ಪುಟ:ಧರ್ಮಸಾಮ್ರಾಜ್ಯಂ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧರ್ಮಣಮಾಮ್ [ಸಂಧಿ A/IAAAntint t+ ++++। st t n \ರ್n • • • + * * * *hts/ff hhhh ಮಾಡಲಿ? ವಿವಾಹ ಮಂಟಪದಲ್ಲಿ ಎಲ್ಲವೂ ಸಿದ್ಧವಾಗಿರುವುವು: ವರ ನಾದ ಅಭಿಪಾರಗನೂ ಬಂದು ಕುಳಿತಿರುವನು. ಒಳ್ಳೆಯದು! ನಾನೂ ಹೋಗಿ ಎನ್ನ ಪ್ರಯತ್ನ ಗಳನ್ನೆಲ್ಲ ಮಾಡಿ ಒಡಂಬಡಿಸುವೆನು. ” ಎಂದು ಉನ್ಮಾದಿನಿಯ ಬಳಿಗೈದಿ ವಿನಯಗೌರವಗಳಿಂದ:- 1 ವತ್ಸೆ ಉನ್ಮಾ ದಿನಿ! ಇದೇಕೆ ಓರ್ವಳೇ ಯೋಚಿಸುತ್ತ ಹೀಗೆ ಕುಳಿತಿರುವೆ ? ನಿನಗೊಂದು ಸಂತೋಷವಾರ್ತೆಯನ್ನು ತಂದಿಹೆನು ; ಅದನ್ನು ಕೇಳಿದ ಕ್ಷಣವೆ ನಿನ್ನ ಚಿಂತೆಗಳೆಲ್ಲಾ ತೊಲಗಿಹೋಗಿ ತೃಪ್ತಿಯ ಸಂತೋಷವೂ ಉಂಟಾಗು ವುವು. ?” ಎಂದು ಹೇಳಲು ಉನ್ನಾದಿನಿಯು ಕುತೂಹಲದಿಂದ:-( ಮಹಾರಾಜನು ಎನ್ನನ್ನು ಪರಿಗ್ರಹಿಸುವುದಾಗಿ ಏನಾದರೂ ತಿರಿಗಿ ಹೇಳಿ ಕಳುಹಿರುವನೆ ? ” ಎಂದು ಕೇಳಲು ಇಂದುಮತಿಯು, ಉನ್ಮಾದಿನಿಗೆ ಇನ್ನೂ ರಾಜನಲ್ಲಿಯೇ ನೆಲಸಿರುವ ಆಸೆಯನ್ನರಿತು ಆಶ್ಚರ್ಯಪಟ್ಟು, ಬಳಿಕ ತನ್ನ ಯತ್ನವು ವಿಫಲವಾದೀತೆಂಬ ಭೀತಿಯಿಂದ ಬೆದರಿ, ಮುಂದಣ ಕಾರ್ಯವನ್ನು ಸಫಲಗೊಳಿಸುವ ಉದ್ದೇಶದಿಂದ ಸಂತೋಷವನ್ನು ನಟಿ ಸುತ್ತ, ಅವಳನ್ನು ಕುರಿತಿಂತೆಂದಳು:- ( ಅದಕ್ಕಿಂತಲೂ ಹಿತವನ್ನು ಒಟ್ಟು ಮಾಡುವ ವಿಷಯ.” ಉನ್ಮಾದಿನಿ:- (ಕುತೂಹಲದಿಂದ) ಅದೇನು ? ?? ಎಂದು ಕೇಳಲು ಇಂದುಮತಿಯು ಉತ್ಸಾಹದಿಂದ:-« ರೂಪವೋ ಮನ್ಮಥನನ್ನು ಧಿಕ್ಕರಿಸುವುದು; ಆಭರಣಗಳೋ ಕುಬೇರನಲ್ಲಿಯ ಆಪ್ಟಿಲ್ಲ; ತೇಜಸ್ಕೋ ಸೂರ್ಯನನ್ನು ಹೀಯಾಳಿಸುವದು;ಬ್ರಹ್ಮಚರ್ಯದ ಅವಧಿಯೋ ಈಗತಾನೆ ಕಳೆದಿರುವುದು; ಪರಾಕ್ರಮವೋ ಕುಮಾರನ ಖ್ಯಾತಿಯನ್ನು ಮಂಕುಗೊಳಿಸಿರುವುದು, ವಿದ್ಯೆಯೇ ಸರಸ್ವತಿಗೆ ಗುರು ಸ್ಥಾನವಾಗಿಹುದು; ಅಯ್ಯೋ! ನಾನೇನೂ ಅಂದುಕೊಂಡಿರ್ದೆನು; ಮುಖ್ಯ ವಾಗಿ ಅವನು ನಿನ್ನನ್ನು ಮದುವೆಯಾದರೆ ನಿನ್ನ ಜನ್ಮವು ಸಾರ್ಥಕವಾಗು ವುದಲ್ಲದೆ, ನಿನ್ನನ್ನು ಪಡೆದ ನಾವುಗಳೂ ಧನ್ಯರೇ ಸರಿ, ಅವನನ್ನು ನೋಡಿದಾರಭ್ಯ ಎನ್ನ ಮತ್ತು ನಿನ್ನ ತಂದೆಯ ಹರ್ಷಕ್ಕೆ ಪಾರವೇ ಇಲ್ಲ ದಂತಾಗಿದೆ, ಜಾಗ್ರತೆಯಾಗಿ ಏಳು ಹೋಗೋಣ, ಅವನನ್ನು ನೋಡಿದ