ಹೇಳಿದಳು:
"ಚಿಕ್ಕಪ್ಪ, ಊಟಕ್ಕೆ ಬರಬೇಕಂತೆ."
"ನನ್ನ ಊಟವಾಯ್ತು."
ಮಗು ಒಯ್ದು ಸುದ್ದಿಯನ್ನು ಒಳಗೆ ಯಾರೂ ಅಲ್ಲಗಳೆದಂತೆಯೇ ತೋರಲಿಲ್ಲ!
ಆದರೂ ಸ್ವಲ್ಪ ಹೊತ್ತಿನ ಬಳಿಕ ತಾಯಿ ನಿಧಾನವಾಗಿ ನಡೆಯುತ್ತ ಬಂದು ಕೇಳಿದರು:
"ಆಯ್ತೇನೋ ಊಟ?"
"ಆಯ್ತು," ಎಂದ ಮುರಲೀಧರ ಮೆಲ್ಲನೆ.
ಆ ದಿನ ಮನೆಯಲ್ಲಿ ಹಿರಿಯ ಸೊಸೆಯ ಅಡುಗೆ. ಕಣ್ಣಲ್ಲಿ ಎಣ್ಣೆ ಇಟ್ಟು ಪ್ರತಿ ಯೊಂದನ್ನೂ ಗಮನಿಸುತ್ತಿದ್ದ ಕಿರಿಯ ಸೊಸೆ ಹೇಳಿದಳು:
"ಇಲ್ಲ ಅತ್ತೆ, ಸುಮ್ನೆ ಹೇಳ್ತೀದಾರೆ. ಅವರು ಊಟ ಮಾಡಿಲ್ಲ."
ಕನಿಕರದಿಂದಲೂ ఆల్ల, ಸಹಾನುಭೂತಿಯಿಂದಲೂ ಅಲ್ಲ, ಆ ಮಾತು ಬ೦ದುದು. ಬರಿಯ ಮತ್ಸರ ಭಾವದಿಂದ. ಅದು ಗೊತ್ತಿತ್ತು ಮುರಲೀಧರನಿಗೆ. ಆ ತಿಳಿವಳಿಕೆ ಆತನ ಮನೋವೇದನೆಯನ್ನು ಹೆಚ್ಚಿಸಿತು.
ಆದರೆ ಸತ್ಯಾಂಶ ತಿಳಿದ ತಾಯಿ ಸಿಟ್ಟಾದರು.
“ಯಾಕೆ ಹೀಗ್ಮಾಡ್ಮೀಯೋ, ಏಳು. ಮುರಲಿ, ಏಳು!" ಎಂದರು ఆಕೆ.
"ಇಲ್ಲಮ್ಮ, ನನಗೆ ಹಸಿವಿಲ್ಲ."
ಹೆತ್ತ ಕರುಳಿಗೆ ಅರಿವಾಗದುದು ಯಾವುದಿತ್ತು? ಧ್ವನಿಯಿಂದಲೆ ಮಗನ ವುನೋ ಸ್ಥಿತಿಯನ್ನು అವರು ಊಹಿಸಿಕೊಂಡರು.
“ಹಾಗೆ ಮಾಡಬಾರದಪ್ಪಾ, ಏಳು, ಒಂದು ತುತ್ತು ಊಟ ಮಾಡುವಿಯಂತೆ. ನೋಡೋಕಾಗಲ್ಲಪ್ಪ ನಿನ್ನ. ಎಷ್ಟು ಸೊರಗಿದೀಯಾ! ಅದೇನು ಬೆಂಗಳೂರೋ, ಏನು ಕಾಲೇಜೋ..."
ಹಿಂದಿನ ಮಾತೃ ವಾತ್ಸಲ್ಯದ ನಾದ ಮಾಧುರ್ಯವಿನ್ನೂ ಉಳಿದಿದ್ದ ಸ್ವರ, ಗತ ಜನ್ಮದಲ್ಲಷ್ಟೆ ಇದನ್ನು ತಾನು ಕೇಳಿದ್ದೆನೇನೋ ಎಂದು ಭ್ರಮೆ ಹುಟ್ಟಿಸುವ ಹಾಗೆ.
ಎದ್ದು ಒಂದಿಷ್ಟು ಉಣ್ಣುವುದೇ ವಾಸಿ ಎಂದು ಮುರಲೀಧರ ಯೋಚಿಸು ತಿದ್ದಂತೆಯೆ,ಒಳಬಾಗಿಲಿನಿಂದ ತ್ಂದೆಯ ಗಡಸು ಸ್ವರವೂ ಕೇಳಿಸಿತು:
"ಮುರಲೀಧರ!! ಬಾ ಊಟಕ್ಕೆ!"
ಮುರಲೀಧರ ವಿಧೇಯನಾಗಿ ಎದ್ದ, ಯಾರಿಗೂ ಕಾಣಿಸದಂತೆ ಅಂಗವಸ್ತ್ರದಿಂದ ಕಂಬನಿಯೊರೆಸಿಕೊಂಡೆ.
ತಂದೆ ಮತ್ತು ಮಗ. ತಾತನ ಜತೆಯಲ್ಲಿ ಚಿಳ್ಳೆಪಿಳ್ಳೆ ಗಳೆರಡು. ಹಿರಿ ಮಗನ ದೊಂದು, ಎರಡನೆಯವನದೊ೦ದು. ಅವುಗಳೂ ಪರಸ್ಪರ ದ್ವೇಷಿಸಲೆಂದು ಮಕ್ಕಳ