ಪುಟ:ಧರ್ಮಸಾಮ್ರಾಜ್ಯಂ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಅಂಗ ೪೬ - , • • • •, +1 \ • 1 , 11 •\ \ \ \ 11 : 1 \ \ \\! ಕ್ಷಣವೇ ನೀನು ಪ್ರಪಂಚವನ್ನೇ ಮರೆತು ಬಿಡುವೆ; ಆ8 ! ಇಂತಹ ವರನು ಎಮ್ಮ ಭಾಗ್ಯೂ ದಯದಿಂದ ಲಭಿಸಿರುವನು. ” ಎಂಬಿವೇನೊದ ಲಾದ ಚತುರಾಲಾಪಪ್ರಯೋಗದಿಂದ ಸಂಮತಿಪಡಿಸುವುದಕ್ಕಪಕ್ರಮಿಸ ಲು, ಉನ್ಮಾದಿನಿಯು ಶಂಕೆಯಿಂದ:- : ಆವನಾರು?” ಎಂದು ಕೇಳಲು ಇಂದು ಮತಿಯು ಬೆಚ್ಚಿ ಬಳಿಕ ಕೈಯನ್ನು ಮೇಲಕೆತ್ತಿಕೊಂಡು ವಿಜೃಂ ಭಣೆಯಿಂದ: ಕಾಂಭೋಜಾಧಿಪತಿಯನ್ನು ಯುದ್ಧದಲ್ಲಿ ಈಗತಾನೆ ಜಯಿಸಿ, ಸೆರೆಗೊಂಡು ಬಂದಿರುವ, ಆ ಮಹಾಪರಾಕ್ರಮಿಯೆ! " ಎಂದು ಹೇಳಲು ಉನ್ಮಾದಿನಿಯು, ಮತ್ತಷ್ಟು ಸಂಶಯಗೊಂಡು ಬಳಿಕ ಕುತೂಹಲದಿಂದ:- ಇಷ್ಟೆಲ್ಲ ಗುಣಕಥನವನ್ನು ಮಾಡಿದೆಯಲ್ಲ, ಅವನ ಹೆಸರೇನು?” ಎಂದು ಕೇಳಲು ಇಂದುಮತಿಯು ಸ್ವಲ್ಪ ಹಿಂದೆಗೆದು, ಬಳಿಕ ಅಟ್ಟಹಾಸದಿಂದ: ಆಹಾಹಾಹಾ !!! ಏನೂ ತಿಳಿಯದವ ಳಂತೆ ಕೇಳುವೆ ? ಎಮ್ಮ ಮಹಾರಾಜನೂ ಅವನೂ ಕೂಡಿ ಒಂದೊಂದು ವೇಳೆ ಒಂದೇ ರಥದಲ್ಲಿಯೂ, ಇನ್ನೊಂದೊಂದುವೇಳೆ ಇಬ್ಬರೂ ಅಶ್ವಾರೂ ಢರಾಗಿಯ, ಒಟ್ಟಿಗೆ ಬೀದಿಗಳಲ್ಲಿ ತಿರುಗುವುದಿಲ್ಲ ವೆ, ಆ ಮುಖ್ಯಸೇನಾ ಪತಿಯಾದ ಅಭಿಪಾರಗನೇ! ಇನ್ನಾವ ಅನಾಮಧೇಯನೂ ಅಲ್ಲ.” ಎಂದು ಹೇಳಿದಳು. ಇದನ್ನು ಕೇಳಿದೊಡನೆಯೇ ಉನ್ಮಾದಿನಿಯು ಕಿವಿಗಳನ್ನು ಮುಚ್ಚಿಕೊಂಡು ಕುತಭಾವನೆಯಿಂದ:-ಛೇ ! ತೆಗೆ! ಇತರರ ನಾಮ ಗಳನ್ನು ಹೇಳಿ ಎನಗೆ ಕರ್ಣಶೂಲೆಯನ್ನು ಂಟುಮಾಡಬೇಡ; ನಿನಗೆ ಇನ್ನಾ ವಕಾರ್ಯವಾದರೂ ಇರ್ದರೆ ಅದನ್ನು ಕುರಿತು ದಯವಿಟ್ಟು ಇಲ್ಲಿಂದ ತೆರಳು; ಇದೊ ನಿನಗೆ ನಮಸ್ಕರಿಸುವೆನು. ” ಎಂದು ಹಾಗೆ ಮಾಡಿದಳು. ಇತ್ತಲಾಹೊತ್ತಿಗೆ ಸರಿಯಾಗಿ ಕಿರೀಟವನು ಇಲ್ಲಿಗೆ ಆತುರದಿಂದ ಪ್ರವೇಶಿಸಿ ಅಲ್ಲಿ ನಿಂತಿರ್ದ ತನ್ನ ಹೆಂಡತಿಯನ್ನು ಕುರಿತು ಕೋಪದಿಂದ;-II ನೀನೇನು ಹೆಂಗಸೋ? ಇಲ್ಲವೆ ಮರದ ತುಂಡೊ ? ಉನ್ಮಾದಿನಿಯನ್ನು