ಪುಟ:ದೀಕ್ಷೆ.pdf/೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಒಡಲೋಳ್ ಗುಡುಗುಟ್ಟಗುಂಗಡ.' ಗುಡುಗುಟ್ಟುತ್ತಿರುವ ಒಡಲು!

      ಆಕಾಶದ ಜಲಪಾತ್ರೆಯನ್ನು ಕುಕ್ಕಿ ಸಹಸ್ರರಂದ್ರಗಳನ್ನು ಮಾಡಿದ ಹಾಗೆ. ಇಂದ್ರಲೋಕದ ಅಣೆಕಟ್ಟಗಳೆಲ್ಲ ಏಕಕಾಲದಲ್ಲೇ ಬಿರಿದು ನೀರು ಹೊರ ಹರಿದ          ಹಾಗೆ....
       ಛಾವಣಿ ತೊಟ್ಟಿಕ್ಕತೊಡಗಿತು!
       ಮಳೆಗಾಲದ ಸಂಕಟ ಇನ್ನು ಮುಗಿಯಿತು ಎಂದಿದ್ದ ಮುರಲೀಧರ. ಅದು ಮುಗಿಯಲಿಲ್ಲల. 'ನೋಡೋణ, ಈ ಮಳೆ ಬಹಳ ಹೊತ್ತು ಇರಲಾರದು'_ఎంబ ఆಸೆಯೊಂದಿತ್ತು, ಅದೂ ಹುಸಿಯಾಯಿತು. ಹೆಂಚುಗಳೆಡೆಯಿಂದ ನೀರು ಸುರಿಯಿ  ತೆಂದಮೇಲೆ_
        ಗಾಳಿ బలವಾಗಿ ಬೀಸಿತು, ಮತ್ತೊಂಮ್ಮೆ. బಲ್ಸೋನೆ ರೋಯ್ ರೊಯ್ಯೆಂದು ಕಿಟಕಿಗೆ ಬಡೆಯಿತು. ಧಡಾರನೆ ಮುಚ್ಚಿಕೊಂಡಿತು ಆರ್ಧಬಾಗಿಲು. ದೀಪ అತ್ತಿತ್ತ ತೂಗಾಡಿತು. ಅದನ್ನು ಅನುಸರಿಸಿ ನೆರಳೂ ಉಯ್ಯಾಲೆಯಾಡಿತು ಗೋಡೆಯ ಮೇಲೆ.  
         ಗಾಳಿ ಬೀಸುತ್ತಲೇ ಇದ್ದರೆ ಮೋಡಗಳು ಚೆದರಿ ಹೋಗುತ್ತವೆಂಬುದು ಮುರಲೀಧರನಿಗೆ ಗೊತ್ತಿತ್ತು. ಆದರೆ ಆ ರಾತ್ರೆ, ಎಂದೂ ಕುಂದದ ಅಕ್ಷಯ ಸೇನೆಯ     ಹಾಗೆ ಕಾರ್ಮೊಡಗಳು ದಟ್ವೈಸಿದ್ದುವು, ಗಾಳಿಯೇ ದುರ್ಬಲವಾಗಿತ್ತು, ಆಗಲೆ       ಕೈಸೋತು.
       ಕಿಟಕಿ ಮುಚ್ಚಿದರೇನಂತೆ, ಅದರ ಸ್ಂದಿಯಿಂದಲೇ ನೇರು ಧಾರೆ  ಕಟ್ಟಿ ಒಳಕ್ಕೆ ಬಂತು. ಅಂಗಳವಾಗಲೆ ಕೆರೆಯಾಗಿತ್ತು, ಬಾಗಿಲಿನೆದುರು.
        ಕೊನೆಯ ಕೊಠಡಿಯವನು ಹೇಳುತ್ತಿದ್ದ;
       "ಮಳೆಗಾಲದಲ್ಲಿ ಇಲ್ಲೊಂದು ದೋಣಿ ಬೇಕು ಕಣ್ರೀ!"
         ಅದನ್ನು ಕಾರ್ಯಗತಗೊಳಿಸಲು ಸಲಹೆಯೂ బంದಿತ್ತು.
       "ನಾವೇ ಕೊಂಡುಕೊ೦ಡು ತರೆಯೋಣ. ಹಣ, ಬಾಡಿಗೇಲಿ ಹಿಡಕೊಂಡ   ರಾಯ್ತು."
        ಕೆರೆ ಅಂಗಳದಲ್ಲಿ ಮಾತ್ರವಲ್ಲ. ಕೆಳಗೆ ಎಲ್ಲಾದರೂ ಒಮ್ಮೊಮ್ಮೆ ಚರಂಡಿ ಮುಚ್ಚಿಹೋಯಿತೆಂದರೆ, ಬೀದಿಯಲ್ಲಾ ನೀರು ನಿಲ್ಲುತಿತ್ತು. ಕೆಳಗೆ ದೂರದಲ್ಲಿದ್ದ          ಹೋಟೆಲಿನ ಬಾಗಿಲವರೆಗೂ ನೀರೆ ಆಗ.
         ಕೆರೆಯ ಬದಲು, ವಿಸ್ತಾರವಾದ ಸರೋವರ.
         ಹೆಂಚುಗಳೆಡೆಯಿಂದ ನೀರು. ಮೊದಲು ಒ೦ದೆಡೆಯಿ೦ದ, ಬಳಿಕ ಹಲವಾರು ಕಡೆಗಳಿಂ. ಮುಖ ತೊಳೆಯಲೆಂದು ನೀರು ತಂದಿಡುತ್ತಿದ್ದ ఒంದು బಕೀಟಿತ್ತು.         ನೀರು ಹೆಚ್ಚಾಗಿ ಸುರಿಯುತ್ತಿದ್ದ ಕಡೆ ಮುರಲಿ ಅದನ್ನಿರಿಸಿದ. ಪುಸ್ತಕಗಳಿದ್ದ ದೇವ      ದಾರು ಹಲಯ ಪೆಟ್ಟಿಗೆಯನ್ನು, ಸುರಕ್ಷಿತವೆಂದು ತಾನು ಭವಿಸಿದ್ದ ఒಂದು