ಪುಟ:ಧರ್ಮಸಾಮ್ರಾಜ್ಯಂ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪) ಮೂರನೆಯ ಅಂಗ ೫೯ 111//*//11/\r\\r\ 13 117 #*# # # # # # 1 #1/\1 * * */*

  • * * \r\\+4 1 #\n\\r\'\#\n\'\011 hr\\h

ಅಥವಾ ಈ ಮನೆಯ ದೇವತೆಯೊ ! ಅಥವಾ ದೈತ್ಯಸ್ತ್ರೀಯೊ ! ಇಲ್ಲವೆ ಸ್ವರ್ಗಾoಗನೆಯೊ ! ಅಂತೂ ಈಕೆಯ ಅಂಗವಿಲಾಸವು ನಿಜವಾಗಿಯ ಮನುಷ್ಯ ಸಂಬಂಧವಾದುದಲ್ಲ !”. ಎಂದು ಆಶ್ಚರ್ಯಪಡುತ್ತಿರುವಲ್ಲಿ ರಥವು ಆ ಮನೆಯ ಸಮೀಪಕ್ಕೆ ಬರಲು ಅವಳನ್ನು ಚೆನ್ನಾಗಿ ನೋಡಿ ಶಂಕೆಯಿಂದ:- ಇದೇಕೀಕೆಯು, ಶರದಭ್ರದಿಂದ ಪರಿವೇಷ್ಟಿತವಾದ ಸಂಧ್ಯೆಯಂತೆ, ತನ್ನ ಅಂಗಸೌವರ್ಣ್ಯ ವನ್ನು ಈ ನಾರುಮಡಿಯಿಂದ ಮರೆಗೊಳಿಸಿಹಳು? ಮತ್ತು ದಾವಾಗ್ನಿ ಗೊ ಳಗಾದ ಕೋಮಲಲತೆಯಂತೆ ಕಂಬನಿಗರೆಯುದ್ದಿಹಳು ? ಇವಳನ್ನು ನೋಡಿದರೆ, ನಂದಸಿಂದ ಧಿಕ್ಯತೆಯಾದ ಆ ಸುಂದರಿಯನ್ನು ಪೋಲ್ವಳು ; ಇಷ್ಟಾದರೂ ಇವಳು ಅನಾಸ್ವಾದಿತಪಡ್ನಿನಿಯಂತಿರುವಳು , ಹೀಗಿರು ವಲ್ಲಿ ಇವಳ ದುಃಖಕ್ಕೆ ಕಾರಣವೇನಾಗಿರಬಹುದು !” ಎಂದು ತನ್ನಲ್ಲಿ ತಾನೇ ಮಾತನಾಡಿಕೊಳುತ್ತ ಅವಳನ್ನೇ ನೋಡುತ್ತಿರುವುದನ್ನು ಸಾರಥಿ ಯಾದ ಸುನಂದನು ನೋಡಿ ಭಯದಿಂದ:_ ಇದೇನೀಪ್ರಮಾದವು! ಮಹಾರಾಜನು ಈ ಕಿರೀಟವತ್ಸನ ಮಗಳನ್ನೇ ನೋಡುತ್ತಿಹನು; ಅದಕ್ಕೆ ತಕ್ಕಂತೆ ಇವಳ ರೂಪವೊ ಅತ್ಯಾಶ್ಚರ್ಯಕರವಾಗಿಹುದು ; ಇವಳೂ ಮಹಾರಾಜನನ್ನೇ ಪಾನಮಾಡುವಂತೆ ನೋಡುತ್ತಿರುವುದಲ್ಲದೆ ಮಗುಕ ವುಂಟಾಗುವಂತೆ ಅಳುತ್ತಲೂ ಇರುವಳು, ಮತ್ತು ಮಹಾರಾಜನುಎಲ್ಲರೂ ನೋಡುವಂತೆ ರಾಜಬೀದಿಯಲ್ಲಿ ಸುಂದರಿಯಾದೀಬಾಲಿಕೆಯನ್ನು ಈ ರೀತಿ ದೀರ್ಘದೃಷ್ಟಿಯಿಂದ ನೋಡುತ್ತಿರುವುದನ್ನು ಜನರು ಕಂಡರೆ ರಾಜ ನಲ್ಲಿ ಅವರಿಗೆ ಬಹುಲಾಘವವು ಉಂಟಾಗುವುದರಿಂದ ಇದು ರಾಜಮ ರ್ಯಾದೆಗೂ ನೀತಿಗೂ ಕೇವಲ ವಿರುದ್ಧವು ; ಅದಲ್ಲದೆ ಮಹಾರಾಜನು ಇನ್ನೂ ತರುಣನು ; ಇದಾದರೂ ಬಾಲಯುವತಿಯ ಸಂದರ್ಶನವ; ಆದಕಾರಣ ಬೇಗನೆ ರಥವನ್ನು ಮುಂದುವರಿಸುವುದೇ ಈಗ್ಗೆ ಯುಕ್ತವು. ಎಂದು ರಥಾಶ್ವಗಳನ್ನು ವೇಗಗೊಳಿಸಿದನು. ಬಳಿಕ ಮಹಾರಾಜನು, ಆತುರದಿಂದ:-ಸುನನ್ದನೆ! ರಥವನ್ನು