆ ರೂಪಗೊಂಡ ಪ್ರಶ್ನೆ ಸರಿಯೇ, ತಪ್ಪೆ, ಎಂಬ ಸಂದೇಹವಿದ್ದರೂ ಮಾತು ಮುರಲೀಧರನಿಂದ ಹೊರಬಿತ್ತು;
“ಯಾಕೆ ಅರೆಸ್ವಾಯ್ತು?"
ನಾರಣಪ್ಪ ಮುಗುಳುನಕ್ಕ.