ಪುಟ:ಧರ್ಮಸಾಮ್ರಾಜ್ಯಂ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8ಂ ಧರ್ಮಸಾಮ್ರಾಜ್ಯಮ್ [ಸಂಧಿ vvvvvy 14 #\ v 41° ಮಾತ್ರವೆ ಉಳಿದಿವೆ ಹೀಗೆ ನೀನು ತಡಮಾಡಬಹುದೆ? ಬೇಗ ವಧುವನ್ನು ಪೀಠದಮೇಲೆ ಕುಳ್ಳಿರಿಸು. ” ಎಂದು ಹೇಳಲು ಕಿರೀಟವನು ಉನ್ಮಾ ದಿನಿಯನ್ನು ಪೀಠದಮೇಲೆ ಕುಳ್ಳಿರಿಸಿ ಅವಳು ಹಿಂದಕ್ಕೆ ಬಿದ್ದು ಹೋಗ ದಂತೆ ಹಿಡಿದುಕೊಂಡು ತಾನೂ ಹಿಂದೆ ಕುಳಿತುಕೊಂಡನು. ಆ ಬಳಿಕ ಅಭಿಪಾರಗನು ತನ್ನ ಪಾರ್ಶ್ವದಲ್ಲಿರುವ ಉನ್ಮಾದಿನಿಯ ದುರವಸ್ಥೆಯನ್ನು ನೋಡಿ, ಕಿರೀಟವತ್ಸನನ್ನು ಕುರಿತು ಶಂಕೆಯಿಂದ: (ಇದೇಕೀಕನೆಯು ಮೂರ್ಛಿತೆಯಂತೆ ಕಾಣುವಳು ?” ಎಂದು ಪ್ರಶ್ನೆ ಮಾಡಲು ಕಿರೀಟವನು ನಿಜವನ್ನು ಮಾಜಿ ಸುಳ್ಳಾದ ನಗೆಯಿಂದೊಡ ಗೂಡಿ:- ತನ್ನ ಗೆಳತಿಯರೊಡನೆ ಗಾನಮಾಡುತಿರ್ದಳು , ಅದನ್ನು ಬಿಟ್ಟು ಬರಲಾರದೆ ಮೂರ್ಖತ್ವವನ್ನು ಮಾಡಲಾಗಿ, ಸ್ವಲ್ಪ ಗಜರಿದೆನು. ಅದರಿಂದ ಅವಮಾನವೂ ಲಜ್ಜೆಯೂ ಉಂಟಾಗಿ ಈರೀತಿ ಮೂರ್ಛಿತೆಯಂತೆ ನಟಿಸುವಳು. ” ಎಂದು ಹೇಳಲು, ಇದಕ್ಕನುಸಾರವಾಗಿ ಪುರೋಹಿ ತನು:- ಹೆಣ್ಣು ಮಕ್ಕಳ ಸ್ವಭಾವವೇ ಅಷ್ಟು !” ಎಂದು ಬಳಿಕ ಅಭಿಪಾರಗನ ಕಡೆಗೆ ತಿರುಗಿ ಗಜಬಜಗುಟ್ಟುತ್ತ:- ಅಯ್ಯಾ ವರನೆ ! ಈಮಾಂಗಲ್ಯವನ್ನು ತೆಗೆದುಕೊಂಡು ಕನೈಯಕೊರಲಿಗೆ ಬೇಗನೆ ಕಟ್ಟು; ಮುಹೂರ್ತವು ಮೀರಿಹೋದೀತು. ” ಎಂದು ತ್ವರೆಪಡಿಸಲು ಅಭಿಪಾರ ಗನು ಅದರಂತೆಯೇ ಮಾಂಗಲ್ಯವನ್ನು ಬಂಧಿಸಿದ ಬಳಿಕ, ಆಕಸ್ಯೆಯ ಅಂಗವು ತಪಿಸುತ್ತಿರುವುದನ್ನು ಅರಿತು ಭೀತಿಯಿಂದ:- ಇದೇಕೀ ಕನೈಯ ಮೈ ಕಾಯುತ್ತಿಹುದು ? ಬಹು ಬಳಲಿ ಎಸ್ಕೃತಿಗೊಂಡಿರು ವಂತೆ ಕಾಣುವುದು! ಮುಂದಿನಕಾರ್ಯಗಳು ನಡೆಯುವ ಬಗೆ ಎಂತು??? ಎಂದು ಭೀತಿಪಡಲು ಪುರೋಹಿತನು ನಗುತ್ತ ಅಲಕ್ಷ್ಯದೊಡನೆ:- ಅದೇ ನು ಮಾಡುತ್ತೆ? ವಾಸಿಯಾದರೆ ಹೋಗುತ್ತೆ! ಹಾಗೆ ಮುಂದಿನ ಕಾರ್ಯ ಗಳು ಈಗ ಆಗದೇ ಇರ್ದರೂ, ಮುಂದೆ ಆವಾಗಬೇಕಾದರೂ ಮಾಡಿ ಕೊಳ್ಳಬಹುದು; ಸದ್ಯಕ್ಕೆ ಮಾಂಗಲ್ಯಧಾರಣವಾಯಿತಲ್ಲಾ, ಆಷ್ಟು ಸಾಕು; ಮೊದಲು ಕನ್ವಯನ್ನು ಒಳಕ್ಕೆ ಕರೆದು ಕೊಂಡುಹೋಗಿ ಜಾಗ