ಪುಟ:ಧರ್ಮಸಾಮ್ರಾಜ್ಯಂ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8L ಧರ್ಮಣಾಮ್ರಾಜ್ಯಮ್ [ಸಂಧಿ • • • • • •, .. P + + + + +1

\ \n

ಅದಾದ ಬಳಿಕ ಪತ್ನಿತ್ವವನ್ನು ಅವಲಂಬಿಸುವುದಾಗಿಯೂ ವರ್ತಮಾನ ವನ್ನು ಹುಟ್ಟಿಸಿ, ಈ ವಿಷಯವನ್ನು ನಿನ್ನ ಜನನೀಜನಕರಿಗೂ ತಿಳುಹು ವಂತೆ ಮಾಡಿ, ನಿನಗೆ ಆವ ಅಪಾಯವೂ ಉಂಟಾಗದಂತೆ ಮಾಡುವೆನು! ನೀನು ದುಃಖವನ್ನು ತ್ಯಜಿಸಿ ಸಮಾಧಾನಚಿತ್ತಳಾ ! ಎಂದು ಹೇಳಿ ಹೊರಟುಹೋದಳು. •°rweedes ಮೂರನೆಯ ಸಂಧಿ. ರಾಜಶಾಸನೋದ್ಯೋಪಣೆ ROYAL PROCLAMATION ಒಳಿಕ ಉನ್ನಾದಿನಿಯು ಅಲ್ಲಿಯೇ ಇರ್ದು, ದಾದಿಯು ಹೇಳಿದಂ ತೆಯೇ ಬ್ರಹ್ಮಚರ್ಯವ್ರತವನ್ನವಲಂಬಿಸಿ, ಪತಿಧ್ಯಾನದಲ್ಲಿಯೇ ಅನೇಕ ದಿನಗಳನ್ನು ಕಳೆದಳು, ಹೀಗಿರುವಲ್ಲಿ ಕ್ರಮಾಗತವಾದ ಕೌಮುದೀಮ ಹೋತ್ಸವವು ಮರುದಿನ ಪ್ರಾಪ್ತವಾಗುವುದನ್ನು ಗ್ರಾಮದ ತಳವಾರನು ಪುರವಾಸಿಗಳೆಲ್ಲರಿಗೂ ತಿಳಿಯಪಡಿಸುವ ಉದ್ದೇಶದಿಂದ ಪ್ರತಿಯೊಂದು ಬೀದಿಯಲ್ಲಿಯೂ ಸಾರಿಕೊಂಡುಬಂದು, ಈ ಉನ್ಮಾದಿನಿಯ ಗೃಹದಿದಿರಿ ನಲ್ಲಿಯ ತಂಬಟೆಯನ್ನು ಧ್ವನಿಗೆಯ್ಯುತ್ತ ದೃಷ್ಟತೆಯಿಂದ:- ಎಮ್ಮ ನಾಳುವ ಮಹಾರಾಜನು ಪ್ರತಿವತ್ಸರದಲ್ಲಿಯೂ ಪ್ರಾಪ್ತವಾದಂತೆ ಈ ವರ್ಷದಲ್ಲಿಯೂ ಪ್ರಾಪ್ತವಾಗುವ ಕೌಮುದೀಮಹೋತ್ಸವದಲ್ಲಿ, ತನ್ನ ಪ್ರಜೆಗಳ ಸುಕ್ಷೇಮವನ್ನೂ ಪ್ರರದ ರಾಮಣೀಯಕತ್ವವನ್ನೂ ನೋಡು ವುದಕ್ಕಾಗಿ ಈ ಪಟ್ಟಣದ ರಾಜವಧಿಗಳಲ್ಲಿ ಬಿಒಯಮಾಡುವನು ! ಆದಕಾರಣ ಪುರವಾಸಿಗಳೆಲ್ಲರೂ ತಂತಮ್ಮ ಗೃಹಗಳನ್ನು ಗುಡಿತೋರಣ ಪತಾಕೆಗಳಿಂದ ಪರಮದರ್ಶನೀಯ ವಾಗುವಂತೆ ಅಲಂಕರಿಸತಕ್ಕುದು ! ಮತ್ತು ಪ್ರಜೆಗಳಾದವರೆಲ್ಲರೂ ದಿವ್ಯವಸ್ತ್ರಭೂಷಣಗಳಿಂದ ಅಲಂಕೃತ