ಪುಟ:ಧರ್ಮಸಾಮ್ರಾಜ್ಯಂ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಅಂಗ ೫೫ ೨) \\ 11 # - 1 1 1 1 1 1 1 ಹೊರಟು ಹೋಗೋಣವೆಂದರೆ, ಈ ಯೌವನವೂ ಈ ಹಾಳು ರೂಪವೂ ಎನಗೂ ಎನ್ನ ವ್ರತಕ್ಕೂ ಮೃತ್ಯುಗಳ ೨ಗಿ ಪರಿಣಮಿಸುವವು; ಹಾ! ವಿಧಿ ಯೆ! ನಾನೀಗೇನು ಮಾಡಲಿ? ಸರ್ವಾ ಶೆಗಳೂ ಭಗ್ನವಾದುವ; ನಾನಿನ್ನು ಜೇವಿಸಿ ಫಲವೇನು? ಈಗೆನಗೆ ಮೃತಿಯೇ ಪಥ್ಯವ.'ಎಂದು ಪ್ರಲಾಪಿಸಿದ ಬಳಿಕ, ಅಲ್ಲಿರ್ದ ಮಾಧವೀಲತೆಯನ್ನು ತನ್ನ ಕೊರಳ್ಳಿ ಸುತ್ತಿಕೊಳುತ್ತ ದೇವಿಗೆ ತಲೆವಾಗಿ ನಮಿಸಿ, ನೇಣೆಳಲುಜ್ಜುಗಿಸುತ್ತಿರುವಲ್ಲಿ ದೇವೀ ಮಂದಿರದಿಂದ ಘನಗಂಭೀರವಾದ ಒಂದು ಸುನಾದವು ಥಟ್ಟನೆ ಕೇಳಿ ಸಿತು. - ಅಷ್ಟು ಹೊತ್ತಿಗೆ ಸರಿಯಾಗಿ ಇದೆಲ್ಲವನ್ನೂ ಮರೆಯೋಳೆ ನಿಂತು ನೋಡುತಿರ್ದ ಆ ದಾದಿಯು ವೇಗದಿಂದೋಡಿಬಂದು:_“ಹಾ ! ವತ್ಸೆ ದುಡುಕದಿರು: ದುಡುಕದಿರು!! ?” ಎಂದು ಅವಳ ಕೊರಳೊಳಿರ್ದ ಲತೆ ಯನ್ನು ತೆಗೆದು ಬಿಸುಟು, ಅವಳನ್ನು ತಕ್ಕೆಸಿ, ಪ್ರೀತಿಬಹುಮಾನಗಳಿಂ ದ: ಎಲ್‌ ಮಾನಿನಿ / ನಿನ್ನ ಸ್ವಪ್ನ ವಿಷಯವನ್ನು ಮರೆತೆಯಾ ? ನೀ ನು ಮಹಾಪತಿವ್ರತೆಯಾದುದರಿಂದ ನಿನ್ನ ಸ್ವಪ್ನ ಫಲವು ಸಿದ್ದಿ ಸುವುದು ! ಈರೀತಿ ಪ್ರಾಣವನ್ನು ತ್ಯಜಿಸುವುದು ಯುಕ್ತವಲ್ಲ... ನೀನಿಲ್ಲಿಯೇ ಬ್ರಹ್ಮ ಚರ್ಯೆಯಲ್ಲಿರ್ದು ದೇವೀವ್ರತವನ್ನಾಚರಿಸು; ನಿನ್ನ ಕೋರಿಕೆಗಳೆಲ್ಲವೂ ಕ್ಷಿಪ್ರದಲ್ಲಿಯೇ ಸಿದ್ಧಿಸುವುವು; ನಿನ್ನ ಪಾತಿವ್ರತ್ಯಕ್ಕೆ ಭಂಗವುಬಾರದಂತೆ ತಕ್ಕ ಉಪಾಯವನ್ನು ಮಾಡುವೆನು ! ಅದಲ್ಲದೆ ನೀನು ಅಸ್ವಸ್ಥೆಯಾಗಿ ರುವುದರಿಂದ ಅಭಿಪಾರಗನು ವಿವಾಹವನ್ನು ಪೂರೈಸುವುದಕ್ಕೆ ಯತ್ನ ವಿ ಲ್ಲವೆಂದು ನಿಶ್ಚಯಿಸಿ ಈದಿನ ಸೈನ್ಯ ಸಮೇತನಾಗಿ ಕಾಶ್ಮೀರದೇಶದ ಯದ್ದಕ್ಕೆ ಹೊರಟುಹೋಗುವನು; ಯುದ್ಧಕ್ಕೆ ಹೋದವನ ಮುಂದಿನ ಸ್ಥಿತಿಯನ್ನು ಹೇಗೆ ಹೇಳುವುದಕ್ಕಾದೀತು, ಹಾಗೆ ಅವನು ಉಳಿದು ಬಂದರೆ ಆಗ್ಗೆ ತಕ್ಕ ಉಪಾಯವನ್ನು ಮಾಡೋಣ ! ಪ್ರಕೃತದಲ್ಲಿ, ನೀನು ಬಾಲ್ಯದಿಂದಲೂ ಆಚರಿಸುತಿರ್ದ ಧರ್ಮದೇವೀವ್ರತವನ್ನು ಸಾಂಗಗೊಳಿ ಸುವವರೆಗೂ ಪುರುಷಸಂಪರ್ಕವನ್ನು ಮಾಡುವುದಿಲ್ಲ ಎಂಬುದಾಗಿಯೂ,