ವಿಷಯಕ್ಕೆ ಹೋಗು

ಪುಟ:ದೀಕ್ಷೆ.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

396 ಕನಸು

  “ನಡೀರಿ, ಬಂದ್ದಿಟ್ಟೆ.”
  “ನನಗೆ ಚಿಲ್ಲರೆ ಬೇಕು. ಬಿಳ್ಕೊಡಿ,” ಎಂದು ನಾರಣಪ್ಪ ಕೈ ಚಾಚಿದ.
  “ದಯವಿಟ್ಟು ನಡೀರಿ.”
  ನಾರಣಪ್ಪ ಬಾಗಿಲನ್ನು ದಾಟಿದೊಡನೆ ಆತನಿಗೆ ಬೆನ್ನು ಹಾಕಿ, ಅಯ್ಯರ್ ಕುಳಿತಿದ್ದ ಕಡೆ ನಿಂತು, ಚೀಟಿಯನ್ನು ತೆರೆದ ಮುರಲೀಧರ. ಇಬ್ಬರು-ಹತ್ತಾಣೆ. ಕೈ,ಚಿಲ್ಲರೆ ಆಣೆಗಳನ್ನು ಹೊರತಂದು ಎಣಿಸಿತು.
  ತುಸು ಕಂಪಿಸಿದ ಧ್ವನಿಯಲ್ಲಿ ಮುರಲೀಧರನೆಂದ:
  “ಒಂದಾಣೆ ಕಮ್ಮಿ ಇದೆ ಕಿ, ಆಮೇಲೆ ಕೊಡ್ತೀನಿ.”
   ಎಂದೂ ಹಾಗೆ ಕೇಳಿದವನಲ್ಲ ಮುರಲೀಧರ, ಅಷ್ಟು ಮೊತ್ತದ ಬಿಲ್ಲನ್ನು ಪಡೆದವನೇ ಅಲ್ಲ ಆತ.
  “ಆಗಲಿ. ನೆನಪಿನಿಂದ ತಂದೊಡಿ, ಅಷ್ಟೆ,” ಎಂದ ಅಯ್ಯರ್.
   ಮುರಲೀಧರ ಸರಾಗವಾಗಿ ಉಸಿರಾಡುವಂತಾದುದು ಬೀದಿಗಿಳಿದಾಗ ಮಾತ್ರ.
   ಕೊಠಡಿಗೆ ಮರಳಿದ ಬಳಿಕ ನಾರಣಪ್ಪ ಕೇಳಿದ:
  "ಇದೇನು ಮುರಲಿ? ಗೋಡೆಗಳನ್ನೆಲ್ಲಾ ಬರಿದಾಗಿಯೇ ಇರಿಸಿದೀರಲ್ಲ?”
  “ಯಾರ ಚಿತ್ರ ತೂಗಹಾಕಲಿ ಹೇಳಿ? ಚಕ್ರವರ್ತಿಯವರನ್ನು ತೂಗೋಣ

ವೆಂದರೆ ನಾನು ರಾಜಭಕ್ತನಲ್ಲ. ಪುಢಾರಿಗಳಿಗೆ ಮೊಳೆ ಹೊಡೆಯೋಣವೆಂದರೆ ಅವರಲ್ಲಿ ಸಾಕಷ್ಟು ನಂಬುಗೆ ಇಲ್ಲ."

  “ಚೆನ್ನಾಗಿದೆ!”
  “ಸಂಬಂಧಿಕರದು ಯಾರದಾದರೂ ಇಡೋಣವೆಂದರೆ ಒಳ್ಳೆಯ ಭಾವಚಿತ್ರವೇ ಇಲ್ಲ..."
  “ಹೋಗಲಿ. ನಮ್ಮ ಮನೇಲಿ ಎರಡು ಕ್ಯಾಲೆಂಡರುಗಳಿವೆ. ಒಂದು ತಂದ್ಕೊಡ್ತೀನಿ.”
  “ಅದರಲ್ಲಿದೆಯೇನೋ ಚಿತ್ರ?”
  “ಇಲ್ಲವಪ್ಪ, ಬರೇ ತಾರೀಕು ಪಟ್ಟಿ.”
  “ಅಗಲಿ.”
  ಕುಳಿತುಕೊಳ್ಳುತ್ತ ನಾರಣಪ್ಪ, ಅರೆತೆರೆದಿದ್ದ ದಪ್ಪನೆಯ ಪುಸ್ತಕವನ್ನು

ನೋಡಿದ. ರಾತ್ರೆ ಅರ್ಧ ಓದಿ ಹಾಗೆಯೇ ಇರಿಸಿದ್ದ ದಿನಚರಿ ಪುಸ್ತಕ.

  “ಇಷ್ಟು ದೊಡ್ಡ ನೋಟ್ ಬುಕ್ ಯಾವುದು ಮುರಲಿ ಇದು?”
  ಮುರಲೀಧರನೆಂದ:
  “ಬೇಡಿ! ಓದ್ದೇಡಿ!”
  “ಓಹೋ! ಸಾಹಿತ್ಯಕೃತೀನೋ?”
  ಗೆಳೆಯನ ನಿಷೇಧವನ್ನು ಲೆಕ್ಕಿಸದೆ ಆ ಪುಸ್ತಕವನ್ನೆತ್ತಿಕೊಳ್ಳಲು 
 ನಾರಣಪ್ಪನ ಕೈ