ಪುಟ:ಧರ್ಮಸಾಮ್ರಾಜ್ಯಂ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಅಂಗ ೬೩ PS PP + + ೨ \ \r\ \'\ \ \'\r\ \ , * * * * * #1 # ಗಿ' , 1 \ \ \ "\ r ಗಿದು:- ಜೀಯಾ!ಭೋಜನಕಾಲವು ಮೀರಿ ಬಹುಹೊತ್ತಾಯಿತು; ನಿನ್ನಾಗಮನವನ್ನು ನಿರೀಕ್ಷಿಸುತ್ತ ರಾಜಕುಲದವರು ಊಟವಿಲ್ಲದೆ ಕುಳಿ ತಿಹರು; ಬೇಗ ಬಿಚಯಮಾಡವನಾಗು. ” ಎಂದು ಪ್ರಾರ್ಥಿಸಲು ಮಹಾರಾಜನು ಜುಗುಸೈಯಿಂದ: _“ ಒಳ್ಳೆಯದುಬರುವೆನು ನಡೆ.” ಎಂದು ಅವನನ್ನು ಕಳುಹಿದ ಬಳಿಕ ತನ್ನಲ್ಲಿತಾನೇ:_“ ಎನ್ನಿಂದ ಇತರ ರಿಗೇಕೆ ಹಿಂಸೆಯುಂಟಾಗಬೇಕು? ನಾನೂ ಹೋಗಿಬಂದ ಶಾಸ್ತ್ರವನ್ನು ಮಾ ಡುವೆನು. ಎಂದು ವ್ಯಸನದಿಂದ ಭೋಜನಶಾಲೆಗೆ ಹೊರಟುಹೋದನು. ಅರನೆಯ ಸಂಧಿ. THE PREVALENCE OF UNRIGHTEOUSNESS. ಅಧರ್ಮಪ್ರವೇಶ ಬಳಿಕ ದೇವಸೇನಮಹಾರಾಜನು ಪಶ್ಚಾತ್ತಾಪದಿಂದ ಕೊರಗಿದವ ನಾಗಿ, ಇದರಂತೆಯೇ ಅನ್ನ ಪಾನಾದಿಗಳಲ್ಲಿಯ ರಾಜಕಾರ್ಯಗಳ ಲ್ಲಿಯ ಉಪೇಕ್ಷೆಯನ್ನು ಹೊಂದಿ ದಿನೇದಿನೇ ಕ್ಷಯಿಸುತ್ತಿರುವ ದೇಹ ಧೈರ್ಯಗಳುಳ್ಳವನಾಗಿ, ಏಕಾಕಿಯಾಗಿಯೇ ವಾಸಮಾಡಲುಪಕ್ರಮಿ ಸಿದನು. ಇತ್ತಲಾ ದೇವೇಂದ್ರನೇ ಮೊದಲಾದ ದೇವತೆಗಳು ಈರಾಷ್ಟ್ರ ದಲ್ಲಿ ತಮ್ಮ ಕೃತಿವಾದಿಗಳನ್ನು ಪ್ರಯೋಗಿಸಿ ತದ್ಧಾರ ಈ ರಾಜನನ್ನೂ ಇವನ ಪ್ರಜೆಗಳನ್ನೂ ಪಾಪಕಾರ್ಯಾಸಕ್ತರನ್ನಾಗಿಮಾಡಿ ನಾಶಪಡಿಸಲು ಇದೇ ಸಕಾಲವೆಂದು ಭಾವಿಸಿ, ಇತರದೇಶದ ಅನಾರ್ಯರಿಗೆಲ್ಲ ದುರಾ ಶೆಯನ್ನು ಂಟುಮಾಡಲಾಗಿ, ಅವರುಗಳು ಈ ರಾಷ್ಟ್ರವನ್ನು ಪ್ರವೇಶಿಸಿ ಕ್ರೂರಕರ್ಮಗಳನ್ನೂ ಘಾತುಕತ್ವವನ್ನೂ ಮಾಡಲಾರಂಭಿಸಿದರು. ಬಳಿಕ ತಾವೂ ತಮ್ಮ ತಮ್ಮ ದುಷ್ಪಭಾವಗಳನ್ನು ಪ್ರಯೋಗಿ