ಪುಟ:ಧರ್ಮಸಾಮ್ರಾಜ್ಯಂ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L೪ ಧರ್ಮಸಾಮಾಜ್ಯಮ್ [ಸಂಧಿ • • ••• , , , , , , , , , , P + ? P\ # + fihr ಸಲುಪಕ್ರಮಿಸಿದರು. ಹೀಗಾಗಲು ಈ ರಾಷ್ಟ್ರದಲ್ಲಿ ಎಲ್ಲೆಲ್ಲಿ ನೋಡಿ ದರೂ ಕೊಲೆಯ, ಚೌರ್ಯವೂ, ಗೋಹವೂ ದಿನಕ್ರಮೇಣ ಪ್ರಬಲಿ ಸಲುಪಕ್ರಮಿಸಿದುವು. ಹೀಗಿರುವಲ್ಲಿ ಒಂದು ದಿನ ಈ ರಾಜಧಾನಿಯ ವಾಸಸ್ಥನಾಗಿಯೂ ಧನಿಕರಲ್ಲಿ ಅಗ್ರಗಣ್ಯನಾಗಿಯೂ ರಿಕ್ರಾನಾಥರಿಗೆ ಆಶ್ರಯಭೂತನಾಗಿಯ ಧರ್ಮಪರಾಯಣನಾಗಿ ಇರ್ದ ವೈಶ್ಯ ಕುಲತಿಲಕನಾದ ದಾಯಕಶ್ರೇಷ್ಟಿ ' ಎಂಬುವನ ಮನೆಗೆ ಇತರ ದೇಶದ ಚೋರರು ಪ್ರವೇಶಿಸಿ, ಅವನ ಮನೆಯಲ್ಲಿರ್ದ ಸಮಸ್ತ ವಸ್ತುಗಳನ್ನೂ ಅಪ ಹರಿಸಿಬಿಟ್ಟಿರ್ದರು. ಆ ಶ್ರೇಷ್ಟಿಯು ಪ್ರಭಾತದ ಪ್ರಕ್ಯೂಷ ಸಮಯದಲ್ಲಿ ನಿದ್ರೆಯಿಂದೆದ್ದು ನೋಡುವಲ್ಲಿ, ಒಂದು ಹಗ್ಗದ ಶಿಂಬಿಯ ಮತ್ತೊಂದು ದಾತ್ರವೂ (ಕುಡುಗೋಲೂ) ಮಾತ್ರವೇ ಇರ್ದಿತೇ ಹೊರತು ಮತ್ತೊಂದು ವಸ್ತುವೂ ಗೋಚರಿಸದೇ ಇರಲು ಚಿಂತಾಕ್ರಾಂತನಾಗಿ ವ್ಯಸನದಿಂದ:- « ಹಾ ! ವಿಧಿಯೇ ! ಇದುವರೆಗೂ ಎಮ್ಮ ರಾಜ್ಯದಲ್ಲಿ ಪ್ರಜೆಗಳಿಗೆ ಆವು ದೊಂದು ಉಪದ್ರವವೂ ಇರಲಿಲ್ಲ; ಈಗ ಎಲ್ಲೆಲ್ಲಿ ನೋಡಿದರೂ ಚೌರ್ಯ ವು ಪ್ರಬಲಿಸಿ ಅನೇಕರ ಮನೆಗಳು ಹಾಳಾಗಿಹೋದುವು; ಎನ್ನ ಮನೆ ಯಲ್ಲಾದರೋ ಈ ಹಗ್ಗ ವನ್ನೂ ಈ ದಾತ್ರವನ್ನೂ ಮಾತ್ರವೇ ಬಿಟ್ಟು ಉಳಿದ ಎನ್ನ ಧನವನ್ನೆಲ್ಲ ಅಪಕರಿಸಿಕೊಂಡು ಹೋಗಿರುವರು. ಈಗ ನಾನೇನು ಮಾಡಲಿ ? ಎನ್ನಿಧನವು ಅನ್ಯದೇಶದ ದರಿದ್ರರಿಂದ ಅಪಹರಿಸ ಲ್ಪಟ್ಟಿದರೆ ಅದು ಸೂಪಯುಕ್ತವೇ ಆಯಿತು ; ಹಾಗಲ್ಲದೆ ಎನ್ನ ಧನೋ ಚ್ಛಯವನ್ನು ನೋಡಿ ಸಹಿಸಲಾರದ ದುಷ್ಟರಿಂದೇನಾದರೂ ಅಪಹರಿಸ ಲ್ಪಟ್ಟಿರ್ದಲ್ಲಿ ಅದುಮಾತ್ರ ಎನಗೆ ಮಹಾದುಃಖವನ್ನುಂಟುಮಾಡುವುದು ; ಒಳ್ಳೆಯದು! ಈ ವಿಷಯವನ್ನು ರಾಜದೂತರಿಗೆ ತಿಳುಹುವೆನು.” ಎಂದು ಆ ರಜ್ಜುದಾತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಮನೆಯನ್ನು ಬಿಟ್ಟು ಸ್ವಲ್ಪ ದೂರ ಹೋದನು. * ಅಷ್ಟು ಹೊತ್ತಿಗೆ ಸುಯಾಗಿ ಇವನಿದಿರೆಗೆ ಬರುತಿರ್ದ ಪತ್ನಿಪುತ್ರ ರಿಂದ ಸಮೇತನಾದ ಶೀಲಾಸನನೆಂಬ ಒಬ್ಬ ಬಡಬ್ರಾಹ್ಮಣನು ದುಃಖಿ