೬೨ An/ thAfffih 211 • • • • • •••• AfghestsAnnlv/shav ಧರ್ಮಸಾಮ್ರಾಜ್ಯಮ್ [ಸಂಧಿ ನು; ಈಕೆಗಿಂತಲೂ ಅನುರೂಪೆಯಾದ ಕನೈಯು ಭುವನತ್ರಯದಲ್ಲಿ ಹು ಡುಕಿದರೂ ಎನಗೆ ಲಭಿಸುವಳೆ? ತಾನಾಗಿಯೇ ಒಲಿದು ಬಂದಿರ್ದಾರ ಧಿಕ್ಕರಿಸಿ, ಈಗ ಲಜ್ಜೆಯಿಲ್ಲದೆ ಹೇಗೆ ಪುನಃ ಅಪೇಕ್ಷಿಸಲಿ ? ಬಾಲ್ಯದಾ ರಜ್ಞೆ ಆಕೆಗೆ ಎಲ್ಲಿಯೇ ಅನುರಾಗವಿರ್ದುದರಿಂದಲೇ ಎನ್ನನ್ನು ನೋಡು ವಲ್ಲಿ ಅಳುತಿರ್ದಳು, ಹಾ! ಎಂತಹ ಅಚಾತುರ್ಯವಾಯಿತು !” ಎಂದು ಪಶ್ಚಾತ್ತಾಪಪಡುತ್ತಿರುವ ಸಮಯಕ್ಕೆ ಸರಿಯಾಗಿ ರಾಜಕಾರ್ಯಗಳ ನಿಯಮಿತಕಾಲಗಳನ್ನು ಸೂಚಿಸುವ ಘಂಟೆಯ ಢಣ್ ಢಣ್ ' ಎಂಬ ತೀವ್ರಶಬ್ದ ವಾಗಲು ಮಹಾರಾಜನು ಅಸಹ್ಯಭಾವದಿಂದ:- [೨೦.ತಾ:-“ ಎನ್ನ ಮನವು ಆಕೆಯ ಅಂಗವಿಲಾಸವನ್ನೂ ಮುಖ ಭಾವವನ್ನೂ ದೃಂಗ್ಯಾಧುರ್ಯವನ್ನೂ ಸ್ಮರಿಸುತ್ತ ನಿಶ್ಚಲತ್ವವನ್ನು ಹೊಂದಿ ರುವಲ್ಲಿ ಈ ಹಾಳುನಾಳಿಕೆಯು ಕರ್ಣಕಠೋರವಾದ ಶಬ್ದವನ್ನು ಮಾಡುವುದರಿಂದ ಎನಗೆ ಕೋಪವನ್ನು ಪ್ರೇಕಿಸುವುದು !” ] ಎಂದು ಖಿನ್ನನಾಗಿ ಬಳಿಕ ಒಂದು ಕ್ಷಣ ಯೋಚಿಸಿ:'ಆಪ್ತರೊ ಹಿತಸ್ತ್ರೀಲಕ್ಷ್ಮಜಣ್ಣರು ಎನ್ನನ್ನು ಮೋಸಗೊಳಿಸಿರಬಹುದೆ?, ಹಾಗೆ ಊಹಿ ಸಲು ಅವಕಾಶವಿಲ್ಲ; ಏಕೆಂದರೆ, ಅವರು ಧರ್ಮಪರಾಯಣರು ; ಮತ್ತು ಹಿಂದಾವವಿಧವಾದ ಕೃತ್ರಿಮವನ್ನೂ ಎನ್ನಲ್ಲಿ ಎಸಗಿಲ್ಲ, ಆದಕಾರಣಇದು ದೈವವೈಚಿತ್ರವಾಗಿರಬೇಕು, ಇಷ್ಟಾದರೂ ಎನ್ನ ಮನವು ವಿಷಾದದಿಂದ ನೋಯುವುದು ; ಅಯ್ಯೋ ! ಎನಗೆ ಸುಖವನ್ನೂ ಸಂತೋಷವನ್ನೂ ಉಂಟುಮಾಡುವ ಸದುದ್ದೇಶದಿಂದ ಎನ್ನಲ್ಲಿಗೆ ಬಂದ ಸಭ್ಯನಾದ ಆಕಿರೀ ಟವತ್ಸನಿಗೆ ಮನ್ನಣೆಯನ್ನು ಮಾಡುವುದಕ್ಕೆ ಪ್ರತಿಯಾಗಿ ಅವಮಾನ ವನ್ನೂ ದುಃಖವನ್ನು ಉಂಟುಮಾಡಿದೆನಲ್ಲಾ ! ಈಗೇನು ಮಾಡಲಿ ? ಈ ದುಃಖವನ್ನೆಂತು ಮರೆಯಲಿ ? ಹಾ ! ದುಷ್ಟ ವಿದಿಯೆ !” ಎಂದು ವಿಷಾದಪಡುತ್ತಿರುವಲ್ಲಿ ಪಾಕಶಾಲಾಧ್ಯಕ್ಷನು ರಾಜನಲ್ಲಿಗೆಬಂದು ಕೈಮು ತಸ್ಯಾ ವಪುರ್ವಿಲಸಿತಸ್ಮಿತಪೀಕ್ಷಿತೇಷು ಸಂರಾಗನಿಶ್ಚಲವತಃ ಸಹಸಾ ಸ್ವನ | ಕಾರ್ಯೋ೦ತರಕ್ರಮನಿವೇದನಧೃಷ್ಟತಾ ವಿದೇಹಮುತ್ತುದುಚೇತಸಿನಾಲಿಕಾಮೆ?
ಪುಟ:ಧರ್ಮಸಾಮ್ರಾಜ್ಯಂ.djvu/೧೧೮
ಗೋಚರ