ವಿಷಯಕ್ಕೆ ಹೋಗು

ಪುಟ:ದೀಕ್ಷೆ.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ದೀಕ್ಷೆ
373

ಸಂಜೆಯಾಗಿತ್ತು...
ಕೊಠಡಿ ತಲಪಿ, ತುಸು ವಿರಮಿಸಿದ ಬಳಿಕ, ಪಾಠ ಹೇಳುವ ಮನೆಯ ಕಡೆಗೆ ಮುರಲೀಧರ ಸಾಗಿದ.
ಮರಳಿ, ಊಟ ಮುಗಿಸಿ, ಪುಸ್ತಕಗಳತ್ತ ದೃಷ್ಟಿ ಬೀರಲು ಮುರಲೀಧರ ಯತ್ನಿಸಿದ. ಆಯಾಸವೆನಿಸಿತು.
ತೆರೆದ ಪುಸ್ತಕದೆದುರು ಹಾಗೆಯೇ ಕಣ್ಣ ಮುಚ್ಚಿ ಗೋಡೆಗೊರಗಿದ, ಆ ದಿನ ನಡೆದುದರ ಚಿತ್ರಮಾಲೆ ಮತ್ತೆ ಕಣ್ಣಿನೆದುರು ಸುಳಿಯಲಾರಂಭಿನಸಿತು.
ಪತ್ರಿಕೆಯ ಕಾರ್ಯಾಲಯದೊಡನೆ ತಾನು ನಡೆಸಿದ್ದ ಫೋನ್ ಸಂಭಾ‍‍‍‍‍‍‍ಷಣೆ....
ಮಾರನೆಯ ಬೆಳಗಿನ ಸಂಚಿಕೆಯಲ್ಲಿ ಆ ವಾರ್ತೆ ಪ್ರಕಟವಾಗುವುದು ಅಸಂಭವ ವಾಗಿರಲಿಲ್ಲ.
ಮಲ್ಲೇಶಪ್ಪನವರ ದಸ್ತಗಿರಿ....ದೊಡ್ಡ ಅಕ್ಷರಗಳಲ್ಲಿ ಪುಟದಗಲಕ್ಕೂ ಆ ಸುದ್ದಿ. ವಿವರಗಳು ಕಳಗೆ. ನಾರಣಪ್ಪನ ಹೆಸರು ಕೂಡ...
ಪತ್ರಿಕೆ ಮಾರುವ ಹುಡುಗರು ಕೂಗಿಕೊಳ್ಳುತ್ತ ಓಡಾಡಬಹುದು ಬೆಳಗ್ಗೆ :
"ಮಲ್ಲೇಶಪ್ಪನವರ ದಸ್ತಗಿರಿ! ರಾಷ್ಟ್ರವಾಣಿ-ಒಂದಾಣೆ!"
....ಚಿತ್ರಮಾಲೆ ಮುಗಿದರೂ ಕಣ್ಣುಗಳು ಮುಚ್ಚಿಯೇ ಇದುವು.
....ಬೂಟುಗಾಲುಗಳು ಸದ್ದುಮಾದಡಿದುವು. ಕೊನೆಯ ಕೊಠಡಿಯವನ ಸ್ವರ ಕೇಳಿಸಿತು:
“ರೀ ಮುರಲೀಧರ್! ದೀಪ ಉರಿಸ್ಕೊಂಡೇ నిದ್ದೆ ಹೋಗಿದೀರಲ್ರೀ...!"

  • ***

ಬೆಳಗ್ಗೆ ಎದ್ದವನೇ ಮುರಲೀಧರ ಮುಖ ತೊಳೆದುಕೊಂಡು ಬೀದಿಯ ಬళి ಹೋಗಿ ನಿಂತ. ಪತ್ರಿಕೆ ಮಾರುವ ಹುಡುಗರು ನಿಂತುಕೊಳ್ಳುತ್ತಿದ್ದ ಜಾಗ ಒಂದಿತ್ತು ఆల్లి.
'ರಾಷ್ಟ್ರವಾಣಿ' ಬಂತು, ಎಂದಿನಂತೆ. ಕೊಳ್ಳುವ ಗೊಡವೆಗೆ ಹೋಗದೆ ಮುರಲೀಧರ, ಒಬ್ಬರು ಕೊಂಡು ಓದುತ್ತಿದ್ದ ಪತ್ರಿಕೆಯತ್ತ ತಾನೂ ಇಣಿಕಿ ನೋಡಿದ. ಎಲ್ಲಿಯೂ ಏನೂ ಕಾಣಿಸಲಿಲ್ಲ.
ತನಗೆ ಅಂಟಿಕೊಂಡ ಎಳೆಯನನ್ನು ನೋಡಿ ವಯಸ್ಸಾದ ಆ ಮನು‌ಷ್ಯ ಅಂದರು.
"ಸ್ಕೋರ್ ನೋಡ್ತಿದೀಯೇನಪ್ಪಾ?"
"ಇಲ್ಲ ಸಾರ್. ಒಂದ್ನಿಮಿಷ ಪತ್ರಿಕೆ ಕೊಡ್ತೀರಾ?"
ಹುಬ್ಬು ಗಂಟಿಕ್ಕಿ ಅವರು ಪತ್ರಿಕೆ ಕೊಟ್ಟರು.
ಕಾಣಿಸಲೇ ಇಲ್ಲ ಆ ವಾರ್ತೆ....
...ಕಡೆಯ ಪುಟದಲ್ಲಿ ಒಂದು ಮೂಲೆಯಲ್ಲಿತ್ತು 'ಪೋಲೀಸ್ ಸುದ್ದಿಗಳು' ಎಂಬ ತಲೆಕೆಟ್ಟು.

‍‍‍