ಪುಟ:ಧರ್ಮಸಾಮ್ರಾಜ್ಯಂ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧) ಮೂರನೆಯ ಅಂಗ ಈn /VVyv VV/ » J J\\n\ov ತೆಯಿಂದ ಉಪಚರಿಸಿ. ” ಎಂದು ಹೇಳಲು ಅಲ್ಲಿಗೇ ವಿವಾಹ ಕಾರ್ಯ ವನ್ನು ಮುಗಿಸಿ ಕನೈಯನ್ನು ಕರೆದುಕೊಂಡು ಹೊರಟುಹೋದರು. ಎರಡನೆಯ ಅಂಗವು ಮುಗಿದುದು. ಮರನೆಯ ಅಂಗ. ಒಂದನೆಯ ಸಂಧಿ CHASTE LOVE REFLECTS EVEN IN DREAMS ಸಾಧೀವಿಲಾಸ ಬಳಿಕ ಮರುದಿವಸ ಕಿರೀಟವನ ಗೃಹದ ದಾದಿಯೋರ್ವಳು ಮರ್©ತೆಯಾದ ಉನ್ಮಾದಿನಿಯನ್ನು ಮಲಗಿಸಿರ್ದ ಚಂದ್ರಕಾಂತ ನಿರ್ಮಿತವಾದ ಕರುಮಾಡದಬಳೆಗೈದಿ, ಸುಮತಲ್ಪದಲ್ಲಿ ಪವಡಿಸಿರುವ ಉನ್ಮಾದಿನಿಯನ್ನು ನೋಡಿ ಚಿಂತೆಯಿಂದ:-( ಎಷ್ಟು ಉಪಚರಿಸಿದರೂ ಈ ಬಾಲಕಿಗೆ ಇನ್ನೂ ಎಚ್ಚರಿಕೆಯು ಉಂಟಾಗಲಿಲ್ಲವು ; ಪ್ರಾಣಕ್ಕೆ ಅಪಾಯವಾದರೆ ಇನ್ನೇನುಗತಿ? ಒಳ್ಳೆಯದು! ಈಕರವಸ್ತ್ರವನ್ನು ಪನ್ನಿರಿ ನಲ್ಲಿ ಅದ್ದಿ ಇವಳ ನೆತ್ತಿಯ ಮೇಲೆ ಹಾಕಿ, ಕಣ್ಣುಗಳಿಗೂ ಸ್ವಲ್ಪ ಸನ್ನಿ ರನ್ನು ತೊಡೆಯುವೆನು! ಎಂದು ಆತ್ಮಗತವಾಗಿ ಮಾತನಾಡಿಕೊಂಡು, ಹಾಗೆಯೇ ಮಾಡಿದಳು. ಆ ಬಳಿಕ ಉನ್ಮಾದಿನಿಯು ಮೆಲ್ಲನೆ ಕಣ್ಣೆರೆದೆದ್ದು ಕುಳಿತು ತಾನು ಅನುಭಿವಿಸುತಿರ್ದ ಸ್ವಪ್ನ ವೃತ್ತಾಂತವನ್ನು ಕುರಿತು ಆತ್ಮಗತವಾಗಿ ಈ ರೀತಿ ಜುಗುಪೈಯಿಂದ ಮಾತನಾಡಿಕೊಂಡಳು:- ಎನ್ನ ಸ್ವಷ್ಟ ಸುಖಕ್ಕೂ ವಿಘ್ನವುಂಟಾಗಬಹುದೆ? ನಾನೆಂತಹ ಹತಭಾಗ್ಯಳು! ಮಹಾರಾಜನು ಸಿಂಹಾಸನದಮೇಲೆ ಕುಳಿತು ಎನ್ನನ್ನು ಕುರಿತು ಕರುಣದಿಂದ;-'ಎಲ್