ಪುಟ:ಧರ್ಮಸಾಮ್ರಾಜ್ಯಂ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ • • • • • • • • • • • • • .

  • * * +1 \d V

1 # 01 - 1 2 3 41 1 , 1 # ಧರ್ಮಸಾಮ್ರಾಜ್ಯ [ಸಂಧಿ ಮಹಾರಾಜನ ದೃಷ್ಟಿಯನ್ನಾಕರ್ಷಿಸುವುದಕ್ಕೆ ನಾನು ಹೀಗಿರುವುದೇ ಯುಕ್ತವಾಗಿಹುದು ; ಏಕೆಂದರೆ, ಎನ್ನ ಪ್ರಾಣಪ್ರಿಯನು ಇತರ ರಾಜ ರಂತೆ ಬಾಹ್ಯಾಡಂಬರಕ್ಕೆ ಬೆರಗಾಗತಕ್ಕವನೂ ಅಲ್ಲ; ಧನಿಕರನ್ನು ಮಾತ್ರವೇ ಪುರಸ್ಕರಿಸತಕ್ಕವನೂ ಅಲ್ಲ, ಮುಖ್ಯವಾಗಿ ಅನಾಥರನ್ನೂ ದರಿ ದ್ರರನ್ನೂ ದುಃಖಿತರನ್ನೂ ಕಾಪಾಡುವ ಕಾರ್ಯವನ್ನೇ ತನ್ನ ಪರಮಧ ರ್ಮವನ್ನಾಗಿ ಅವಲಂಬಿಸಿರುವನು ; ಈ ವಿಷಯಗಳೆಲ್ಲವೂ ಲೋಕವಿದಿ ತವಾಗಿರುವುವು ; ಈ ಕಾರಣದಿಂದಲೇ ಈ ದಿನ ನಗರಯಾತ್ರೆಯನ್ನು ಮಾಡುವನು ; ಮತ್ತು ತನ್ನ ರಾಜ್ಯದಲ್ಲಿ ಜನರಿಗೆ ಆವವಿಧವಾದ ದುಃಖ ವೂ ಇರಕೂಡದೆಂಬುವದಕ್ಕಾಗಿಯೇ ಪ್ರತಿವರ್ಷವೂ ಉತ್ಸವವ್ಯಾಜದಿಂದ ಸಮಸ್ತ ಪ್ರಜೆಗಳನ್ನೂ ಗುಂಪುಗೂಡುವಂತೆ ಮಾಡಿ, ಅವರುಗಳಿಗೆ ದರ್ಶ ನವಯುವ ಮಧ್ಯಕಾಲದಲ್ಲಿ ತನ್ನ ಪ್ರಜೆಗಳ ಸುಖದುಃಖಸ್ಥಿತಿಗಳನ್ನು ತಾನೇ ತಿಳಿದುಕೊಳ್ಳನು ; ಆದಕಾರಣ ನಾನಿಲ್ಲಿ ದುಃಖಿಸುತ್ತ ನಿಂತಿರ್ದರೆ ಅದರ ಕಾರಣವನ್ನೂ ವಿಚಾರಿಸಬಹುದು; ಅನಂತರ ಎನ್ನ ಕಷ್ಟಗಳೆಲ್ಲವೂ ನಿವಾರಣವಾಗಲೂ ಬಹುದು.” ಎಂದು ಮಾತನಾಡಿಕೊಳ್ಳುತ್ತಿರುವ ಸಮಯಕ್ಕೆ ಸರಿಯಾಗಿ ಮಹಾರಾಜನು ದಿವ್ಯರಥದಲ್ಲಿ ಕುಳಿತು ಬರುತ್ತಿ ರುವುದನ್ನು ನೋಡಿ, ತಾನಾಗಿಯೇ ಉಕ್ಕಿ ಬರುತ್ತಿರುವ ದುಃಖವನ್ನು ಸಹಿಸಲಾರದೆ ಕಂಬನಿಗರೆಯಲಾರಂಭಿಸಿದಳು. ಇತ್ತಲಾ ದೇವಸೇನಮಹಾರಾಜನು ತನ್ನ ಪರದಲಂಕಾರವನ್ನು ನೋಡುತ್ತ ಹಾಗೆಯೇ ಇತ್ತ ತಿರುಗಲು, ಉನ್ಮಾದಿನಿಯ ಅಸಮವಾದ ಸೌಂದರ್ಯಪ್ರಭೆಯು ಅವನ ಚಿತ್ತಾಕ್ಷಿಗಳನ್ನು ದೂರದಿಂದಲೇ ಆಕರ್ಷಿ ಸಿತು. ಬಳಿಕ ದೇವಸೇನನು ಪರಮವಿಸ್ಮಿತನಾಗಿ ಅವಳನ್ನೇ ದಿಟ್ಟಿಸುತ್ತ ಆತ್ಮ ಗತವಾಗಿ:- [ತಾ:_ ಇವಳೇನು, ಸಾಕ್ಷಾತ್ ಆ ಕೌಮುದೀಲಕ್ಷ್ಮಿಯೊ ! ಪ್ರೊ| ಕಾಮುದೀ ಕಿಂ ಸ್ವಯಂ ಶಾಕ್ಕಾದೃವನಸ್ಯಾಸ್ಯ ದೇವತಾ || ಸ್ವರ್ಗಸ್ತ್ರೀ ದೈತ್ಯ ಯೋಷಿದ್ಧಾ ನ ಹೈತನ್ಮಾನುಷಂ ವಪುಃ |೨೦||